ಸಿಯಾಚಿನ್ ಎಂಬ ಸಾವಿನ ಕಣಿವೆ..! ರಣಚಳಿಗೆ ದೇಹ ಮರಗಟ್ಟಿ ಪುಡಿಯಾಗುತ್ತದೆ..!

Date:

ಅದೇಕೋ ಮತ್ತೆ ನೆನಪಾಗಿದ್ದಾನೆ ಯೋಧ ಹನುಮಂತಪ್ಪ ಕೊಪ್ಪದ್. ಅವನೇನು ಸಣ್ಣ ಸಾವನ್ನು ಗೆದ್ದು ಬಂದಿರಲಿಲ್ಲ. ಆದರೆ ಯಮನ ಮುಂದೆ ಸಂಪೂರ್ಣವಾಗಿ ಸೆಣಸುವುದರಲ್ಲಿ ಸೋತು ಹೋದ. ಹನುಮಂತಪ್ಪ ಇಲ್ಲವಾದರೂ ಅವನು ಚಿರನೆನಪಾಗಿ ಕಾಡುತ್ತಿದ್ದಾನೆ. ಮೊದಲೇ ಹೇಳಿದಂತೆ ಇವತ್ತು ಮತ್ತೆ ಅವನು ನೆನಪಾದ. ಅವನ ಜೊತೆಗೆ ಸಿಯಾಚಿನ್ ಎಂಬ ಸಾವಿನ ಕಣಿವೆಯೂ ನೆನಪಾಗಿದೆ. ಅವನು ಸೆಣಸಾಡಿದ್ದು ಅಂತಿಥ ಸಾವನ್ನಲ್ಲ ಎಂಬುದಕ್ಕೆ ಸಿಯಾಚಿನ್ ಬಗ್ಗೆ ನಿಮ್ಮ ಗಮನಕ್ಕಿರಲಿ ಅಂತ ಈ ಲೇಖನ ಬರೆಯುತ್ತಿದ್ದೇನೆ.

ಅದು ದುರ್ಗಮ ಸಿಯಾಚಿನ್ ಅರ್ಥಾತ್ ಸಾವಿನ ಪ್ರದೇಶ. ಶತ್ರುಗಳ ಗುಂಡಿನ ಮೊರೆತಕ್ಕಿಂತ ಪ್ರಕೃತಿಯೇ ಇಲ್ಲಿ ಯಮರೂಪ ತಾಳುತ್ತದೆ. ಸಿಯಾಚಿನ್ ಪ್ರದೇಶದ ಹಿಮಪಾತದಲ್ಲಿ 1984ರಿಂದೀಚೆಗೆ ಎರಡೂ ದೇಶಗಳ ಎರಡು ಸಾವಿರಕ್ಕೂ ಅಧಿಕ ಸೈನಿಕರು ಸಾವನ್ನಪ್ಪಿದ್ದಾರೆ. 2012ರ ಏಪ್ರಿಲ್ 7 ಪಾಕಿಸ್ತಾನ ಸೇನೆಗೆ ದೊಡ್ಡ ದುರಂತದ ದಿನ. ಅಂದು ಹಿಮಪಾತದಲ್ಲಿ 140 ಪಾಕಿಸ್ತಾನದ ಯೋಧರು ಸಾವನ್ನಪ್ಪಿದ್ದರು. ಆ ಬಳಿಕವೇ ಪಾಕಿಸ್ತಾನದ ಸೇನೆಯ ಕಡೆಯಿಂದ ಸಿಯಾಚಿನ್ ಅನ್ನು ಸೇನೆರಹಿತವಲಯವನ್ನಾಗಿ ಮಾಡುವ ಬಲವಾದ ಪ್ರಸ್ತಾಪ ಕೇಳಿಬಂತು. ಸಿಯಾಚಿನ್ ಕಾಯುವುದಕ್ಕೆ ಭಾರತವು ಕೋಟ್ಯಾಂತರ ರುಪಾಯಿಗಳನ್ನು ಪ್ರತಿವರ್ಷ ಖರ್ಚು ಮಾಡುತ್ತಿದೆ.

indian army

ಇಂದು ಆಧುನಿಕ ತಂತ್ರಜ್ಞಾನಗಳು ಸಾಕಷ್ಟು ಬಂದಿವೆ. ಸೈನಿಕರು ದೈಹಿಕವಾಗಿ ಸ್ಥಳದಲ್ಲಿ ಇಲ್ಲದಿದ್ದರೂ ಒಂದು ಪ್ರದೇಶವನ್ನು ನಿಯಂತ್ರಿಸಬಹುದು. ಸಿಯಾಚಿನ್ನಂಥ ಜನವಸತಿರಹಿತ ಪ್ರದೇಶದಲ್ಲಂತೂ ಇದು ಸಾಧ್ಯ. ಉಪಗ್ರಹಗಳ ಕಣ್ಗಾವಲನ್ನೂ ಇಡಬಹುದು. ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ನಡುವೆ ಇಂಥದ್ದೇ ಒಂದು ಶಿಖರವಿದೆ. ಅವೆರಡೂ ದೇಶಗಳು ಆ ಪ್ರದೇಶವನ್ನು ಸೇನೆ ಇಲ್ಲದ ವಲಯವನ್ನಾಗಿಡಲು ಒಪ್ಪಂದ ಮಾಡಿಕೊಂಡಿವೆ.

