ಮಂತ್ರಿಮಾಲ್ ನಿಂದ ‘ಫಸ್ಟ್ ನ್ಯೂಸ್’ ವರೆಗೆ..!

Date:

ಎಜುಕೇಷನ್ ಕಂಪ್ಲೀಟ್ ಆದ್ಮೇಲೆ ವೃತ್ತಿ ಬದುಕು ಕಟ್ಟಿಕೊಂಡಿದ್ದು ಬೆಂಗಳೂರಿನ ಮಂತ್ರಿಮಾಲ್ ನಲ್ಲಿ. ಆಮೇಲೆ ಶುರುವಾಗಿದ್ದು ಮೀಡಿಯಾ ಜರ್ನಿ…! ಬೇರೆ ಬೇರೆ ಚಾನಲ್ ಗಳಲ್ಲಿ ಒಂದಿಷ್ಟು ಅನುಭವ ಪಡೆದು ಈಗ ಹೊಸದಾಗಿ ಆರಂಭವಾಗಲಿರೋ ‘ಫಸ್ಟ್ ನ್ಯೂಸ್’ ಗೆ ಬಂದು ಲ್ಯಾಂಡ್ ಆಗಿರುವ ಯುವ ಪತ್ರಕರ್ತನ ಯಶೋಗಾಥೆ ಇದು..

ಇವರು ಎಂ.ಆರ್ ಶಿವಪ್ರಸಾದ್, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮೋಟಗಾನಹಳ್ಳಿಯ ಹುಡುಗ. ತಂದೆ ಬಿಎಂಟಿಸಿ ಉದ್ಯೋಗಿ ರಾಜ್‍ಕುಮಾರ್, ತಾಯಿ ಕುಸುಮ, ಅಣ್ಣ ರೇಣುಕಾ ಪ್ರಸಾದ್, ಅತ್ತಿಗೆ ಪವಿತ್ರ.  ಮೀಡಿಯಾದಲ್ಲಿ ಕೆಲಸ ಮಾಡ್ಬೇಕೆಂಬ ಕನಸನ್ನು ಸಾಕಾರಗೊಳಿಸಿಕೊಳ್ಳೋಕೆ ಅದೆಷ್ಟೋ ನಿದ್ರೆ ಇಲ್ಲದ ರಾತ್ರಿಗಳನ್ನು, ತಿಂಡಿ, ಊಟ ಇಲ್ಲದ ಹೊತ್ತುಗಳನ್ನು ಕಳೆದಿದ್ದಾರೆ ಶಿವಪ್ರಸಾದ್.


ಮೋಟಗಾನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ವಿವೇಕಾನಂದ ಗ್ರಾಮಾಂತರ ಪಾಠಶಾಲೆಯಲ್ಲಿ ಪ್ರೌಢಶಿಕ್ಷಣವನ್ನು, ನೆಲಮಂಗದಲ್ಲಿನ ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು, ಬೆಂಗಳೂರಿನ ವಿಜಯ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಬಿಎಂ ಪದವಿಯನ್ನು ಪಡೆದಿದ್ದಾರೆ. ಪದವಿ ಜೊತೆ ಜೊತೆಗೆ ಲ್ಯಾಬ್ ಟೆಕ್ನಿಶಿಯನ್ ಕೋರ್ಸ್ ಕೂಡ ಮಾಡಿಕೊಂಡಿದ್ದಾರೆ.


ಪದವಿ ದಿನಗಳಲ್ಲಿಯೇ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕೆಂದು ಪಾರ್ಟ್ ಟೈಮ್ ಕೆಲಸ ಮಾಡ್ತಿದ್ದ ಶಿವು, ಪಾಂಪ್ಲೆಂಟ್ಸ್ ಹಂಚಿದ್ದು ಉಂಟು. ಬಾರ್ ನಲ್ಲೂ ಕೆಲಸ ಮಾಡಿದ್ದೂ ಇದೆ..!


2011ರಲ್ಲಿ ಡಿಗ್ರಿ ಮುಗಿದ ಮೇಲೆ ಅಪ್ಪ ಮಂತ್ರಿಮಾಲ್ ಗೆ ಕರ್ಕೊಂಡು ಬಂದು ರಿಲಯನ್ಸ್ ಶಾಪ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸಕ್ಕೆ ಸೇರಿಸಿದ್ರು. ಒಳ್ಳೆಯ ಸಂಬಳನೂ ಸಿಗ್ತಿತ್ತು.


