ಟಿಶ್ಯೂ ಪೇಪರ್ ಜೊತೆ ಇದ್ದ ಗುಲಾಬಿ ತಾಕಿತು ಎಲ್ಲರೆದೆಯಾ…

Date:

ಹಾಡಿನ ಜಾಡು ಹಿಡಿದು….

||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…!‌ ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||

ಭಾಗ-5

ಶುಭಮಂಗಳ

‘ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ… ಏನೆಂದು ಕೇಳಲು ಹೇಳಿತು ಜೇನಂತ ಸಿಹಿನುಡಿಯಾ….’ ಹೂವೊಂದು ಬಳಿಬಂದ್ರೆ ನಮಗೆಲ್ಲಾ ಮನಸು ಹಗುರಾಗಿ, ಒಂಥರಾ ಏನೋ ಹೃದಯ ನಿರಾಳವಾಗುತ್ತೆ. ಶುಭಮಂಗಳ ಸಿನ್ಮಾದಲ್ಲಿ ಹೂವೊಂದು ಬಳಿಬಂದು ಸಾಕಷ್ಟು ಸಿಹಿಯಾದ ಮಾತುಗಳನ್ನ ಹೇಳಿದೆಯಂತೆ. ಅಷ್ಟಕ್ಕೂ ಈ ಹಾಡು ಚಿತ್ರದಲ್ಲಿ ಇರಲೇ ಇಲ್ಲ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಆಗ್ಲೇ ಚಿತ್ರದ ರೆಕಾರ್ಡಿಂಗ್‍ಗಾಗಿ ಚೆನ್ನೈಗೆ ಹೋಗಿದ್ರು. ಅಚಾನಕ್ಕಾಗಿ ಸಿಕ್ಕ ಗೀತರಚನೆಕಾರ ವಿಜಯನಾರಸಿಂಹ, ಈ ಚಿತ್ರದಲ್ಲಿ ನಂಗೆ ಒಂದೇ ಹಾಡು ಬರೆಯೊಕೆ ಚಾನ್ಸ್ ಕೊಟ್ರಲ್ಲ ಇನ್ನೊಂದು ಹಾಡು ಬರೆಯೋಕ್ ಚಾನ್ಸ್ ಕೊಡಪ್ಪಾ ಅಂತ ಪುಟ್ಟಣ್ಣ ಅವ್ರನ್ನ ಕೇಳಿದ್ರಂತೆ.

ನೆಕ್ಸ್ಟ್ ಸಿನ್ಮಾದಲ್ಲಿ ನೊಡೋಣ ಅಂದ ಪುಟ್ಟಣ್ಣ ಸ್ಟುಡಿಯೊದೊಳಗೆ ಹೋಗೇ ಬಿಟ್ರು. ಸ್ಟುಡಿಯೋದೊಳಗೆ ಟೀ ಕೊಡೋಕೆ ಬಂದ ಹುಡ್ಗ ಅರ್ಜಂಟಾಗಿ ಹೊರಡೋಕೆ ತವಕಿಸಿದ. ಯಾಕೋ ಅಷ್ಟು ಅರ್ಜಂಟು ಅಂದ್ರಂತೆ ಪುಟ್ಟಣ್ನ. ಇಲ್ಲ ಸಾರ್ ಪಕ್ಕದಲ್ಲಿ ವಿಜಯನಾರಸಿಂಹ ಸರ್‍ಗೂ ಟೀ ಕೊಡಬೇಕು ಅದ್ಕೆ ಅಂದನಂತೆ. ಆಗ ಪಕ್ಕದಲ್ಲೇ ಇದ್ದ ಟಿಶ್ಯೂ ಪೇಪರ್‍ನಲ್ಲಿ ಏನೋ ಬರೆದು ಜೊತೆಗೆ ಒಂದು ಗುಲಾಬಿಯನ್ನು ಇಟ್ಟು, ವಿಜಯ್ ಅವ್ರಿಗೆ ಕೊಡು ಎಂದು ಆ ಹುಡುಗನಿಗೆ ಹೇಳಿದ್ರಂತೆ ಪುಟ್ಟಣ್ಣ. ಪಕ್ಕದ ಪ್ಲೋರ್‍ನಲ್ಲಿದ್ದ ವಿಜಯನಾರಸಿಂಹ ಅವ್ರಿಗೆ ಟಿಶ್ಯೂ ಹಾಗೂ ಗುಲಾಬಿ ಬಂದು ಸೇರಿತು. ಅದರಲ್ಲಿದ್ದಿದ್ದು, `ಈಗ್ಲೆ ಒಂದು ಹಾಡನ್ನ ಬರೆದುಕೊಟ್ರೆ ಅದನ್ನ ಶುಭಮಂಗಳದಲ್ಲಿ ಬಳಸಿಕೊಳ್ತೀನಿ’. ಟಿಶ್ಯೂ ಜೊತೆ ಗುಲಾಬಿಯನ್ನ ನೊಡಿದ ವಿಜಯನಾರಸಿಂಹ ಒಂದು ಸೆಕೆಂಡ್ ಖುಷಿಯಲ್ಲಿ ನೊಡಿದ್ರು.

ಆಗಲೇ, ಅದೇ ಸನ್ನಿವೇಶದಿಂದ ಮೈಮರೆತರು. ಹೊಳೆದ ಪದಗಳು, ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ… ಏನೆಂದು ಕೇಳಲು ಹೇಳಿತು ಜೇನಂತ ಸಿಹಿನುಡಿಯಾ… ಹಾಡು ರೆಡಿಯಾಗಿ ಪುಟ್ಟಣ್ಣ ಅವ್ರ ಕೈ ತಲುಪಿದ್ದೇನೋ ಆಯ್ತು ಆದ್ರೆ ಹಾಡೋಕೆ ಯಾರೂ ಇರಲಿಲ್ಲ. ಪಕ್ಕದ ಸೆಟ್‍ನಲ್ಲೇ `ಸೀತೆಯಲ್ಲ ಸಾವಿತ್ರಿ’ ಸಿನ್ಮಾದ ಶೂಟಿಂಗ್‍ನಲ್ಲಿದ್ದ ಆರ್ ಎನ್ ಸುದರ್ಶನ್ ಅವ್ರನ್ನ ಕರೆಸಿಕೊಂಡು ಹೂವಿನ ಹಾಡನ್ನು ಹಾಡಿಸಿದರು. ಹಾಡನ್ನ ಚಿತ್ರದ ಯಾವ ಭಾಗದಲ್ಲಿ ತೂರಿಸಬೇಕಪ್ಪಾ ಅನ್ನೋ ಯೋಚ್ನೆ ಬೇರೆ. ಚಿತ್ರದ ಹೀರೋ ಬರ್ತ್‍ಡೇ ಟೈಮಲ್ಲಿ ನಾಯಕಿ ಒಂದು ಹೂವು ಕೊಟ್ಟ ಸನ್ನಿವೇಶವನ್ನ ಸೃಷ್ಟಿಸಿ ಅಲ್ಲೇ ಹಾಡನ್ನು ಕೊನೆಗೂ ಸೇರಿಸಲಾಯ್ತು. ಆಕಸ್ಮಿಕವಾಗಿ ಹುಟ್ಟಿದ ಈ ಹಾಡು ಇಂದು ಸಾಕಷ್ಟು ಜನ್ರ ಫೇವರೀಟ್ ಸಾಂಗ್‍ಗಳಲ್ಲಿ ಒಂದು.

-ಅಕ್ಷತಾ

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...