ಸಿಯಾಚಿನ್ ಪ್ರದೇಶವನ್ನು ಸೇನೆ ಇಲ್ಲದ ವಲಯವನ್ನಾಗಿ ಮಾಡುವ ಸಂಬಂಧದಲ್ಲಿ ಈ ಮೊದಲು ಹಲವಾರು ಬಾರಿ ಮಾತುಕತೆಗಳು ನಡೆದಿವೆ. 1972ರ ಶಿಮ್ಲಾ ಒಪ್ಪಂದದ ಪೂರ್ವದಲ್ಲಿದ್ದ ನೆಲೆಗಳಿಗೆ ಸೇನೆಯನ್ನು ಮರಳಿಸಬೇಕು ಎನ್ನುವುದು ಈ ಪ್ರಸ್ತಾವಗಳಲ್ಲಿ ಒಂದಾಗಿತ್ತು. 1989ರಲ್ಲಿ ಸಿಯಾಚಿನ್ ಪ್ರದೇಶವನ್ನು ಸೇನೆಮುಕ್ತವಲಯವನ್ನಾಗಿ ಮಾಡುವ ಸಂಬಂಧದಲ್ಲಿ ಎರಡೂ ದೇಶಗಳು ಒಪ್ಪಂದವೊಂದಕ್ಕೆ ಸಹಿ ಹಾಕುವವರೆಗೆ ಮಾತುಕತೆಗಳು ನಡೆದಿದ್ದವು. ಆದರೆ ಆಗಿನ ಸರ್ಕಾರಗಳು ರಾಜಕೀಯ ಧೈರ್ಯವನ್ನು ತೋರಿಸಲಿಲ್ಲ. ಪ್ರಧಾನಿಗಳಾಗಿದ್ದ ರಾಜೀವ ಗಾಂಧಿ ಮತ್ತು ಬೆನಜಿರ್ ಭುಟ್ಟೋ ಈ ರೀತಿಯ ಒಪ್ಪಂದದ ಪರವಾಗಿದ್ದರೂ ಸಹಿ ಬೀಳಲಿಲ್ಲ. 1992ರಲ್ಲೂ ಈ ಸಂಬಂಧ ಉಭಯದೇಶಗಳ ನಡುವೆ ಮಾತುಕತೆಗಳು ನಡೆದು ಭಿನ್ನಾಭಿಪ್ರಾಯಗಳನ್ನು ಇನ್ನಷ್ಟು ಕಡಿಮೆ ಮಾಡಲಾಗಿತ್ತು. ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಮಂತ್ರಿ ನವಾಜ್ ಷರೀಫ್ ಉಭಯ ದೇಶಗಳ ನಡುವಿನ ಸಂಬಂಧವನ್ನು ಸೌಹಾರ್ದದ ನೆಲೆಯಲ್ಲಿ ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಿಯಾಚಿನ್ ಸಮಸ್ಯೆಗೆ ಒಂದು ರಾಜಕೀಯ ನಿರ್ಧಾರವನ್ನು ಕೈಗೊಳ್ಳುವುದಕ್ಕೆ ಇದು ಸಕಾಲವಾಗಿದೆ. ಎರಡೂ ದೇಶಗಳ ಸೈನಿಕರ ಹಿತದೃಷ್ಟಿಯಿಂದ ಇದು ಆಗಲೇಬೇಕಾದ ಕಾರ್ಯವಾಗಿದೆ.