ಒಂದ್ ದಿನ ಇದ್ದಕ್ಕಿದ್ದಂತೆ ಕಾಲೇಜು ದಿನಗಳ ಜೂನಿಯರ್ ಗೆಳೆಯನೊಬ್ಬ ಸಿಕ್ಕ. ಮಾತುಕತೆ ನಡೆಯಿತು. ಅವ್ನು ಕೇಬಲ್ ಚಾನಲ್ ಒಂದರಲ್ಲಿ ನಿರೂಪಕನಾಗಿ ಕೆಲಸ ಮಾಡ್ತಿದ್ದಾನೆ ಅಂತ ಗೊತ್ತಾಯ್ತು. ಶಾಲಾ-ಕಾಲೇಜು ದಿನಗಳಲ್ಲಿ ಕಾರ್ಯಕ್ರಮಗಳ ನಿರೂಪಣೆ ಮಾಡ್ತಿದ್ದುದು, ಶಾಲೆಯಲ್ಲಿ ಪ್ರೇಯರ್ ಟೈಮಲ್ಲಿ ನ್ಯೂಸ್ ಪೇಪರ್ ಓದ್ತಿದ್ದುದು ನೆನಪಿಗೆ ಬಂತು…! ನಾನ್ಯಾಕೆ ಆ್ಯಂಕರ್ ಆಗ್ಬಾರ್ದು ಅಂತ ಕೆಲಸ ಬಿಟ್ಟು ‘ಅಮೋಘ’ ಚಾನಲ್ ಕಡೆಗೆ ಹೋದ್ರು.


ಅಲ್ಲಿ ಕೆಲಸ ಖಾಲಿ ಇಲ್ಲ. ಮತ್ತೆ ಹೇಳ್ತೀವಿ ಅಂತ ಹೇಳಿದ್ರು. ಆದ್ರು ದಿನ ಬೆಳಗ್ಗೆ ಅಮೋಘ ಕಚೇರಿಗೆ ಹೋಗೋದನ್ನು ತಪ್ಪಿಸಲಿಲ್ಲ. ಹೀಗೆ ಎರಡು ತಿಂಗಳು ಅಲೆದಾಡಿದ್ರು. ಮನೆಯಲ್ಲಿ ಅಪ್ಪ ಬೈಯೋಕೆ ಶುರುಮಾಡಿದ್ರು. ಓದ್ಸಿ, ಕೆಲ್ಸ ಕೊಡಿಸಿದ್ರೂ ಅದನ್ನು ಬಿಟ್ಟು ಹೀಗೆ ಮಾಡ್ತಿದ್ದಾನಲ್ಲ ಪುಣ್ಯಾತ್ಮ ಅಂತ ಯಾವ ತಂದೆಗಾದ್ರು ಕೋಪ ಬರುತ್ತೆ ಬಿಡಿ…!


ಅಪ್ಪನತ್ರ ಯಾರ್ ಬೈಸಿಕೊಳ್ತಾರೆ ಅಂತ ಮನೆಬಿಟ್ಟು ಮಾವನ ಮನೆಯಲ್ಲಿ ಉಳಿದುಕೊಂಡ್ರು. ಅವರ ಪ್ರಾವಿಜನ್ ಸ್ಟೋರ್, ಹೋಟೆಲ್ ನಲ್ಲಿ ಕೆಲಸ ಮಾಡ್ತಾ ಮಾಡ್ತಾ ಅಮೋಘ ಕಚೇರಿಗೊಂದು ಭೇಟಿ ಕೊಟ್ಟು ಬರ್ತಿದ್ರು…! ಅಲ್ಲಿ ಕೆಲ್ಸ ಸಿಗಂಗಿಲ್ಲ, ಇವ್ರು ಅವ್ರನ್ನ ಬಿಡಂಗಿಲ್ಲ…!


