ಈ ಉಪನ್ಯಾಸಕಿ ಎಲ್ಲರಿಗೂ ಇಷ್ಟವಾಗೋ ನಿರೂಪಕಿ…!

Date:

ನಿರೂಪಕಿಯಾಗಿ ಮಾಧ್ಯಮ ಲೋಕಕ್ಕೆ ಪರಿಚಿತರಾದ್ರು…! ಇದ್ದಕ್ಕಿದ್ದಂತೆ ದೂರಸರಿದ್ರು…! ಹಾಗಂತ ಕಾಣೆಯಾಗಿಲ್ಲ, ಮತ್ತೆ ಬರ್ತಾರೆ…! ಆದ್ರೆ, ಸದ್ಯಕ್ಕೆ ಮಾಧ್ಯಮ ವಿದ್ಯಾರ್ಥಿಗಳಿಗೆ ಪಾಠ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ…!


ಪಟಪಟ ಚಟಪಟ ಮಾತಾಡ್ತಾರೆ…! ಇವ್ರ ಮಾತಲ್ಲಿ ತುಂಬಾ ಆತ್ಮೀಯತೆ ಇರುತ್ತೆ…! ಮುದ್ದುಮುಖ, ಮಗುವಿನಂತಾ ಮನಸ್ಸು. ಇವರು ಉಪನ್ಯಾಸಕಿ, ಎಲ್ಲರಿಗೂ ಇಷ್ಟವಾಗೋ ನಿರೂಪಕಿ ಶ್ರುತಿ ಜೈನ್.


ನೀವು ಇವ್ರನ್ನು 2-3 ವರ್ಷದ ಹಿಂದಷ್ಟೇ ಈ-ಟಿವಿ ಕನ್ನಡದಲ್ಲಿ ನೋಡಿರ್ತೀರಿ. ಈಗ ನೆನಪಾಗ್ತ ಇರಬಹುದು…!? ಜೊತೆಗೆ ಈ ಚೆಲುವೆ ಇಷ್ಟುಬೇಗ ಮೀಡಿಯಾದಿಂದ ಯಾಕೆ ಮರೆಯಾದ್ರು ಅಂತ ಯೋಚಿಸ್ತಿರಬಹುದು…!? ಇಲ್ಲ, ತಾತ್ಕಾಲಿಕವಾಗಿ ಮಾಧ್ಯಮ ಕ್ಷೇತ್ರದಿಂದ ಹಿಂದೆಸರಿದ್ದಾರೆ. ಮುಂದೆ ಖಂಡಿತಾ ವಾಪಸ್ಸಾಗ್ತಾರೆ. ಮಾಧ್ಯಮಲೋಕದಲ್ಲಿ ತನ್ನ ಛಾಪನ್ನು ಮೂಡಿಸೋ ಕನಸು, ತುಡಿತ ಇವರಲ್ಲಿದೆ. ಇವರ ಕಿರುಪರಿಚಯ ಇಲ್ಲಿದೆ.


ಶ್ರುತಿ ಜೈನ್ ಮೂಲತಃ ಕಾರ್ಕಳದವರು. ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ. ತಂದೆ ಧರಣೇಂದ್ರ, ತಾಯಿ ಸುಜಾತ, ತಮ್ಮ ನವೀನ್ ಜೈನ್. ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ (ಬಿಎ) ಶಿಕ್ಷಣವನ್ನು ಕಾರ್ಕಳದಲ್ಲಿ ಪೂರೈಸಿದ್ರು. ಪ್ರಾಧ್ಯಾಪಕರೊಬ್ಬರು, ನೀನು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡಿ. ತುಂಬಾ ಚೆನ್ನಾಗಿ ಮಾತಾಡ್ತೀಯ… ಆ್ಯಂಕರ್ ಆಗ್ಬಹುದು ಅಂತ ಸಲಹೆ ಕೊಟ್ರು. ಡಿಗ್ರಿ ಮುಗಿದ ಮೇಲೆ ಏನ್ ಮಾಡೋದ್, ಏನ್ ಓದೋದು ಅಂತ ತಲೆಗೆ ಹುಳ ಬಿಟ್ಕೊಂಡಿದ್ದ ಶ್ರುತಿಗೆ ತನ್ನ ಪ್ರಾಧ್ಯಾಪಕರು ಹೇಳಿದ್ದು ಸರಿ ಇದೆ ಅಂತ ಅನಿಸ್ತು. ಪತ್ರಿಕೋದ್ಯಮದಲ್ಲಿ ಸ್ನಾತ್ಕೋತ್ತರ ಪದವಿ ಪಡೆಯಲು ನಿರ್ಧರಿಸಿದ್ರು.


ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ‘ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ’ ಸ್ನಾತಕೋತ್ತರ ಪದವಿಗೆ ಸೇರಿದ್ರು. ಕಾಲೇಜು ವಿದ್ಯಾರ್ಥಿಗಳೇ ನಡೆಸುತ್ತಿದ್ದ ‘ನಮ್ಮೂರ ವಾರ್ತೆ’ ಚಾನಲ್‍ನಲ್ಲಿ ಸ್ಕ್ರಿಪ್ಟ್ ಬರೆಯೋದು, ವಾಯ್ಸ್ ವೋವರ್ ಕೊಡೋದು, ಆ್ಯಂಕರಿಂಗ್ ಮಾಡೋದನ್ನು ಮಾಡ್ತಾ ಮಾಡ್ತಾ, ಕಲೀತಾ ಕಲೀತಾ ತಮಗೇ ಗೊತ್ತಿಲ್ಲದಂತೆ ಮಾಧ್ಯಮವನ್ನು ಪ್ರೀತಿಸತೊಡಗಿದ್ರು. ಇದರಲ್ಲೇ ಬದುಕು ಕಟ್ಟಿಕೊಳ್ಳಬೇಕು ಅಂತ ಡಿಸೈಡ್ ಮಾಡಿಬಿಟ್ರು. ‘ನಮ್ಮೂರ ವಾರ್ತೆ’ ಗೆ ಸುಮಾರು 10 ವರ್ಷಗಳ ಇತಿಹಾಸವಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಆರಂಭವಾದ ಮೊಟ್ಟಮೊದಲ ಚಾನಲ್ ಇದು.


ಹೀಗೆ ನಮ್ಮೂರ ವಾರ್ತೆಯಲ್ಲಿ ಪ್ರಾಯೋಗಿಕ ಅನುಭವ ಪಡೆದರು. ಸ್ಥಳಿಯ ಚಾನಲ್‍ನಲ್ಲಿ ಇಂಟರ್ನ್‍ಶಿಪ್ ಪೂರೈಸಿದ್ರು. ಅಷ್ಟೊತ್ತಿಗೆ ಈ-ಟಿವಿ ಕನ್ನಡದವರು ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್ ನಡೆಸಿದ್ರು. ಶ್ರುತಿ ಆಯ್ಕೆಯಾದ್ರು. ಪಿಜಿ ಮುಗಿಯುತ್ತಿದ್ದಂತೆ 2014ರಲ್ಲಿ ಈ-ಟಿವಿ ಮೂಲಕ ವೃತ್ತಿಜೀವನ ಆರಂಭಿಸಿದ್ರು. ಸ್ಕ್ರಿಪ್ಟ್ ಬರೆಯೋದು, ಬ್ರೇಕಿಂಗ್ ಪಾಯಿಂಟ್ಸ್ ಮಾಡ್ಕೊಳ್ಳೋದು, ನ್ಯೂಸ್ ಓದೋದನ್ನು ಪ್ರಾಕ್ಟಿಸ್ ಮಾಡಿದ್ರು. ಬಿಡುವಿದ್ದಾಗಲಿಲ್ಲಾ… ಇದೇ ಕೆಲಸ…! ತನಗೆ ತಾನೇ ಗುರುವಾಗಿ ತುಂಬಾ ಕಲಿತುಕೊಳ್ಳೋ ಪ್ರಯತ್ನ ಅವರದ್ದಾಗಿತ್ತು. ಕೊನೆಗೆ ಈ-ಟಿವಿ ಪರದೆ ಅಲಂಕರಿಸಿಯೇ ಬಿಟ್ಟರು.


ಅದಿನ್ನೂ ಇವರ ವೃತ್ತಿಜೀವನದ ಆರಂಭ. ಕಲಿಕೆಯ ಹಂತವದು. ಒಂದು ದಿನ ಸ್ಕ್ರೀನ್‍ನಲ್ಲಿದ್ದರು. ಮೆಟ್ರೋ ನ್ಯೂಸ್ ಓದ್ತಿದ್ರು. ಏನೋ ಸಣ್ಣತಪ್ಪಾಯ್ತು. ಪ್ಯಾನಲ್ ಪ್ರೊಡ್ಯುಸರ್ ಬೈದ್ರು. ತುಂಬಾ ಮೃದು ಸ್ವಭಾವದ ಶ್ರುತಿಗೆ ತಡೆದುಕೊಳ್ಳೋಕೆ ಆಗಲಿಲ್ಲ. ನಾನು ಟಿವಿ ಪರದೆಯಲ್ಲಿದ್ದೇನೆ ಅನ್ನೋದು ಆ ಕ್ಷಣಕ್ಕೆ ಅರಿವಿಗೆ ಬರ್ಲಿಲ್ಲ. ಕಣ್ಣುತೇವಗೊಂಡಿತ್ತು. ಅಳುಮುಖದಲ್ಲೇ ಸುದ್ದಿ ಓದಿದ್ರು…! ಹೀಗೆ ಎರಡು ಬಾರಿ ಆಗಿತ್ತು…!