ಅಲ್ಲಿ ಭಾರತದ ನೂರಾರು ಸೈನಿಕರು ಪಹರೆ ಕಾಯುತ್ತಿದ್ದಾರೆ. ಪಾಕಿಸ್ತಾನದ ಚೆಕ್ಪೋಸ್ಟ್ನಿಂದ ಕೇವಲ 400 ಮೀಟರ್ ದೂರದಲ್ಲಿ ಭಾರತದ ಸೈನ್ಯವಿದೆ. ಭಾರತ ತಾನೇ ಅಭಿವೃದ್ದಿ ಪಡಿಸಿದ ಚೀತಾ ಹೆಲಿಕಾಪ್ಟರ್ ಗಳು ಮಾತ್ರ ಅಲ್ಲಿಗೆ ಹೋಗಬಲ್ಲವು. 2 ರಿಂದ 30 ಸೆಕೆಂಡ್ನೊಳಗೆ ತನ್ನ ಕೆಲಸ ಮುಗಿಸಿ ಅಲ್ಲಿನ ಹೆಲಿಪ್ಯಾಡ್ನಿಂದ ಹಾರದಿದ್ದರೆ, ಶತ್ರುಗಳ ಗುಂಡಿಗೆ ಬಲಿಯಾಗಬೇಕಾಗುತ್ತದೆ. ಇಂತಹ ದುರ್ಗಮ ಸ್ಥಳವೇ ಸಿಯಾಚಿನ್ ಗ್ಲೇಸಿಯರ್. ಕುಮಾವೂನ್ ರೆಜಿಮೆಂಟ್ನ ಮೇಜರ್ ಆರ್. ಎಸ್. ಸಂಧು ಅವರ ನೇತೃತ್ವದ ಬೆಟಾಲಿಯನ್ 1984ರಲ್ಲಿ ಕಾರ್ಗಿಲ್ ನಿಂದ ಈಶಾನ್ಯಕ್ಕಿರುವ-ಎಪ್ಪತ್ತು ಕಿಲೋಮೀಟರ್ ಉದ್ದದ, ಸಮುದ್ರ ಮಟ್ಟದಿಂದ ಇಪ್ಪತ್ತು ಸಾವಿರ ಅಡಿ ಎತ್ತರವಿರುವ ಈ ಪ್ರದೇಶವನ್ನು ಪಾಕಿಸ್ತಾನದ ಕಪಿಮುಷ್ಟಿಯಿಂದ ಬಿಡಿಸಿಕೊಂಡಿತು. ಸಾಮಾನ್ಯವಾಗಿ ಮೈನಸ್ 50 ಡಿಗ್ರಿ ತಾಪಮಾನವಿರುವ ಸಿಯಾಚಿನ್ ಇಂದು ಭಾರತ-ಪಾಕಿಸ್ತಾನ ನಡುವಿನ ಮಾತುಕತೆಗಳ ಕೇಂದ್ರಬಿಂದುವಾಗಿದೆ.

1947ರಲ್ಲಿ ಜನಿಸಿದಾಗಿನಿಂದಲೂ ಕಾಶ್ಮೀರವನ್ನು ಪಡೆಯುವುದೇ ತನ್ನ ಏಕೈಕ ಗುರಿ ಎಂದು ಹೋರಾಡುತ್ತಿರುವ ಪಾಕಿಸ್ತಾನ, ಭಾರತದ ಮೇಲೆ ಬೇರೆ-ಬೇರೆ ರೀತಿಯಿಂದ ಒತ್ತಡ ಹೇರುತ್ತಲೇ ಬಂದಿದೆ. 48, 65, ಹಾಗೂ 99ರಲ್ಲಿ ಭಾರತದೊಂದಿಗೆ ನೇರ ಯುದ್ಧವನ್ನೇ ಮಾಡಿ ಅದು ಸೋತಿದೆ ಎಂಬುದು ಗೊತ್ತಿರುವ ಸಂಗತಿ. ಆದರೆ, ಅದೇ ಪಾಕಿಸ್ತಾನ 90, 95, 96 ಹಾಗೂ 99ರಲ್ಲಿ ನಾಲ್ಕು ಬಾರಿ ಸಿಯಾಚಿನ್ ಮೇಲೆ ದಾಳಿ ಮಾಡಿರುವುದು ಹಲವರಿಗೆ ಗೊತ್ತಿಲ್ಲ. 1999ರಲ್ಲಂತೂ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಹಾಗೂ ನವಾಜ್ ಷರೀಫ್, ಐತಿಹಾಸಿಕ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ ಕೇವಲ 17 ದಿನಗಳಲ್ಲಿ ಸಿಯಾಚಿನ್ ಮೇಲೆ ಪಾಕ್ ದಾಳಿ ಮಾಡಿತ್ತು.

ಸಿಯಾಚಿನ್ ಎಂದರೆ ಕಾಡು ಗುಲಾಬಿಗಳು ಇರುವ ಸ್ಥಳ. ಹಾಗಂತ ಯಾರು ಈ ಹೆಸರಿಟ್ಟರೋ, ಇಲ್ಲಿ ಗುಲಾಬಿಯ ಮಾತಿರಲಿ, ಗುಲಾಬಿ ಬಣ್ಣವೂ ಕಾಣುವುದಿಲ್ಲ. ಎತ್ತ ನೋಡಿದರೂ ಕಣ್ಣಿಗೆ ರಾಚುವ ಬಿಳಿ ಬಣ್ಣ. ಆದರೆ, ಕೆಲಕಾಲ ಇಲ್ಲಿ ಕಂಡದ್ದು ಎರಡೂ ದೇಶಗಳ ಸೈನಿಕರ ರಕ್ತದ ಕೆಂಪು ಬಣ್ಣ ಮಾತ್ರ. ಒಟ್ಟು ಅಲ್ಲಾಗಿದ್ದು ನಾಲ್ಕು ಯುದ್ಧ. ಸಿಯಾಚಿನ್ನಲ್ಲಿ ಮದ್ದು ಗುಂಡಿಗಿಂತ ಹೆಚ್ಚಾಗಿ ಸೈನಿಕರು ವಾತಾವರಣದ ವೈಪರೀತ್ಯದಿಂದಾಗಿ ಸಾಯುತ್ತಾರೆ. 80ರ ದಶಕದಲ್ಲಿ ವರ್ಷಕ್ಕೆ ಸುಮಾರು 400 ಸೈನಿಕರು ಹಿಮಪಾತಗಳಿಂದ ಸಾವನ್ನಪ್ಪುತ್ತಿದ್ದರು. ಆದರೆ ಆ ನಂತರ ಅದು ವರ್ಷಕ್ಕೆ 20-22ಕ್ಕೆ ಇಳಿದು ಇದೀಗ ಸೈನ್ಯದ ಅಚ್ಚುಕಟ್ಟಿನ ವ್ಯವಸ್ಥೆಯ ಪರಿಣಾಮ, ಆರೋಗ್ಯದ ಕಾರಣಕ್ಕೆ ಯಾರೂ ಸಾಯುತ್ತಿಲ್ಲ.

ಆದರೆ, ಈ ಅಚ್ಚುಕಟ್ಟಿನ ವ್ಯವಸ್ಥೆಗೆ ತಗಲುವ ವೆಚ್ಚ ಬಲು ದುಬಾರಿ. ಭಾರತದ ಸೈನಿಕರಿಗೆ ಎಲ್ಲವನ್ನೂ ಹೆಲಿಕಾಪ್ಟರ್ನಲ್ಲಿ ಸಾಗಿಸಬೇಕಾಗುತ್ತದೆ. ಅಲ್ಲಿಗೆ ತಲುಪುವ ಹೊತ್ತಿಗೆ ಒಂದು ಚಪಾತಿಯ ವೆಚ್ಚ ಬರೋಬ್ಬರಿ 500 ರೂಪಾಯಿ ಆಗಿರುತ್ತದೆ. ಭಾರತ ಸಕರ್ಾರಕ್ಕೆ ಸಿಯಾಚಿನ್ ನಿರ್ವಹಣೆಗೆ ದಿನವೊಂದಕ್ಕೆ ತಗಲುವ ವೆಚ್ಚ 10 ಲಕ್ಷದಿಂದ 2 ಕೋಟಿಯವರೆಗೆ!!. ಇಷ್ಟೆಲ್ಲಾ ಕಷ್ಟಪಟ್ಟು ಆ ಭೂಮಿಗಾಗಿ ಏಕೆ ಹೋರಾಡಬೇಕು? ಸುಮ್ಮನೆ ಸೈನ್ಯ ಹಿಂತೆಗೆದುಕೊಳ್ಳಬಾರದೇ ಎಂದು ಹಲವರು ಭಾರತಕ್ಕೆ ಉಪದೇಶ ನೀಡುತ್ತಾರೆ. ಆದರೆ, ಭಾರತೀಯ ಸೈನ್ಯ ಮಾತ್ರ ಅದಕ್ಕೆ ಒಪ್ಪುತ್ತಿಲ್ಲ. ಕಾರಣ, ಸಿಯಾಚಿನ್ಗಿರುವ ಭೌಗೋಳಿಕ ಮಹತ್ವ. ಸಿಯಾಚಿನ್ ಇರುವುದು ಅಧಿಕೃತವಾಗಿ ಭಾರತ-ಪಾಕ್ ಗಡಿಗಳಲ್ಲಾದರೂ, ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ, ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ಪಾಕಿಸ್ತಾನ ಚೀನಾಕ್ಕೆ ಬಿಟ್ಟುಕೊಟ್ಟಿದೆ. ಆ ಪ್ರದೇಶದ ಮೂಲಕ ಅರಬ್ ದೇಶಗಳಿಗೆ ರಸ್ತೆ ನಿಮರ್ಿಸಿಕೊಂಡು ತನ್ನ ತೈಲ ಸಾಗಣಿಕೆಯನ್ನು ಸುಲಭಗೊಳಿಸಿಕೊಳ್ಳುವುದು ಚೀನಾದ ಹೊರ ಉದ್ದೇಶವಾದರೆ, ಗ್ಯಾಸ್ ಪೈಪ್ಲೈನ್ ಹೆಸರಿನಲ್ಲಿ ಸುರಂಗಗಳನ್ನು ಅಗೆದು ಮಿಸೈಲ್ ಅಡಗಿಸಿಟ್ಟು ಭಾರತವನ್ನು ಬೆದರಿಸುವುದು ಅದರ ಒಳ ಮರ್ಮ. ಪಾಕ್ ಚೀನಾಕ್ಕೆ ಬಿಟ್ಟುಕೊಟ್ಟಿರುವ ಪ್ರದೇಶ ಇರುವುದು ಸಿಯಾಚಿನ್ಗೆ ಹೊಂದಿಕೊಂಡಂತೆಯೇ. ಅಂದರೆ, ಸಿಯಾಚಿನ್ ಮೇಲೆ ನಿಂತರೆ, ಪಾಕಿಸ್ತಾನ-ಚೀನಾ ಎರಡೂ ದೇಶಗಳ ಚಟುವಟಿಕೆಗಳನ್ನು ನಿಯಂತ್ರಿಸಬಹುದು, ಅಕ್ರಮ ಒಳನುಸುಳುವಿಕೆಯನ್ನು ತಡೆಯಬಹುದು. ಸಿಯಾಚಿನ್ಗಿರುವ ನಿಜವಾದ ಮಹತ್ವ ಅದು.