ಒಮ್ಮೆ ಸಾಗರ್ ಎಂಬ ನಿರೂಪಕ ತಂಗಿ ಮದ್ವೆಗೆ ರಜೆ ಹಾಕಿ ಊರಿಗೆ ಹೋಗಿದ್ದರು…! ಆ ಅಮೋಘ ಬಾಗಿಲು ಶಿವಪ್ರಸಾದ್ ಗೆ ತೆರೆಯಿತು..! ಪತ್ರಕರ್ತೆ ಚೇತನಾ ಅವರು ಶಿವಪ್ರಸಾದ್ ಅವರಿಗೆ ಅಮೋಘದಲ್ಲಿ ಕೆಲಸ ಮಾಡಲು ಅವಕಾಶ ಕೊಟ್ರು… ಆದ್ರೆ ಅದು ನಾಲ್ಕೇ ನಾಲ್ಕು ದಿನಕ್ಕೆ ಮಾತ್ರ…! ಸಾಗರ್ ಬಂದ್ಮೇಲೆ ಶಿವು ಮತ್ತೆ ನಿರುದ್ಯೋಗಿ…!


ಅಷ್ಟರಲ್ಲಿ ಟಿವಿ10 ಚಾನಲ್ ನಲ್ಲಿ ನಿರೂಪಣೆ ಟ್ರೈನಿಂಗ್ ಕೊಟ್ಟು, ಕೆಲಸಕ್ಕೆ ತಗೋತಾರೆ ಅಂತ ಗೊತ್ತಾಯ್ತು. ಅಲ್ಲಿ ತರಬೇತಿಗೆ ಸೇರಲು 3ಸಾವಿರ ರೂ ಪಾವತಿಸಬೇಕಿತ್ತು…! ಹಂಗೊ ಹಿಂಗೊ ಹೆಂಗೋ ಮಾಡಿ 3ಸಾವಿರ ಹೊಂದಿಸಿ ಟಿವಿ10 ಸೇರಿದ್ರು. ಇದರ ಜೊತೆ ಜೊತೆಗೆ ಮಾವನ ಹೋಟೆಲ್ ಕೆಲಸವನ್ನು ಮಾಡ್ತಿದ್ರು.


ಟಿವಿ10ನಲ್ಲಿ ಪತ್ರಿಕೋದ್ಯಮದ ಪಾಠ ಮಾಡಿದ್ದು ಸುರೇಶ್ ಅವರು. ಇವರು ಶಿವು ಅವರ ಪತ್ರಿಕೋದ್ಯಮದ ಮೊದಲ ಗುರು. ಶಿವಪ್ರಸಾದ್ ಅವರನ್ನು ನಿಖಿಲ್ ಸ್ವಾಮಿ ಎಂದು ಮರುನಾಮಕರಣ ಮಾಡಿದ್ರು ಸುರೇಶ್. ಶಿವಪ್ರಸಾದ್ ಬೇಡ, ಇನ್ಮುಂದೆ ನಿಖಿಲ್ ಸ್ವಾಮಿ ಅಂತಾನೇ ಗುರುತಿಸಿಕೋ ಅಂದ್ರು. ಇಲ್ಲಿ 1 ವರ್ಷ 2 ತಿಂಗಳು ಸಂಬಳ ಇಲ್ಲದೆ ಟ್ರೈನಿಯಾಗಿ ದುಡಿದ್ರು. ಅಷ್ಟೊತ್ತಿಗೆ ಚಾನಲ್ ಕೂಡ ಮುಚ್ಚಿತು.


ಆಗ ಫ್ರೆಂಡ್ಸ್ ಹೇಳಿದ್ರು ಅಂತ ಸಿನಿಮಾ ಕ್ಷೇತ್ರದಲ್ಲೊಂದು ಪ್ರಯತ್ನ ಮಾಡೋಣ ಅಂತ ಒಂದಿಷ್ಟು ಸೈಕಲ್ ಹೊಡೆದ್ರು. 2-3 ಧಾರವಾಹಿಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದ್ದು ಬಿಟ್ರೆ ಸಿನಿ/ ಸೀರಿಯಲ್ ಪ್ರಪಂಚ ಕೈಹಿಡಿಯಲಿಲ್ಲ.


