ಹಸಿದ ಮಗು.., ಬದುಕಿರುವ ಶವದಂತಿರುವ ಮಗುವನ್ನು ಎತ್ತಿಕೊಂಡಿರುವ ತಾಯಿ, ವಯಸ್ಸಾದ ಕಾಲಿಲ್ಲದ ವ್ಯಕ್ತಿ…! ಹೀಗೆ ನಾನಾ ಬಗೆಯ ಜನರನ್ನು ಟ್ರಾಫಿಕ್ ಸಿಂಗ್ನಲ್ ಗಳಲ್ಲಿ ನೋಡ್ತಾನೇ ಇರ್ತೀವಿ..! ಇವರನ್ನು ಭಿಕ್ಷುಕರು ಅಂತ ಕರೀತೀವಿ…! ಇವರಲ್ಲಿ ಕೆಲವರನ್ನು ನೋಡಿದ್ರಂತೂ ಎಂಥವರ ಮನವೂ ಕರುಗುತ್ತೆ..! ಚಿಲ್ಲರೆ ಹಾಕ್ತೀವಿ..! ಕೆಲವೊಮ್ಮೆ ಇಲ್ಲ ಅಂತ ಹೇಳಿ ಕಳಿಸಿದರೂ, ಬಹುತೇಕರಿಗೆ ನಾವೆಲ್ಲಾ ಭಿಕ್ಷೆ ಹಾಕಿಯೇ ಹಾಕಿರುತ್ತೇವೆ..! ನಾನಂತು ಇನ್ಮುಂದೆ ಭಿಕ್ಷೆ ಹಾಕಲ್ಲ… ಹಾಕಲ್ಲ.. ಹಾಕಲ್ಲ..! ಈ ಸ್ಟೋರಿ ಓದಿದ ಮೇಲೆ ನೀವು ಕೂಡ ನಾನು ತೆಗೆದುಕೊಂಡ ನಿರ್ಧಾರವನ್ನೇ ತಗೊಳ್ತೀರಿ..! ಓಕೆ, ಮೊದಲು ಸ್ಟೋರಿ ಓದಿ.
ಆ ಹುಡುಗಿ ಹೆಸರು `ಇಂದು’. ಅವಳ ಮನೆಯಲ್ಲಿ ಬಡತನ ಇದ್ದರೂ ತಂದೆ ತಾಯಿ ಅವಳನ್ನು ಕಷ್ಟಪಟ್ಟು ಓದಿಸ್ತಾ ಇದ್ರು..! ಅವಳ ಓದಿಗಾಗಿಯೇ ಹಣವನ್ನು ಕಷ್ಟಪಟ್ಟು ಕೂಡಿಡ್ತಾ ಇದ್ರು..! ಅವಳು ಕೇಳಿದ್ದಕ್ಕೆಲ್ಲಾ ಯಸ್ ಅಂತಿದ್ರು..! ಅವಳ ತಂದೆ ಅವಳನ್ನು ಉದ್ಯಮಿ ಮಾಡ್ಬೇಕು ಅಂತ ಕನಸನ್ನು ಕಂಡಿದ್ರು..! ತಾನು ನಡೆಸುತ್ತಿದ್ದ ಸಣ್ಣ ಅಂಗಡಿಯಿಂದ ಬರುತ್ತಿದ್ದ ಹಣದಲ್ಲಿ ಸ್ವಲ್ಪ ಭಾಗವನ್ನು ಇವಳಿಗಾಗಿಯೇ ಕೂಡಿಡ್ತಿದ್ರು..! ಆದರೆ ಈ ಮಗಳು