1984ರಿಂದಲೂ ಸಿಯಾಚಿನ್ ತನಗೆ ಸೇರಬೇಕೆಂದು ವಾದಿಸುತ್ತಿದ್ದ ಪಾಕಿಸ್ತಾನ ಕಡೆಕಡೆಗೆ ರಾಗ ಬದಲಾಯಿಸಿತ್ತಾ ಬಂದಿದೆ. ಸಿಯಾಚಿನ್ನ ನಿರ್ವಹಣೆಗಾಗಿ ಎರಡೂ ದೇಶಗಳಿಗೆ ತಗಲುವ ವೆಚ್ಚ, ಸೈನಿಕರ ಮರಣವನ್ನು ಗಮನದಲ್ಲಿಟ್ಟುಕೊಂಡು ಅಲ್ಲಿಂದ ಎರಡೂ ಸೈನ್ಯಗಳನ್ನು ಹಿಂತೆಗೆದುಕೊಳ್ಳೋಣ ಎಂಬ ವಾದವನ್ನು ಮಂಡಿಸುತ್ತಿದೆ. ಕೇವಲ ಭಾರತದ ರಾಜಕಾರಣಿಗಳೇ ಎಲ್ಲ ನಿಧರ್ಾರಗಳನ್ನೂ ತೆಗೆದುಕೊಳ್ಳುವುದು ಸಾಧ್ಯವಾಗಿದ್ದರೆ, ಈ ಹಿಂದಿನ ಯುದ್ಧಗಳಲ್ಲಿ ಗೆದ್ದ ಭೂಮಿಯನ್ನು ವಾಪಸ್ ಪಾಕ್ಗೆ ಬಿಟ್ಟುಕೊಟ್ಟಂತೆ ಇದನ್ನೂ ನಮ್ಮ ನಾಯಕರು ಕೊಟ್ಟಿರುತ್ತಿದ್ದರೇನೋ!!. ಆದರೆ, ಭಾರತ ಸೇನೆಯ ಪ್ರಬಲ ವಿರೋಧದ ಪರಿಣಾಮ ಅದು ಇನ್ನೂ ನಮ್ಮ ಕೈಲಿದೆ. ಅಲ್ಲಿಂದ ಕಾಲ್ತೆಗೆದಂತೆ ನಟಿಸಿ, ಭಾರತದ ಸೇನೆ ವಾಪಸಾದ ನಂತರ ಸಿಯಾಚಿನ್ಅನ್ನು ಆಕ್ರಮಿಸಿಕೊಳ್ಳುವ ಪಾಕಿಸ್ತಾನದ ಬುದ್ದಿ ನಮ್ಮ ನಾಯಕರಿಗಿಂತ ಸೇನೆಯ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತು. ಯುದ್ಧ ನಡೆಸುತ್ತಿರುವುದು ನಾವಲ್ಲ, ಮುಜಾಹೀದೀನ್ಗಳು ಎಂದು ಕಾರ್ಗಿಲ್ ಯುದ್ಧದ ಪ್ರಾರಂಭದಲ್ಲಿ ಪಾಕ್ ಸೇನೆ ನೀಡಿದ್ದ ಮೋಸದ ಮಾತನ್ನು ನಮ್ಮ ಸೇನೆ ಇನ್ನೂ ಮರೆತಿಲ್ಲ.

ಪಾಕ್ನ ಇನ್ನೊಂದು ವಾದವೆಂದರೆ, ಸಿಯಾಚಿನ್ ಸಹ ಕಾಶ್ಮೀರಕ್ಕೇ ಸೇರಿರುವುದರಿಂದ ಅದನ್ನು ವಿವಾದಗ್ರಸ್ತ ಭೂಮಿ ಎಂದು ಪರಿಗಣಿಸಿ ಕಾಶ್ಮೀರ ಮಾತುಕತೆಯಲ್ಲೇ ಅದನ್ನೂ ಸೇರಿಸಬೇಕು ಎಂಬುದು. ಇದಕ್ಕೆ ಆಸ್ಪದ ಕೊಡದ ಭಾರತ, ಸಿಯಾಚಿನ್ ಅನ್ನು ಕಾಶ್ಮೀರ ಮಾತುಕತೆಯಿಂದ ದೂರವೇ ಇಟ್ಟಿದೆ. ಒಮ್ಮೆ ಪಾಕ್ ಕೈಗೆ ಸಿಯಾಚಿನ್ ಸಿಕ್ಕಿತೆಂದರೆ, ಅದನ್ನು ಪಡೆಯುವುದು ಚೀನಾಕ್ಕೆ ಬಹಳ ಸುಲಭದ ಕೆಲಸ. ಆ ಮೂಲಕ ಭಾರತವನ್ನು ಹೆದರಿಸಬಹುದು ಎಂಬುದು ರಕ್ಷಣಾ ವಿಮರ್ಶಕರ ಅಭಿಪ್ರಾಯ.