ಅಷ್ಟರಲ್ಲಿ ಇವರ ಮಾಧ್ಯಮ ಗುರು ಸುರೇಶ್ ಅವ್ರು ‘ರಿಯಲ್ ಟಿವಿ’ಯನ್ನು ಆರಂಭಿಸಲು ಮುಂದಾಗಿದ್ರು. ಅಲ್ಲಿಗೆ ಶಿವಪ್ರಸಾದ್ ಅವರನ್ನು ಬರ ಹೇಳಿದ್ರು. ಗುರುಗಳ ಕನಸಿನ ಕೂಸನ್ನು ಬೆಳೆಸಲು ಆರಂಭದಿಂದಲೂ ಜೊತೆಗಿದ್ರು ಶಿವು. ಇಲ್ಲಿ ಫಸ್ಟ್ ನ್ಯೂಸ್ ಮಾಡಿದ್ದು, ವಾಚಿಸಿದ್ದು ಇವರೇ. ಈ ಚಾನಲ್ ನಲ್ಲಿ ಹೆಚ್ಚಾಗಿ ಎಂಟರ್‍ಟ್ರೈನ್‍ಮೆಂಟ್ ಪ್ರೋಗ್ರಾಂಗಳು ಬರ್ತಾ ಇತ್ತು.


ಶಿವಪ್ರಸಾದ್, ಟೀ ಶರ್ಟ್ ಹಾಕ್ಕೊಂಡು ಹಾಯ್ ಹಲೋ ನಮಸ್ತೆ ಅಂತ ಪರದೆ ಮೇಲೆ ಬಂದಾಗ ಅಮ್ಮನಿಗೆ ಖುಷಿ…! ಅಪ್ಪನಿಗೆ ಕೋಪ…! ಬಿಬಿಎಂ ಮಾಡುವಾಗಲಂತೂ ಸರಿಯಾಗಿ ಕೋಟ್ ಹಾಕಿಕೊಂಡು ಹೋಗಲಿಲ್ಲ..! ಕಂಪನಿಗಳಲ್ಲಿ ಕೆಲಸಕ್ಕೆ ಸೇರಲಿಲ್ಲ. ಈಗ ಇದಕ್ಕೆ ಹೋಗಿದ್ದಾನೆ. ಕೊನೇಪಕ್ಷ ನ್ಯೂಸ್ ರೀಡರ್ ಆದ್ರೂ ಆಗಲಿ ಎಂದು ಅಮ್ಮನಲ್ಲಿ ಅಪ್ಪ ಹೇಳ್ತಿದ್ರಂತೆ. ರಿಯಲ್ ಟಿವಿ ಬಳಿಕ ಗೋವರ್ಧನ ರೆಡ್ಡಿ ಅವರ ‘ಮೈಡ್ರೀಮ್’ (ಈಗಿನ ಜನತಾ) ಟಿವಿಗೆ ಹೋದ್ರು ಶಿವು. ಮನೆ ದೂರವಿದ್ದರಿಂದ ಆಫೀಸೇ ಮನೆ, ಮನೆಯೇ ಆಫೀಸು ಆಗಿತ್ತು…! ಅಂದ್ರೆ, ಆಫೀಸಲ್ಲಿಯೇ ಉಳಿದುಕೊಳ್ತಿದ್ರು.


6ತಿಂಗಳ ಬಳಿಕ ಬಿಟಿವಿಯಲ್ಲಿ ಅವಕಾಶ ಸಿಕ್ತು. ಈ ಮೂಲಕ 2013ರಲ್ಲಿ ಸ್ಯಾಟಲೈಟ್ ಚಾನಲ್ಗೆ ಪಾದಾರ್ಪಣೆ ಮಾಡಿದ್ರು. ಲಾಂಚ್ ಆಗುವ ಮುನ್ನವೇ ಬಿಟಿವಿ ಬಳಗ ಸೇರಿದ್ದ ಶಿವಪ್ರಸಾದ್ ಕಾಪಿ ಎಡಿಟರ್ ಆಗಿ, ರಿಪೋರ್ಟರ್ ಆಗಿ ಸೇವೆಸಲ್ಲಿಸಿದ್ರು. ನಿರೂಪಣೆ ತರಬೇತಿ ಕೂಡ ಪಡೆದಿದ್ರು.