ಅಪ್ಪ-ಅಮ್ಮನ ಆಸೆಗೆ ತಣ್ಣೀರು ಎರಚಿ ಯಾವನೋ ಒಬ್ಬನ ಜೊತೆ ಓಡಿ ಹೋಗಿ ಬಿಟ್ಟಳು..! ಆಕೆ ಓಡಿ ಹೋಗಿದ್ದು ಯಾರ ಜೊತೆ ಗೊತ್ತಾ..?! ಅವಳಿಗೆ ಸ್ಯಾಮಸ್ಯಾಂಗ್ ಗ್ಯಾಲಾಕ್ಸಿ ಮೊಬೈಲ್ ಕೊಡಿಸಿದ್ದ ಹುಡುಗನೊಬ್ಬನ ಜೊತೆ..! ಅವಳ ಲೆಕ್ಕಾಚಾರದಲ್ಲಿ ಆತ ನನ್ನ ಪ್ರಿಯತಮ, ಅದಕ್ಕಾಗಿ ನನಗೆ ಅಷ್ಟೊಂದು ಒಳ್ಳೆಯ ಮೊಬೈಲ್ ಕೊಡಿಸಿದ್ದಾನೆಂದು..! ಅವಳ ಯೋಚನೆ ತಪ್ಪಾಗಿತ್ತು..! ಆ ಹುಡುಗನ ಜೊತೆ ಓಡಿ ಹೋಗಿ ತಪ್ಪು ಮಾಡಿ ಬಿಟ್ಟಿದ್ಲು..! ಇಂಥಾ ಮೊಬೈಲ್ ಕೊಡಿಸಿ.., ಆಸೆ ಹುಟ್ಟಿಸಿ ಕರ್ಕೊಂಡು ಹೋಗಿ.. ಭಿಕ್ಷೆ ಬೇಡೋಕೆ ಹಚ್ಚುವ ದೊಡ್ಡ ಜಾಲವೇ ಇದೆ..! ವಯಸ್ಸಿಗೆ ಬಂದಾಗಾ ಸಾಮಾನ್ಯವಾಗಿ ಈ ಪ್ರೀತಿ-ಗೀತಿ ಇತ್ಯಾದಿ ಇತ್ಯಾದಿ ಹುಚ್ಚು ಹೆಚ್ಚಾಗುವುದು ಕಾಮನ್..! ಇದನ್ನೇ ಬಂಡವಾಳವಾಗಿಸಿಕೊಂಡು ಹೆಣ್ಣುಮಕ್ಕಳ ದಾರಿ ತಪ್ಪಿಸುವರಿದ್ದಾರೆ..! ಭಿಕ್ಷಾಟನೆ ಒಂದು ಉದ್ಯಮವಾಗಿದೆ. ಇವೆಲ್ಲಾ ಆ `ಇಂದು’ಗೆ ಅರ್ಥವಾಗುವಷ್ಟರಲ್ಲಿ ಆಕೆ..ಈಗ ಎಲ್ಲಿದ್ದಾಳೋ..! ಇದು ಕಟ್ಟುಕತೆಯಲ್ಲ. ಈ ಬಗ್ಗೆ ಅನಂತ ಶರ್ಮಾ ಎಂಬ ಬರಹಗಾರರೊಬ್ಬರು ಇಂಗ್ಲೀಷ್ ಭಾಷೆಯ ವೆಬ್ ಪೋರ್ಟಲ್ ಒಂದರಲ್ಲಿ ಬರೆದಿದ್ದಾರೆ. ಈ `ಇಂದು’ ಬೇರೆ ಯಾರೂ ಅಲ್ಲ. ಬರಹಗಾರ್ತಿಯ ಸಹಾಯಕಿ `ಸವಿತಾ’ರ ಮಗಳಂತೆ..!