ಸಿಯಾಚಿನ್ ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ. ಸಮುದ್ರಮಟ್ಟದಿಂದ ಅಜಮಾಸು 5,753 ಮೀ ಎತ್ತರದಲ್ಲಿರುವ ಹಿಮಚ್ಛಾದಿತ ರಣರಂಗ. ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಸಂಕೇತ. 1984ರಿಂದ ಇಲ್ಲಿಯವರೆಗೆ ಪಾಕಿಸ್ತಾನದ ಮೂರು ಸಾವಿರ ಮತ್ತು ಭಾರತದ ಐದು ಸಾವಿರಕ್ಕೂ ಹೆಚ್ಚು ಸೈನಿಕರು ಇಲ್ಲಿ ಹತರಾಗಿದ್ದಾರೆ. ಇದು ಅಂದಾಜು ಲೆಕ್ಕಾಚಾರ. ಸಿಯಾಚಿನ್ ಎಂಬ ರೋಮಾಂಚನಕಾರಿ, ಅಷ್ಟೇ ಅಪಾಯಕಾರಿಯಾದ ಪ್ರದೇಶದಲ್ಲಿ ಸಾವಿಗೀಡಾದ ಬಹಳಷ್ಟು ಮಂದಿಯ ದೇಹವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. ಶೇಕಡಾ ಎಂಬತ್ತಕ್ಕಿಂತ ಹೆಚ್ಚು ಸಂಖ್ಯೆಯ ಸೈನಿಕರ ಮರಣಕ್ಕೆ ಕಾರಣವಾಗಿದ್ದು ಎದುರಾಳಿಗಳ ಬಂದೂಕಾಗಲೀ, ಆಧುನಿಕ ಕ್ಷಿಪಣಿಗಳಾಗಲೀ ಅಲ್ಲ. ದೇಶಗಡಿಗಳ ಲೆಕ್ಕಿಸದೆ ಈ ಸೈನಿಕರನ್ನು ಬಲಿ ತೆಗೆದುಕೊಂಡಿರುವುದು ಪ್ರಕೃತಿ, ಅರ್ಥಾತ್ ಹಿಮಪಾತ.

ಸಿಯಾಚಿನ್ ಮನುಷ್ಯ ವಾಸಕ್ಕೆ ಯೋಗ್ಯವಲ್ಲದ ಭೂಪ್ರದೇಶ ಎಂದು ಭಾರತ ಮತ್ತು ಪಾಕಿಸ್ತಾನದ 1949ರ ಕರಾಚಿ ಮತ್ತು 1972ರ ಶಿಮ್ಲಾ ಒಪ್ಪಂದದಲ್ಲಿ ವಿವರಿಸಲಾಗಿದೆ. ಸಿಯಾಚಿನ್ ಸೇನಾ ನೆಲೆಗೆ ನಿಯೋಜನೆಗೊಳ್ಳುವುದನ್ನು ಆತ್ಮಹತ್ಯಾ ಕಾರ್ಯಾಚರಣೆ ಎಂದೇ ಪರಿಗಣಿಸಲಾಗುತ್ತದೆ. ವಿಪರೀತ ಶೀತ ಇರುವುದರಿಂದ ಅರ್ಧ ನಿಮಿಷಕ್ಕೂ ಹೆಚ್ಚು ಕಾಲ ಶೀತಗಾಳಿಗೆ ತೆರೆದುಕೊಂಡರೆ, ದೇಹದ ಆ ಭಾಗ ಮರಗಟ್ಟಿ ಉದುರಿಹೋಗುತ್ತದೆ. 15 ಸೆಕೆಂಡ್ಗಳ ಕಾಲ ರೈಫಲ್ನ ಟ್ರಿಗರ್, ಮ್ಯಾಗಝಿನ್ಗಳನ್ನು ಕೈಯಲಿ ಹಿಡಿದುಕೊಂಡರೆ, ಲೋಹದ ಸಂಪರ್ಕಕ್ಕೆ ಬರುವ ಬೆರಳು ಮತ್ತು ಕೈ ಭಾಗಗಳಲ್ಲಿ ನೋವುಂಟಾಗುತ್ತದೆ. ಕೆಲವೇ ನಿಮಿಷಗಳಲ್ಲಿ ನೋವು ಬಾಧಿತ ಭಾಗ ಉದುರಿಹೋಗುತ್ತದೆ. ಅಲ್ಲಿ ವಿಶಿಷ್ಟ ಕನ್ನಡಕಗಳನ್ನು ದಿನದ 24 ಗಂಟೆಗಳೂ ಧರಿಸಿರಲೇಬೇಕು. ಇಲ್ಲದಿದ್ದಲ್ಲಿ ಶೀತಗಾಳಿಗೆ ಕಣ್ಣುಗುಡ್ಡೆಗಳು ಊದಿಕೊಂಡು ಸಿಡಿಯುವ ಅಪಾಯವಿರುತ್ತದೆ. ನಿದ್ರಾಹೀನತೆ, ಅಜೀರ್ಣ, ನೆನಪಿನ ಶಕ್ತಿ ನಷ್ಟ, ಉಸಿರಾಟದ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಇಲ್ಲಿ ಚೀತಾ/ಚೇತಕ್ ಲಘು ಹೆಲಿಕಾಪ್ಟರ್ ಗಳನ್ನು ಮಾತ್ರ ಇಳಿಸಲು ಸಾಧ್ಯವಿದೆ. ಸೈನಿಕರ ಆರೋಗ್ಯ ಹದಗೆಟ್ಟಾಗ ಅವರನ್ನು ಕರೆತರಲು ಮಾತ್ರ ಇವುಗಳನ್ನು ಬಳಸಲಾಗುತ್ತದೆ.