ಬದಲಾದ ಸನ್ನಿವೇಶದಲ್ಲಿ ಎಡಿಟೋರಿಯಲ್ ಬಿಟ್ಟು ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡಿದ್ರು. ಫಿಟ್ನೆಸ್ ಬಗ್ಗೆ ಆಸಕ್ತಿ ಇರುವ ಇವರು ಬಿಟಿವಿಯಲ್ಲಿ ಕೆಲಸ ಮಾಡ್ತಾ ಮಾಡ್ತನೇ ‘ಸ್ನ್ಯಾಪ್ ಫಿಟ್ನೆಸ್’ ನಲ್ಲಿ ಟ್ರೈನರ್ ಆಗಿ ಪಾರ್ಟ್ ಟೈಮ್ ಜಾಬ್ ಮಾಡಿದ್ರು. ಅದ್ಯಾಕೋ ಇದಕ್ಕಿದ್ದಂತೆ ಪೂರ್ಣ ಪ್ರಮಾಣದಲ್ಲಿ ಫಿಟ್ನೆಸ್ ಟ್ರೈನರ್ ಆಗಿ ಮುಂದುವರೆಯುವ ಎಂದು ಬಿಟಿವಿಯನ್ನು ಬಿಟ್ಟು ಹೊರಬಂದ್ರು. ಆದರೆ, ಇವರು ಪತ್ರಕರ್ತರಾಗೇ ಮುಂದುವರೆಯ ಬೇಕು ಅನ್ನೋದು ದೇವರಿಚ್ಚೆ…!


ಅಚಾನಕ್ ಆಗಿ ಈ-ಟಿವಿಯಲ್ಲಿದ್ದ ಸ್ನೇಹಿತೆ ಅಂಬಿಕಾ ಅವರ ಭೇಟಿಯಾಯ್ತು. ಈ-ಟಿವಿಗೆ ನಿರೂಪಕರು ಬೇಕಾಗಿದ್ದಾರೆ. ಟ್ರೈಮಾಡು ಅಂತ ಅವರು ಹೇಳಿದ್ರು. ಅಂದಿನ ಚೀಫ್ ಎಡಿಟರ್ ಆಗಿದ್ದ ಜಿ.ಎನ್ ಮೋಹನ್ ಅವರು ಇಂಟರ್ ವ್ಯೂ ಮಾಡಿದ್ರು. ಹೈದರಾಬಾದ್ ನಲ್ಲಿ ಸ್ವಲ್ಪ ಸಮಯ ಕೆಲಸ ಮಾಡ್ಬೇಕಾಗುತ್ತೆ. ಟ್ರೈನಿಂಗ್ ಕೊಡ್ತಾರೆ. ಆಫೀಸಿಂದ ಕರೆಬಂದೊಡನೆ ಹೊರಡಲು ರೆಡಿಯಾಗಿ ಅಂದ್ರು.


ಆದ್ರೆ, ಹೈದರಾಬಾದ್ ಗೆ ಹೋಗೋಕೆ ದುಡ್ಡು ಇರ್ಲಿಲ್ಲ. ಅದಕ್ಕಾಗಿ ಹ್ಯಾಂಡ್ ವಾಷಿಂಗ್ ಮಿಶನ್ ಡೆಲವರಿ ಬಾಯ್ ಆಗಿ ಕೆಲಸ ಮಾಡಿದ್ರು. 10 ದಿನಗಳಲ್ಲಿ ಸುಮಾರು 9ಸಾವಿರ ರೂ ದುಡಿದು, ಅದರಲ್ಲಿ ಮೂರು ಸಾವಿರ ಮನೆಯ ಬಾಕಿ ಬಾಡಿಗೆ ಕೊಟ್ಟು, ಉಳಿದ ಹಣವನ್ನು ಜೇಬಿಗಿಳಿಸಿಕೊಂಡು ರಾಜಹಂಸದಲ್ಲಿ ಹೈದರಾಬಾದ್ ಗೆ ಹೋದ್ರು.