ಕಳೆದ ಭಾನುವಾರ ಬೆಳಿಗ್ಗೆ ಬೆಳಿಗ್ಗೇನೆ ಸವಿತಾ ಇವರ ಬಳಿಯಲ್ಲಿ ಎಲ್ಲಾ ವಿಚಾರವನ್ನು ಹೇಳಿ ಅತ್ತರು. ಇವರಿಗೆ ಸಮಾಧಾನ ಮಾಡಿ, ಯಾವುದೋ ಕೆಲಸದ ಮೇಲೆ ಹೊರ ಹೋಗ್ತಾರೆ. ಆಗ ಮತ್ತೊಂದು ಘಟನೆ ನಡೆಯುತ್ತಂತೆ..! ಕ್ಯಾಬ್ ಬುಕ್ ಮಾಡೋಕೆ ಆಗದೇ ಇದ್ದಿದ್ದರಿಂದ ಆಟೋದಲ್ಲಿ ಹೋಗ್ತಾರೆ. ಆಗ ಟ್ರಾಫಿಕ್ ಸಿಗ್ನಲ್ ನಲ್ಲಿ ಆಟೋ ನಿಂತಾಗ ಒಬ್ಬ ಹುಡುಗ ಬಂದು ಇವರ ಕಾಲಿಗೆ ಬೀಳ್ತಾನೆ..! ಭಿಕ್ಷೆ ಹಾಕಿ ಅಂತ ಬೇಡ್ತಾನೆ..! ಮನೆಯಲ್ಲಿ ತನ್ನ ಸಹಾಯಕಿಯ ಮಗಳ ಕತೆಯನ್ನು ಕೇಳ್ಕೊಂಡು ಬಂದಿದ್ದ ಇವರಿಗೆ ಭಿಕ್ಷೆ ಹಾಕ್ಬೇಕು ಅಂತ ಅನಿಸಲ್ಲ..! “ನೀನು ಇನ್ನೊಮ್ಮೆ ಕಾಲಿಗೆ ಬಿದ್ರೆ ಪೊಲೀಸ್ ಗೆ ಕಂಪ್ಲೆಂಟ್ ಮಾಡ್ತೀನಿ’ ಅಂತ ಹೇಳ್ತಾರೆ..! ಅದಕ್ಕೂ ತಲೆಕೆಡಿಸಿಕೊಳ್ಳದ ಹುಡುಗ ಮತ್ತೆ ಮತ್ತೆ ಕಾಲಿಗೆ ಬೀಳ್ತಾನೆ..! ಆಗ ಅವರು ದಾರಿಯಲ್ಲಿ ತಿನ್ನೋಕೆ ಅಂತ ಇಟ್ಕೊಂಡಿದ್ದ `ಸ್ಯಾಂಡ್ವಿಚ್’ ಅನ್ನು ಆ ಹುಡುಗನಿಗೆ ಕೊಡ್ತಾರೆ..! ದುಡ್ಡು ಕೊಟ್ರೆ ಆ ಹುಡುಗನ ಮ್ಯಾನೇಜರ್ ಗೆ ಹೋಗುತ್ತೆ..! ಇದನ್ನು ಕೊಟ್ಟರೆ ಪಾಪ, ಆ ಹುಡುಗ ತಿನ್ತಾನೆ ಅನ್ನೋ ಕಾರಣಕ್ಕಾಗಿ ಚಿಲ್ಲರೆ ಕೊಡೊ ಬದಲು `ಸ್ಯಾಂಡ್ವಿಚ್’ ಕೊಡ್ತಾರೆ..! ಆದ್ರೆ ಆ ಹುಡುಗ ಅದನ್ನ ಏನ್ ಮಾಡ್ತಾನೆ ಗೊತ್ತಾ..?! ಅಲ್ಲೇ ಪಕ್ಕದಲ್ಲಿದ್ದ ಎಟಿಎಂ ಹತ್ತಿರ ಹೋಗಿ ಎಸೆಯುತ್ತಾನಂತೆ..! ಅಷ್ಟೇ ಅಲ್ಲದೇ ಆತ ಡ್ರಗ್ಸ್ ಕೂಡ ಹೀರುತ್ತಾ ನಿಲ್ತಾನಂತೆ..!
ದಯವಿಟ್ಟು ಭಿಕ್ಷೆ ಹಾಕೋಕೆ ಹೋಗ್ಬೇಡಿ ಸಾರ್. ದುಡ್ಡು ಕೊಡಬೇಕು ಅನ್ನಿಸಿದ್ರೆ ಅನಾಥಶ್ರಮಕ್ಕೋ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೋ ಕೊಡಿ..! ಬಡವರ ಕಷ್ಟವನ್ನೇ, ಆಸೆಯನ್ನೇ ಬಂಡವಾಳವಾಗಿಸಿಕೊಂಡ ಒಂದಿಷ್ಟು ಜನ ಭಿಕ್ಷೆ ಬೇಡುವುದನ್ನು ಉದ್ಯಮವನ್ನಾಗಿಸಿ ಕೊಂಡಿದ್ದಾರೆ..!
ಸ್ಟೋರಿ ಓದಿದ್ರಲ್ಲಾ.. ಇನ್ಮುಂದೆ ಭಿಕ್ಷೆ ಹಾಕ್ತೀರಾ..!?
- ಶಶಿಧರ ಡಿ ಎಸ್ ದೋಣಿಹಕ್ಲು
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com