ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದ ಪುರಾತನ ಬಾವಿಯೊಂದರಲ್ಲಿ ಟಿಪ್ಪು ಸುಲ್ತಾನ್ ಕಾಲದ ರಾಕೆಟ್ ಗಳು ಪತ್ತೆ ಯಾಗಿವೆ. ಕಳೆದ ನಾಲ್ಕು ದಿನಗಳಿಂದ ಬಾವಿಯಲ್ಲಿ ಉತ್ಖನನ ಮಾಡಲಾಗಿತ್ತು. ದೊರೆತಿರುವ ರಾಕೆಟ್ ಗಳನ್ನು ಶಿವಮೊಗ್ಗದ ಶಿವಪ್ಪನಾಯಕನ ಅರಮನೆಯಲ್ಲಿರೋ ಪ್ರಾಚ್ಯವಸ್ತು ಸಂಗ್ರಹದಲ್ಲಿಡಲಾಗಿದೆ.
ಟಿಪ್ಪು ಸುಲ್ತಾನ್ ಯುದ್ಧದಲ್ಲಿ ಬಳಸಿದ್ದ ಎರಡು ರಾಕೆಟ್ ಗಳನ್ನು ಇಂಗ್ಲೆಂಡ್ ನ ವುಲ್ ವಿಚ್ ಸಂಗ್ರಹಾಲಯದಲ್ಲಿ ಮತ್ತು 160ರಾಕೆಟ್ ಗಳನ್ನು ಬೆಂಗಳೂರಿನ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿಡಲಾಗಿದೆ. ಇವುಗಳನ್ನು ಹೊರತುಪಡಿಸಿ ಸಾವಿರಾರು ಸಂಖ್ಯೆಯಲ್ಲಿ ರಾಕೆಟ್ ಗಳು ಪತ್ತೆಯಾಗಿರುವುದು ಇದೇ ಮೊದಲು ಎಂದು ಪುರಾರತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
2002ರಲ್ಲಿ ತೀರ್ಥಹಳ್ಳಿಯ ನಿವೃತ್ತ ಪ್ರಾಂಶುಪಾಲ ನಾಗರಾಜ್ ರಾವ್ ಅವರ ತೋಟದ ಬಾವಿಯಲ್ಲಿ 120 ರಾಕೆಟ್ ಗಳು ಪತ್ತೆಯಾಗಿದ್ದವು. ಆದರೆ ಅವುಗಳನ್ನು ಕೇವಲ ಮದ್ದುಗುಂಡುಗಳೆಂದು ಹೇಳಲಾಗಿತ್ತು. ಬಳಿಕ ಸಂಶೋದನೆಯಿಂದ 2007ರಲ್ಲಿ ಅವು ರಾಕೆಟ್ ಗಳೆಂದು ತಿಳಿದುಬಂದಿತ್ತು.