ಮೂರೇ ದಿನಗಳಲ್ಲಿ ನ್ಯೂಸ್ ಓದೋ ಅವಕಾಶ ಸಿಕ್ತು. ‘ಅಗ್ರರಾಷ್ಟ್ರೀಯ ವಾರ್ತೆ’ ಮತ್ತು ಕನ್ನಡನಾಡಿ ಓದಿದ್ದು ಇವರಿಗೆ ಮರೆಯಲಾಗದ ಕ್ಷಣ.


ಅಲ್ಲಿ ಜಗದೀಶ್ ಮಣಿಯಾಣಿ ಅವರು ಸಹಕಾರ ಪ್ರೋತ್ಸಾಹ ನೀಡಿದ್ರು. 8 ತಿಂಗಳು ಹೈದರಬಾದ್ ನಲ್ಲಿ ಮತ್ತೊಂದು ವರ್ಷ ಬೆಂಗಳೂರಲ್ಲಿ ಕೆಲಸ ಮಾಡಿದ್ದರು. ತಮಿಳು ನಾಡು ಮಾಜಿ ಸಿಎಂ ದಿ. ಜಯಲಲಿತ ಅವರ ಬಂಧನ-ಬಿಡುಗಡೆ ಸುದ್ದಿ ಸಂದರ್ಭದಲ್ಲಿ ಸುಮಾರು 3.30 ಗಂಟೆಗಳ ಕಾಲ ನ್ಯೂಸ್ ರೀಡಿಂಗ್, ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದು ಇವರಿಗೆ ಸ್ಮರಣೀಯವಂತೆ.


ಈ-ಟಿವಿಗೆ ಸೇರುವಾಗ ನೀಡಿದ್ದ ಡಾಂಕ್ಯುಮೆಂಟ್ ನಲ್ಲಿ ಶಿವಪ್ರಸಾದ್ ಅಂತಿತ್ತು. ಆದ್ರೆ, ಆನ್ ಸ್ಕ್ರೀನ್ ನಲ್ಲಿ ಮಾಧ್ಯಮ ಗುರು ಸುರೇಶ್ ಅವರಿಟ್ಟಿದ್ದ ನಿಖಿಲ್ ಸ್ವಾಮಿ ಎಂದು ಹೇಳಿಕೊಳ್ಳುತ್ತಿದ್ದರು. ಇದು ಮುಂದೆ ಸಮಸ್ಯೆ ಆಗುತ್ತೆ ಎಂದು ಸಂಸ್ಥೆ ತಿಳಿಹೇಳಿದ ಮೇಲೆ ಆನ್ ಸ್ಕ್ರೀನ್ ನಲ್ಲೂ ಶಿವಪ್ರಸಾದ್ ಆದ್ರು.


2014ರ ಆಗಸ್ಟ್ 28ರಿಂದ 2016ರ ಫೆಬ್ರವರಿ 12ರವರೆಗೆ ಈಟಿವಿಯಲ್ಲಿ ನ್ಯೂಸ್ ಆ್ಯಂಕರ್ ಆಗಿ ಸೇವೆಸಲ್ಲಿಸಿ 2016ರ ಫೆಬ್ರವರಿ 13ರಂದು ‘ಸುದ್ದಿ ಟಿವಿ’ ಬಳಗಕ್ಕೆ ಸೇರಿದ್ರು. ಟಿವಿ ಲಾಂಚ್ ಆಗೋ ಮುನ್ನ ಸುಮಾರು 1.5 ತಿಂಗಳು ಕೆಲಸ ಮಾಡಿ ಕಾರಣಾಂತರದಿಂದ 2016ರ ಏಪ್ರಿಲ್ 6ರಂದು ಉದಯ ಟಿವಿಗೆ ಪ್ರವೇಶಿಸಿದ್ರು. ಅನುಭವಿ ಪತ್ರಕರ್ತರಾದ ಸಮೀವುಲ್ಲಾ ಹಾಗೂ ನಟರಾಜ್ ಅವರ ಮಾರ್ಗದರ್ಶನದಿಂದ ಪತ್ರಿಕೋದ್ಯಮದ ಮತ್ತಷ್ಟು ಆಳ-ಅಗಲಗಳನ್ನು ತಿಳ್ಕೊಂಡ್ರು.


2017ರ ಸೆಪ್ಟೆಂಬರ್ 23ರವರೆಗೆ ಉದಯ ನ್ಯೂಸ್ ನಲ್ಲಿದ್ದರು. ಅದು ನಿಂತ ಮೇಲೆ ಬೇರೆ ಕಡೆಗಳಿಂದ ಅವಕಾಶ ಸಿಕ್ಕರೂ ಕುಟುಂಬಕ್ಕೆ ಸಮಯ ನೀಡುವ ಉದ್ದೇಶದಿಂದ ಸದ್ಯಕ್ಕೆ ಬ್ರೇಕ್ ತಗೊಂಡ್ರು.


ಆಗ ಟಿವಿ9ನಿಂದ ಹೊರಬಂದಿರೋ ರವಿಕುಮಾರ್ ಮತ್ತು ಮಾರುತಿ ಅವರ ಚಾನಲ್‍ಗೆ ಕೆಲಸವನ್ನರಸಿ ಹೋದ್ರು. ರವಿಕುಮಾರು ಮತ್ತು ಮಾರುತಿ ಅವರ ಟೀಂನಲ್ಲಿ ಕೆಲಸ ಮಾಡ್ಬೇಕು ಎನ್ನೋದು ಇವರ ಬಹುದಿನಗಳ ಕನಸಾಗಿತ್ತು. ಇವರ ಕೈಕೆಳಗೆ ಕೆಲಸ ಮಾಡಿದ್ರೆ ಪರಿಪಕ್ವ ಪತ್ರಕರ್ತರಾಗಿ ಬೆಳೆಯಬಹುದು. ಪತ್ರಿಕೋದ್ಯಮವನ್ನು ಅರ್ಥಮಾಡಿಕೊಳ್ಳಬಹುದು, ಅರ್ಥಪೂರ್ಣಗೊಳಿಸಿಕೊಳ್ಳ ಬಹುದು ಎಂಬ ಮಾತು ಮಾಧ್ಯಮ ಕ್ಷೇತ್ರದಲ್ಲಿದೆ. ಈ ನಂಬಿಕೆ ಶಿವಪ್ರಸಾದ್ ಅವರದ್ದೂ ಸಹ ಹೌದು. ಇಲ್ಲಿ ಕಾಪಿಎಡಿಟಿಂಗ್, ರಿಪೋರ್ಟಿಂಗ್, ಆ್ಯಂಕರಿಂಗ್ ಎಲ್ಲದಕ್ಕೂ ಶಿವಪ್ರಸಾದ್ ಸಿದ್ಧರಿದ್ದಾರೆ.

ರವಿಕುಮಾರ್ ಸರ್ ಮತ್ತು ಮಾರುತಿ ಸರ್ ಕೈಕೆಳಗೆ ಪರಿಪೂರ್ಣ ಪತ್ರಕರ್ತನಾಗಿ ತಾನು ಬೆಳೆಯಬೇಕು. ಅಪ್ಪ ಮೊದಲು ಕಂಡ ಕನಸಂತೆ ಬಿಬಿಎಂನಲ್ಲಿ ಮುಂದುವರೆಯದೇ ಇದ್ದರು, ಬಳಿಕ ಅವರು ಕಂಡ ಕನಸಂತೆ ನ್ಯೂಸ್ ರೀಡರ್ ಆಗಿದ್ದೇನೆಂಬ ತೃಪ್ತಿ ಶಿವಪ್ರಸಾದ್ ಅವರದ್ದು. -ಇದು ಮಂತ್ರಿಮಾಲ್ ನಿಂದ ಹಿಡಿದು ‘ಫಸ್ಟ್ ನ್ಯೂಸ್’ ವರೆಗಿನ ಶಿವಪ್ರಸಾದ್ ಅವರ ವೃತ್ತಿಬದುಕಿನ ಜರ್ನಿ. ಕಷ್ಟಪಟ್ಟಿದ್ದಾರೆ. ಒಳ್ಳೆಯದಾಗಿದೆ, ಇನ್ನೂ ಒಳ್ಳೆಯದಾಗಲೇ ಬೇಕು. ಖಂಡಿತಾ ಒಳ್ಳೆಯದಾಗುತ್ತೆ…

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

 

Share post:

Subscribe

spot_imgspot_img

Popular

More like this
Related

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...