ರಷ್ಯಾ ನಿಮರ್ಿತ ಎಂ 17 ಹೆಲಿಕಾಪ್ಟರ್ಗಳ ಮೂಲಕ ಆಹಾರ, ಬಟ್ಟೆ ಮತ್ತು ಸೇನಾ ಸಾಮಗ್ರಿಗಳನ್ನು ನೆಲಕ್ಕೆ ಇಳಿಸಲಾಗುತ್ತದೆ. ಸೀಮೆಎಣ್ಣೆ ಸ್ಟೌವ್ ಉರಿಸಿ ಸೈನಿಕರು ಬಿಸಿ ಕಾಯಿಸಿಕೊಳ್ಳುತ್ತಾರೆ. ರೈಫಲ್, ಮೆಷಿನ್ಗನ್ಗಳನ್ನು ಸುಸ್ಥಿತಿಯಲ್ಲಿ ಇಡಲು ಕುದಿಯುತ್ತಿರುವ ನೀರಿನಲ್ಲಿ ಇಡಲಾಗುತ್ತದೆ. ಇಲ್ಲವೆಂದರೇ ರೈಫಲ್ಗಳು ಜಾಮ್ ಆಗುತ್ತವೆ. ರೈಫಲ್ಗಳು ಜಾಮ್ ಆದ ಸಂದರ್ಭದಲ್ಲಿ ಪಾಕಿಸ್ತಾನದ ಕಮಾಂಡೋಗಳು ಅಕ್ರಮವಾಗಿ ನುಸುಳಿದಾಗ, ಕಮಾಂಡೋ ಬಾನ್ ಸಿಂಗ್ ನೇತೃತ್ವದಲ್ಲಿ ಸೈನಿಕರು ಕೈಯ್ಯಲ್ಲಿ ಗುದ್ದಾಡಿ ಐದು ಜನ ಪಾಕ್ ಕಮಾಂಡೋಗಳನ್ನು ನೆಲಕ್ಕುರುಳಿಸಿದ್ದು ಇವತ್ತಿಗೆ ಇತಿಹಾಸ.

ಸಿಯಾಚಿನ್ನಲ್ಲಿ ಮೂರು ತಿಂಗಳಿಗೊಮ್ಮೆ ಯೋಧರ ಬದಲಾವಣೆಯಾಗುತ್ತದೆ. ಅದರಲ್ಲೂ ಬಾನಾಪೋಸ್ಟ್ ಎಂಬ ಅತ್ಯಂತ ಅಪಾಯಕಾರಿ ಪ್ರದೇಶದಲ್ಲಿ ತಿಂಗಳಿಗೊಮ್ಮೆ ಯೋಧರನ್ನು ಬದಲಾಯಿಸಲಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಸೇನಾ ತುಕಡಿಯನ್ನೇ ಎತ್ತಂಗಡಿ ಮಾಡಲಾಗುತ್ತದೆ. ಇಲ್ಲಿನ ಉಷ್ಣಾಂಶ ಒಮ್ಮೊಮ್ಮೆ ಮೈನಸ್ 50 ಡಿಗ್ರಿಯವರೆಗೆ ಕುಸಿಯುವುದರಿಂದ ಮೂಳೆ ನಡುಗಿಸುವ ಚಳಿಯಿರುತ್ತದೆ. ಸೂರ್ಯನ ಶಾಖ ಬಿದ್ದಾಗ ಚರ್ಮ ಸುಟ್ಟು ಹೋಗುತ್ತದೆ. ಯೋಧರು ಖಿನ್ನತೆಗೊಳಗಾಗುತ್ತಾರೆ. ಮಾತನಾಡಲು ಕಷ್ಟಪಡಬೇಕಾದ ವಾತಾವರಣವಿರುತ್ತದೆ. ಸಹಜವಾಗಿ ಸಾವು ಹೊಂಚು ಹಾಕುತ್ತಿರುತ್ತದೆ.

