ನೀಚ ಪತಿಯೊಬ್ಬ ತನ್ನ ಹೆಂಡತಿಯ ಬೆತ್ತಲೆ ಫೋಟೋಗಳನ್ನು ತನ್ನ ಸ್ನೇಹಿತನಿಗೆ ಕಳುಹಿಸಿದ ಘಟನೆ ಹರಿಯಾಣ ಪಂಚಕುಲ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಮುಸ್ಲೀಂ. ಈತ ಹಿಂದೂ ಯುವತಿಯನ್ನು ಮದುವೆಯಾಗಿದ್ದ. ಬಳಿಕ ಆಕೆಗೆ ಮತಾಂತರವಾಗುವಂತೆ ಬಲವಂತ ಮಾಡ್ತಿದ್ದ. ಇದೇ ವಿಚಾರಕ್ಕೆ ಹಲ್ಲೆ ಕೂಡ ಮಾಡಿದ್ದಾನಂತೆ. ಎಷ್ಟು ಹೇಳಿದರೂ ಆಕೆ ಮತಾಂತರಕ್ಕೆ ಒಪ್ಪದೇ ಇದ್ದಾಗ ತಲಾಖ್ ನೀಡೋದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ.
ಆದರೂ ಪತ್ನಿ ಒಪ್ಪದೇ ಇದ್ದಾಗ ಆಕೆಯ ನಗ್ನ ಫೋಟೋಗಳನ್ನು ತೆಗೆದು ಮೊದಲು ತನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅಪ್ ಮಾಡಿದ್ದಾನೆ. ಇದು ವೈರಲ್ ಆಗಿದ್ದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.