ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರ ಕ್ಷೇತ್ರ ಶಿವಾಜಿನಗರ.
ವಿಧಾನಸೌದ, ರಾಜಭವನವನ ಈ ಕ್ಷೇತ್ರದ ಬಯಲಿನಲ್ಲಿದೆ. ವಿಶಾಲ ರಸ್ತೆಗಳು ,ಮೆಟ್ರೋ ಆಸ್ಪತ್ರೆ ಸೇರಿದಂತೆ ಹತ್ತಾರು ಕಚೇರಿಗಳು ಈ ಭಾಗದಲ್ಲಿವೆ. ಆದರೆ ಶಿವಾಜಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿಯಾಗಿಲ್ಲ.
ರಾಮಸ್ವಾಮಿ ಪಾಳ್ಯ, ಜಯಮಹಲ್, ಹಲಸೂರು, ಭಾರತಿ ನಗರ, ಶಿವಾಜಿ ನಗರ, ವಸಂತ ನಗರ, ಸಂಪಂಗಿರಾಮನಗರ ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಗಳು.
ನಿಮಗೆ ನೆನಪಿರಬಹುದು? ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ, ಜೆ.ಸಿ ನಗರ ಸಂತೋಷ್ ಕೊಲೆ ವಿಚಾರವಾಗಿ ಈ ಭಾಗದಲ್ಲಿ ದೊಡ್ಡಮಟ್ಟಿನ ಪ್ರತಿಭಟನೆ ನಡೆದಿತ್ತು. ಈ ಬಾರಿಯ ಚುನಾವಣೆಯಲ್ಲಿ ಈ ಕೊಲೆಗಳು ಅತೀ ಹೆಚ್ಚು ಚರ್ಚೆಗೆ ಗ್ರಾಸವಾಗೋ ಲಕ್ಷಣಗಳಿವೆ.
ಕಳೆದ ಚುನಾವಣೆಯಲ್ಲಿ ರೋಷನ್ ಬೇಗ್ 20,855 ಮತಗಳ ಅಂತರದಿಂದ ಗೆದ್ದಿದ್ದರು. ಇವರು 49,649 ಮತಗಳನ್ನು ಗಳಿಸಿದ್ದರು. ಪ್ರತಿಸ್ಪರ್ಧಿಗಳಾದ ಬಿಜೆಪಿ ನಿರ್ಮಲ್ ಕುಮಾರ್ 28, 794, ಜೆಡಿಎಸ್ ಮ ಅಬ್ಬಾಸ್ ಅಲಿ ಬೊಹ್ರಾ 5,983 ,ಕೆಜೆಪಿಯ ಐ ಆರ್ ಪೆರುಮಾಳ್ 2, 869ಮತಗಳಿಸಿದ್ದರು.
ಕಳೆದ ಬಾರಿ ಸೋಲನುಭವಿಸಿರುವ ನಿರ್ಮಲ್ ಕುಮಾರ್ ಸುರಾನಾ ಈ ಸಲ ಸ್ಪರ್ಧಿಸುವುದಿಲ್ಲ. 1999 ಮತ್ತು 2004ರಲ್ಲಿ ಎರಡು ಬಾರಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಈ ಬಾರಿ ಶಿವಾಜಿ ನಗರದಿಂದಲೇ ಕಣಕ್ಕಿಳಿಯುತ್ತಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆ ವೇಳೆ ಹೆಬ್ಬಾಳಕ್ಕೆ ವಲಸೆ ಹೋಗಿದ್ದ ಇವರು ಶಿವಾಜಿನಗರಕ್ಮೆ ವಾಪಾಸ್ಸಾಗಿದ್ದು, ರೋಷನ್ ಬೇಗ್ ಗೆ ಪ್ರಬಲ ಪೈಪೋಟಿ ನೀಡುವುದುದಂತೂ ಖಂಡಿತಾ. ಈ ಮೂಲಕ ರಾಜಕೀಯ ಮರಯಜನ್ಮದ ಕನಸು ಸಹ ಕಾಣ್ತಿದ್ದಾರೆ ಕಟ್ಟಾ.
ಮಾರುಕಟ್ಟೆ ಭಾಗದಲ್ಲಿ ಮುಸ್ಲೀಂರ ಸಂಖ್ಯೆ ಹೆಚ್ಚಿದ್ದು ಇವರ ಮತ ನಿರ್ಣಾಯಕ ಪಾತ್ರವಹಿಸಲಿದೆ.