ಗಣೇಶ ವಿಸರ್ಜನೆ ವೇಳೆ ದೋಣಿ ದುರಂತ: ಮುಗಿಲು ಮುಟ್ಟಿದ ಆಕ್ರಂದನ.

Date:

ತುಂಗಭದ್ರಾ ನದಿಯಲ್ಲಿ ನಡೆದ ದೋಣಿ ದುರಂತದಲ್ಲಿ 12 ಮಂದಿ ನೀರು ಪಾಲಾದ ಘಟನೆ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿಯಲ್ಲಿ ಬುಧವಾರ ಸಂಭವಿಸಿದೆ. ಗಣೇಶ ವಿಸರ್ಜನೆಗೆಂದು ತೆರಳಿದ್ದ ಭಕ್ತರು ಕೇವಲ ಐದರಿಂದ ಆರು ಜನ ಪ್ರಯಾಣಿಸಬಲ್ಲ ತೆಪ್ಪದಲ್ಲಿ 20ಕ್ಕೂ ಅಧಿಕ ಜನ ತೆರಳಿದ್ದಾರೆ. ತೆಪ್ಪ ನದಿ ನಡು ಭಾಗದಲ್ಲಿ ಮುಳುಗಲು ಆರಂಭಿಸಿದೊಡನೆಯೇ ಪ್ರಾಣ ರಕ್ಷಣೆಗಾಗಿ ಕೆಲವರು ದೋಣಿಯಿಂದ ಜಿಗಿದಿದ್ದಾರೆ. ನೋಡು ನೋಡುತ್ತಿದ್ದಂತೆ ದೋಣಿ ನೀರಿನಲ್ಲಿ ಮುಳುಗಿ ಬಿಟ್ಟಿದೆ. ಕೆಲವರು ಈಜಿಕೊಂಡು ದಡ ಸೇರಿದರೆ ಇನ್ನೂ ಕೆಲವರು ನಡು ನೀರಿನಲ್ಲಿ ಮುಳುಗಿ ಹೋಗಿದ್ದಾರೆ. ಘಟನೆಯಲ್ಲಿ ಸುಮಾರು 12 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು ಈಗಾಗಲೇ 8 ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಉಳಿದ ಶವಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕೋಲಾರದ ನುರಿತ ಮುಳುಗು ತಜ್ಞರು ಸ್ಥಳಕ್ಕೆ ಆಗಮಿಸಿದ್ದು ಇಂದು ಮುಂಜಾನೆ ಮತ್ತೋರ್ವ ಮೃತ ದೇಹವನ್ನು ಹೊರ ತೆಗೆಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜನ ಸಾಗರವೇ ಹರಿದು ಬಂದಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

https://youtu.be/LiFS6mGmHSw

 

POPULAR  STORIES :

ರಕ್ತದಲ್ಲಿ ಕಾವೇರಿ ಎಂದು ಬರೆದುಕೊಂಡ ಕರವೇ ಕಾರ್ಯಕರ್ತ..!

ಕಾವೇರಿ ಎಫೆಕ್ಟ್: ರಸ್ತೆಯಲ್ಲಿ ಅಡುಗೆ ಮಾಡಿಕೊಂಡ ಪ್ರತಿಭಟನಾಕಾರರು..!

ಶುಕ್ರವಾರ ತಮಿಳು ಚಾನೆಲ್ಸ್ ಬಂದ್…!

ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!

ಸೆಪ್ಟೆಂಬರ್ 9ಕ್ಕೆ ಕರ್ನಾಟಕ ಬಂದ್‍ಗೆ ಕರೆ

ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...