ಆಗ ಎಡಿಟರ್ ಜಿ.ಎನ್ ಮೋಹನ್ ಅವರು ಶ್ರುತಿನಾ ಕರೆದು, ‘ನೀನು ಶ್ರುತಿಯಾಗಿ ಅಲ್ಲಿ ಕುಳಿತು ಕೊಳ್ಳಬೇಡ. ಆ್ಯಂಕರ್ ಆಗಿ ನಮ್ಮ ಸಂಸ್ಥೆಯ ಪ್ರತಿನಿಧಿಯಾಗಿ ಕುಳಿತುಕೊ. ಆ ಕ್ಷಣದಲ್ಲಿ ಬೇಜಾರಾದ್ರೆ, ನೋವಾದ್ರೆ ಸ್ಕ್ರೀನ್ ನಲ್ಲಿ ಹೊರ ಹಾಕಬಾರದು. ಸ್ಟೂಡಿಯೋದಿಂದ ಆಚೆ ಬಂದ ಮೇಲೆ ಮಾತಾಡಿ ಸರಿಪಡಿಸಿಕೊಳ್ಳಬೇಕು’ ಎಂದಿದ್ದರಂತೆ. ಈ ಘಟನೆ ಮರೆಯಲಾಗಲ್ಲ. ಮೋಹನ್ ಸರ್ ಅವಕಾಶ ನೀಡಿ, ತುಂಬಾ ಪ್ರೋತ್ಸಾಹ ನೀಡಿದ್ರು ಅಂತ ಹೇಳಿಕೊಳ್ತಾರೆ ಶ್ರುತಿ.


2015ರಲ್ಲಿ ರೈತರ ಸರಣಿ ಆತ್ಮಹತ್ಯೆ ನಡೆದಾಗ ಈ-ಟಿವಿ ನಿಮ್ಮ ಜೊತೆ ನಾವಿದ್ದೇವೆ ಅಂತ ರೈತರಿಗೆ ಧೈರ್ಯ ತುಂಬುವ ಅಭಿಯಾನವನ್ನು ಹಮ್ಮಿಕೊಂಡಿತ್ತು. ಒಮ್ಮೆ ಶ್ರುತಿ ಆನ್ ಏರ್ ಇರುವಾಗ ಕಬ್ಬು ಬೆಳೆಗಾರರೊಬ್ಬರು ನನ್ನಿಂದ ಬದುಕೋಕೆ ಆಗಲ್ಲ, ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳ್ತಿದ್ರು.


ಆ ಕ್ಷಣ ಆ ರೈತಗೆ ಧೈರ್ಯ ತುಂಬಿ, ‘ಇಲ್ಲಾ ನಾನು ಆತ್ಮಹತ್ಯೆ ಮಾಡಿಕೊಳ್ಳಲ್ಲ’ ಅಂತ ಹೇಳಿಸಬೇಕಾದ ಸವಾಲು ಶ್ರುತಿ ಅವರದ್ದು. ಸುಮಾರು 20 ನಿಮಿಷಗಳ ಕಾಲ ಆ ರೈತನ ಜೊತೆ ಮಾತಾಡಿ, ಧೈರ್ಯ ತುಂಬಿ, ಮನಪರಿವರ್ತನೆ ಮಾಡಿ, ನಾನು ಸೂಸೈಡ್ ಮಾಡಿಕೊಳ್ಳಲ್ಲ ಅನ್ನೋ ಮಾತನ್ನು ಆ ನೊಂದ ರೈತನಿಂದಲೇ ಹೇಳಿಸಿದ್ದರು ಶ್ರುತಿ. ಇದು ಇವರು ನಡೆಸಿಕೊಟ್ಟ ಕೊನೆಯ ಕಾರ್ಯಕ್ರಮ. ನಂತರ ಆರೋಗ್ಯ ಸಮಸ್ಯೆಯಿಂದಾಗಿ ಮೀಡಿಯಾವನ್ನು ಬಿಡಬೇಕಾಗಿ ಬಂತು.


ನಂತರ ಇದೀಗ ಓದಿದ ಎಸ್‍ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮದ ಉಪನ್ಯಾಸಕಿಯಾಗಿ ಕೆಲಸ ಮಾಡ್ತಿದ್ದಾರೆ. ನಿರೂಪಕರನ್ನು ತಯಾರು ಮಾಡ್ತಿದ್ದಾರೆ. ಮಧ್ಯಾಹ್ನದ ಪ್ರಾಕ್ಟಿಲ್ ಕ್ಲಾಸ್‍ಗಳಲ್ಲಿ ನಿರೂಪಣೆಯ ತರಬೇತಿಯನ್ನು ನೀಡ್ತಾರೆ. ಇದು ಕೇವಲ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾತ್ರವಲ್ಲ. ಬೇರೆ ಬೇರೆ ವಿಭಾಗದ ಆಸಕ್ತ ವಿದ್ಯಾರ್ಥಿಗಳು ಪಾಲ್ಗೊಳ್ಳುವ ತರಗತಿ.


“ಈ-ಟಿವಿಯಲ್ಲಿ ಕಳೆದ ಕ್ಷಣಗಳನ್ನು ಎಂದೂ ಮರೆಯಲಾಗಲ್ಲ. ಇಲ್ಲಿ ಸಾಕಷ್ಟು ಕಲಿತಿದ್ದೇನೆ. ಶರ್ಮಿತಾ ಶೆಟ್ಟಿ, ಸೌಮ್ಯ ಮಳಲಿ ಅವ್ರು ತುಂಬಾನೇ ಹೇಳಿಕೊಟ್ಟಿದ್ದಾರೆ. ನಾನು ನ್ಯೂಸ್ ಓದಲು ಹೋಗುವ ಮುನ್ನ ಸೌಮ್ಯ ಮಳಲಿ ಅವ್ರತ್ರ ಏನ್ ಕೇಳ್ಬೇಕು, ಏನ್ ಕೇಳ್ಬಾರ್ದು ಅಂತೆಲ್ಲಾ ಕೇಳಿಕೊಂಡು ಹೋಗಿದ್ದೂ ಉಂಟು. ಇನ್ನು, ನನ್ನನ್ನು ಆ್ಯಂಕರ್ ಆಗಿ ಸ್ಕ್ರೀನ್ ಮೇಲೆ ನೋಡ್ಬೇಕೆಂದು ಪ್ರತಿ ಹಂತದಲ್ಲಿ ನನಗೆ ಸಪೋರ್ಟ್ ಮಾಡಿದವ್ರು ಫ್ಯಾಮಿಲಿ ಫ್ರೆಂಡ್, ನನ್ನ ಹಿತೈಷಿ ಪದ್ಮಪ್ರಸಾದ್ ಜೈನ್ ಅವ್ರು’’ ಎನ್ನುತ್ತಾರೆ ಶ್ರುತಿ.


ಎಡ-ಬಲ ಎಂಬ ಸೈದ್ಧಾಂತಿಕ ನಿಲುವನ್ನು ಇಟ್ಕೊಂಡು ಮಾಧ್ಯಮಕ್ಕೆ ಹೋಗಬಾರದು. ‘ಮಾಧ್ಯಮ ಸಿದ್ಧಾಂತ’ ಇಟ್ಕೊಳ್ಳಬೇಕು. ಟ್ರೆಂಡ್ ಫಾಲೋ ಮಾಡೋದಲ್ಲ, ಸೆಟ್ ಮಾಡ್ಬೇಕು ಎಂಬುದು ಶ್ರುತಿ ಜೈನ್ ಹೊಸಬರಿಗೆ ನೀಡುವ ಕರೆ. ಮೊದಲೇ ಹೇಳಿದಂತೆ ಎಸ್‍ಡಿಎಂ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಇವರು, ಆಗಾಗ ಧಾರ್ಮಿಕ ಕಾರ್ಯಕ್ರಮಗಳ ನಿರೂಪಣೆಗೂ ಹೋಗ್ತಿರ್ತಾರೆ. ಸಿನಿಮಾ, ಧಾರವಾಹಿಗಳಿಂದ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಆದರೆ, ಮಾಧ್ಯಮ ಕ್ಷೇತ್ರದಲ್ಲೇ ಬೆಳೆಯುವ ಆಸೆ. ಮಾಡೆಲಿಂಗ್ ಇವರ ಹವ್ಯಾಸ. ಬರವಣಿಗೆ ಬಗ್ಗೆ ಹೆಚ್ಚಿನ ಆಸಕ್ತಿ. ಆಗಾಗ ಪತ್ರಿಕೆಗಳಿಗೆ ಬರೆಯುತ್ತಿರುತ್ತಾರೆ. ಈಗ ಟೀಚಿಂಗ್ ಪ್ರೊಫೆಶನ್ ಎಂಜಾಯ್ ಮಾಡ್ತಿದ್ದಾರೆ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...