ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ‍್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ತಿಕ್ಕಾಟಕ್ಕೆ ಬಿಜೆಪಿ ವ್ಯಂಗ್ಯವಾಡಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಭಾರತ್ ಜೋಡೋ ಯಾತ್ರೆಯ ಸಿದ್ಧತೆಯ ನಡುವೆ ಡಿಕೆಶಿ ಹಾಗೂ ಸಿದ್ದರಾಮಯ್ಯರ ಆಂತರಿಕ ಕಲಹ ಮುಗಿಲು ಮುಟ್ಟಿದೆ. ಭಾರತ್ ಜೋಡೋ ಯಾತ್ರೆಯ ಬಳಿಕ ಡಿಕೆಶಿ ಮತ್ತು ಸಿದ್ದರಾಮಯ್ಯ ಬಣ ಜೋಡಿಸಲು ಕಾಂಗ್ರೆಸ್ ಮತ್ತೊಂದು ಯಾತ್ರೆ ಆಯೋಜಿಸಲಿದೆಯೇ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ. ಸಿದ್ದರಾಮೋತ್ಸವಕ್ಕೆ ಉತ್ಸಾಹದಿಂದ ದುಡಿದ ಹಿರಿಯ ನಾಯಕರು ಭಾರತ್ ಜೋಡೋ ಯಾತ್ರೆಗೆ ಶ್ರಮಿಸುತ್ತಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅಸಹನೆ ತೋರ್ಪಡಿಸುತ್ತಿದ್ದಾರೆ. ಡಿಕೆಶಿ ಮೇಲುಗೈ ಆದರೆ ‘ಮುಂದಿನ ಸಿಎಂ ಎಂದು ಘೋಷಿಸಿಕೊಳ್ಳಲಾಗುವುದಿಲ್ಲ’ ಎಂಬ ಭಯ ಸಿದ್ದರಾಮಯ್ಯರಿಗೆ ಕಾಡುತ್ತಿದೆಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ. ಹಿರಿಯ ಕಾಂಗ್ರೆಸ್ ನಾಯಕ ದೇಶಪಾಂಡೆಯವರು ರಾಹುಲ್ ಗಾಂಧಿ ಯಾತ್ರೆಗೆ ಜನ ಸೇರಿಸಲು ನಿರಾಕರಿಸಿದ ಕಾರಣ ಯಾವೊಂದು ಸಮಿತಿಯಲ್ಲೂ ಡಿಕೆಶಿ ಸ್ಥಾನ ನೀಡಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಬಣದ ನಾಯಕರನ್ನು ಕಡೆಗಣಿಸುವ ಡಿಕೆಶಿ ಕಡೆಗಣಿಸುತ್ತಿದ್ದಾರೆಯೇ? ಭಾರತ್ ಜೋಡೋ ಯಾತ್ರೆಗೆ ಸಿದ್ದರಾಮಯ್ಯರಿಗೆ ಆಹ್ವಾನವಿಲ್ಲ. ಸಿದ್ದರಾಮೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಸ್ಥಾನವಿರಲಿಲ್ಲ, ಅದರ ಕೋಪವನ್ನು ಭಾರತ್ ಜೋಡೋ ಯಾತ್ರೆಯ ಮೂಲಕ ಡಿಕೆಶಿ ತೀರಿಸಿಕೊಳ್ಳುತ್ತಿದ್ದಾರೆಯೇ?’ ಅಂತಾ ಬಿಜೆಪಿ ಟೀಕಿಸಿದೆ.
ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ನಡುವಿನ ತಿಕ್ಕಾಟಕ್ಕೆ ಬಿಜೆಪಿ ವ್ಯಂಗ್ಯ
Date: