ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಡಾ ಶಿವರಾಜ್ ಕುಮಾರ್ ಹಾಗೂ ವಿಕಟಕವಿ , ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಶನ್ ನಲ್ಲಿ ಸಿನಿಮಾವೊಂದು ಬರಲಿದೆ ಎಂಬ ಸುದ್ದಿ ಬಹುದಿನಗಳಿಂದ ಕೇಳಿ ಬರುತ್ತಲೇ ಇದೆ.
ಆದರೆ, ಇದು ಕನ್ಫರ್ಮ್ ಆಗಿರಲಿಲ್ಲ. ಇದೀಗ ಶಿವಣ್ಣ ಮತ್ತು ಭಟ್ಟರ ಕಾಂಬಿನೇಶನ್ ನಲ್ಲಿ ಸಿನಿಮಾ ಸೆಟ್ಟೇರುವುದು ಖಾತ್ರಿಯಾಗಿದೆ.
ಭಟ್ಟರು ಸದ್ಯ ಪಂಚತಂತ್ರ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ‘ಪಂಚತಂತ್ರ’ ಪರದೆ ಅಲಂಕರಿಸಿದ ಮೇಲೆ, ಅಂದ್ರೆ ರಿಲೀಸ್ ಆದ ಬಳಿಕ ಶಿವಣ್ಣ ಜೊತೆಗಿನ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಭಟ್ಟರು.
ಎಲ್ಲಾ ಅಂದುಕೊಂಡಂತೆ ನಡೆದರೆ ದೀಪಾವಳಿ ಹೊತ್ತಿಗೆ ಚಿತ್ರೀಕರಣ ಆರಂಭವಾಗಲಿದೆ.
ಈ ಹೊಸ ಸಿನಿಮಾದಲ್ಲಿ ಶಿವಣ್ಣ ಕಾಮನ್ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇಲ್ಲಿಯವರೆಗೆ ಎಂದೂ ಮಾಡಿರದ ಪಾತ್ರದಲ್ಲಿ ಶಿವಣ್ಣ ಅಭಿನಯಿಸಲಿದ್ದಾರೆ.
ಅಂದರ್ ಬಾಹರ್ ಸಿನಿಮಾಕ್ಕೆ ಬಂಡವಾಳ ಹಾಕಿದ್ದ ಭಾಸ್ಕರ್ ಈ ಚಿತ್ರಕ್ಕೆ ಬಂಡವಾಳ ಹಾಕ್ತಿದ್ದಾರೆ. ಹರಿಕೃಷ್ಣ ಸಂಗೀತದ ಬಲನೀಡಲಿದ್ದಾರೆ. ಭಟ್ಟರ ಸಂಭಾಷಣೆ ಶಿವಣ್ಣ ಹೇಳೋದನ್ನು ನೋಡಿ, ಕೇಳಿ ಆನಂದಿಸೋ ಕುತೂಹಲ ಎಲ್ಲರದ್ದು…!