ಒಟ್ಟಾರೆ.. ಅಂತಹ ಅಪಾಯಕಾರಿ ಪ್ರದೇಶದಲ್ಲಿ ಪ್ರತಿಕ್ಷಣವೂ ಆತಂಕದಿಂದ ಪಹರೆ ಕಾಯುತ್ತಿರುವ, ಶತೃಗಳ ದಾಳಿಗಳನ್ನು ನಿಯಂತ್ರಿಸುತ್ತಿರುವ, ಪೃಕೃತಿಯೊಂದಿಗೆ ಸೆಣಸುತ್ತಿರುವ ಯೋಧರಿಗೆ ಗ್ರೇಟ್ಫುಲ್ ಆಗಿರಬೇಕು. ಇತ್ತೀಚೆಗಷ್ಟೆ ಹಿಮಪಾತದಲ್ಲಿ ಮಡಿದ ಯೋಧರು, ಎಂಟು ದಿನಗಳ ಕಾಲ ಸಾವಿನ ವಿರುದ್ಧ ಸೆಣಸಿ ಸೋತ ಹನುಮಂತಪ್ಪ- ಇವರೆಲ್ಲರಿಂದ ಇವತ್ತು ಭಾರತಾಂಬೆ ನೆಮ್ಮದಿಯಾಗಿದ್ದಾಳೆ. ಅವರ ಪ್ರಾಣವನ್ನು ಒತ್ತೆಯಿಟ್ಟು ಕೋಟ್ಯಾಂತರ ಪ್ರಾಣ ರಕ್ಷಣೆಗೆ ನಿಂತಿದ್ದಾರೆ. ಅವರ ಋಣಭಾರ ದೊಡ್ಡದು.

  • ರಾ ಚಿಂತನ್.

POPULAR  STORIES :

ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?

ಅಪಘಾತವನ್ನು ಮೊಬೈಲ್ನಲ್ಲಿ ವಿಡಿಯೋ ಮಾಡ್ತೀರಾ..? ಅಪಲೋಡ್ ಮಾಡಿದ್ರೇ ಜೈಲ್ ಗ್ಯಾರಂಟಿ..!?

ಗಂಡನನ್ನು ಕೊಂದು, ಅವನ ತಲೆಯನ್ನು ಸೂಪ್ ಮಾಡಿ ಕುಡಿದಳು, `ಹೆಣ್ಣು ಒಲಿದರೇ ನಾರಿ, ಮುನಿದರೇ ಮಾರಿ..!’

ಮುಸ್ಲಿಮರ `ಅಜಾನ್’ ವೇಳೆ ಅರ್ಧಕ್ಕೆ ಭಾ‍ಷಣ ನಿಲ್ಲಿಸಿದ ಮೋದಿ…! #Video

ಟೀಂ ಇಂಡಿಯಾ ಹಾಗೂ ಬಾಂಗ್ಲಾ ಅಭಿಮಾನಿಗಳ ವಿಡಿಯೋ ಫೈಟ್..!

ಉಗ್ರರಿಗೆ ಇಸ್ರೇಲ್, ಅಮೆರಿಕಾದಿಂದ ವೆಪನ್ಸ್ ಪೂರೈಕೆ..!? ಪುಟಿನ್ ಹೇಳಿದ ಬೆಚ್ಚಿಬೀಳಿಸುವ ಸತ್ಯ..!?

ಜೈಲಿನಿಂದ ಕೈದಿಗಳು ಪರಾರಿ..! ಜೈಲಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ..? ಡ್ರಗ್ಸು.. ಸೆಕ್ಸು.. ಫಿಕ್ಸು…

ಧೋನಿ ಪತ್ರಕರ್ತನ ಮೇಲೆ ಸಿಟ್ಠಾಗಿದ್ದೇಕೆ..? ನಾವು ಸ್ಕ್ರಿಪ್ಟ್ ಇಟ್ಟುಕೊಂಡು ಪಂದ್ಯವಾಡುವುದಿಲ್ಲ..!

ಖಂಡೀಲ್ ಬೆತ್ತಲಾಗದಿದ್ರೇ ಏನಂತೆ..? ಆರ್ಷಿ ಖಾನ್ ಬೆತ್ತಲಾದಳಲ್ಲ..!!

ಅಮ್ಮನಿಗೆ ಸೇಟು ದುಡ್ಡು ಕೊಟ್ಟಿದ್ದು ಯಾಕೆ..? ಫ್ರಾಕ್ ಹುಡ್ಗೀಯ ಚಾಕೊಲೇಟ್ ಸ್ಟೋರಿ..!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...