ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಯಾರನ್ನು ಕಂಡ್ರೆ ತುಂಬಾ ಭಯ ಅನ್ನೋದು ಈಗ ರಿವೀಲ್ ಆಗಿದೆ.
ಬಿಗ್ ಬಾಸ್ ನ ಸೂಪರ್ ಸಂಡೆ ವಿಥ್ ಸುದೀಪ ಗೆ ಗೆಸ್ಟ್ ಆಗಿ ಬಂದ ಶಿವಣ್ಣ ಈ ವಿಷಯವನ್ನು ಹೇಳಿದ್ದಾರೆ.
ತನಗೆ ಪತ್ನಿ ಗೀತಾ ಕಂಡ್ರೆ ಭಯ ಅಂತ ಶಿವಣ್ಣ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಶಿವಣ್ಣ, ಪ್ರೇಮ್ ಸ್ಪರ್ಧಿಗಳ ಜೊತೆ ಕೆಲ ಹೊತ್ತು ಕಳೆದರು. ವಿಲನ್ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ವೇದಿಕೆಯಲ್ಲಿ ಕಿಚ್ಚ ಸುದೀಪ್ ಕೇಳಿದ ಸಾಲು ಸಾಲು ಪ್ರಶ್ನೆಗಳಿಗೆ ಶಿವಣ್ಣ ಡೈಲಾಗ್ ಗಳ ಮೂಲಕವೇ ಉತ್ತರ ಕೊಟ್ಟರು.