ಹಾಸಿಗೆಯಲ್ಲೂ ಕ್ರಿಕೆಟ್ ಆಡುತ್ತಿದ್ದ ಶುಬ್ ಮನ್…!

Date:

ಕಿರಿಯರ ವಿಶ್ವಕಪ್ ಯುವ ಕ್ರಿಕೆಟಿಗರಿಗೆ ಒಳ್ಳೆಯ‌ ವೇದಿಕೆ. ಇಲ್ಲಿ ತಮ್ಮ ಸಾಮಾರ್ಥ್ಯ ಸಾಭೀತು ಪಡಿಸಿದ ಕ್ರಿಕೆಟಿಗರು ರಾಷ್ಟ್ರೀಯ ತಂಡದಲ್ಲಿ ಅವಕಾಶಗಿಟ್ಟಿಸಿಕೊಂಡು ಮಿಂಚಿದ್ದಾರೆ.


ಪ್ರಸ್ತುತ ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ನಲ್ಲಿಯೂ ನಾನಾ ಯುವ ಕ್ರಿಕೆಟಿಗರು‌ ಮಿಂಚುತ್ತಿದ್ದಾರೆ.


ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಆಡುತ್ತಿರುವ ಟೀಂ ಇಂಡಿಯಾದ ಆಟಗಾರರು ಸಹ ಭವಿಷ್ಯದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸ ಬಲ್ಲವರಾಗಿದ್ದಾರೆ. ಇವರುಗಳಲ್ಲಿ ಪ್ರಮುಖ ಹೆಸರು ಬಲಗೈ ಬ್ಯಾಟ್ಸ್ ಮನ್ ಶುಬ್ ಮನ್ ಗಿಲ್.


ಪಾಕಿಸ್ತಾನದ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಜೇಯ ಶತಕ( 102) ಸಿಡಿಸಿದ ಹೀರೋ.
ಪಂಜಾಬ್ ನ ಫಜಿಲ್ಕಾ ಎಂಬ ಹಳ್ಳಿಯಿಂದ ಬಂದ ಇವರು 3ನೇ ವಯಸ್ಸಿನಲ್ಲೇ ಕ್ರಿಕೆಟ್ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು. ಇಷ್ಟಪಡ್ತಿದ್ದುದು ಬ್ಯಾಟ್ ಮತ್ತು ಚೆಂಡನ್ನು ಮಾತ್ರ…! ಬೇರೆ ಯಾವ ಆಟಿಕೆಗಳನ್ನೂ ಇಷ್ಟಪಡ್ತಿರ್ಲಿಲ್ಲ…!


ಇವರ ತಂದೆ ಕೃಷಿಕರು. ಜಮೀನಲ್ಲಿ ಅಭ್ಯಾಸ ಮಾಡುವಾಗ ಮಗನಿಗೆ ಚೆಂಡೆಸೆಯಲು ಅಪ್ಪ ಒಬ್ಬ ಕೆಲಸಗಾರನನ್ನೂ ನೇಮಿಸಿದ್ದರು…!
ರಾತ್ರಿ ಮಲುಗುವಾಗಲು ಕ್ರಿಕೆಟ್ ಆಡಿಯೇ ಮಲಗುತ್ತಿದ್ದ ಶುಬ್ ಮನ್ ಬ್ಯಾಟ್ ಬಿಟ್ಟು ಇರುತ್ತಿರಲಿಲ್ಲ…! ಇವರಲ್ಲಿನ ಕ್ರಿಕೆಟ್ ಬಗೆಗಿನ ಆಸಕ್ತಿ ಕಂಡು ತಂದೆ ಕುಟುಂಬ ಸಮೇತ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದ ಬಳಿ ಬಾಡಿಗೆ ಮನೆಗೆ ಬಂದು‌ ನೆಲಿಸಿದ್ರು…!
ಇದನ್ನು ಸ್ವತಃ ಶುಬ್ ಮನ್ ಅವರ ತಂದೆ‌ ಲಖ್ವಿಂದರ್ ಸಿಂಗ್ ಹೇಳಿದ್ದಾರೆ..

Share post:

Subscribe

spot_imgspot_img

Popular

More like this
Related

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಕೈ ಬಿಡುವಂತೆ ನಿಖಿಲ್ ಕುಮಾರಸ್ವಾಮಿ ಆಗ್ರಹ

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಕೈ ಬಿಡುವಂತೆ ನಿಖಿಲ್ ಕುಮಾರಸ್ವಾಮಿ...

‘ಗೋ ಬ್ಯಾಕ್ ಗವರ್ನರ್’ ರಾಜಕೀಯ ನಾಟಕ: ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

‘ಗೋ ಬ್ಯಾಕ್ ಗವರ್ನರ್’ ರಾಜಕೀಯ ನಾಟಕ: ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ...

ಏಕ‌ಸದಸ್ಯ ಪೀಠದ ತೀರ್ಪು ರದ್ದು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಅನುಮತಿ

ಏಕ‌ಸದಸ್ಯ ಪೀಠದ ತೀರ್ಪು ರದ್ದು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಅನುಮತಿ ಬೆಂಗಳೂರು:...

ಲಷ್ಕರ್-ಎ-ತೈಬಾ ಸೇರ್ಪಡೆ ಸಂಚು ಪ್ರಕರಣ: ಶಿರಸಿಯ ಸಯ್ಯದ್ ಇದ್ರಿಸ್ ಗೆ 10 ವರ್ಷ ಶಿಕ್ಷೆ

ಲಷ್ಕರ್-ಎ-ತೈಬಾ ಸೇರ್ಪಡೆ ಸಂಚು ಪ್ರಕರಣ: ಶಿರಸಿಯ ಸಯ್ಯದ್ ಇದ್ರಿಸ್ ಗೆ 10...