ಇದು ಐಫೋನ್, ಸ್ಮಾರ್ಟ್‌ಫೋನ್ ಪ್ರಿಯರಿಗೆ ಬಿಗ್ ಶಾಕಿಂಗ್ ನ್ಯೂಸ್..!

Date:

ದೇಶದಲ್ಲಿ ಪರಿಷೃತ ಸ್ಮಾರ್ಟ್‌ಫೋನ್ ಜಿಎಸ್‌ಟಿ ದರ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಗಳ ಬೆಲೆಯಲ್ಲಿ ಏರಿಕೆಯಾಗಿದೆ. ಇದು, ಐಫೋನ್, ಸ್ಮಾರ್ಟ್ಫೋನ್ ಪ್ರಿಯರಿಗೆ ನಿಜಕ್ಕೂ ಶಾಕಿಂಗ್ ನ್ಯೂಸ್.

ಆ್ಯಪಲ್ ಐಫೋನ್, ಸ್ಯಾಮ್‌ಸಂಗ್ ಮತ್ತು ಶವೋಮಿ ಹಾಗೂ ರಿಯಲ್‌ ಫೋನ್‌ಗಳ ಬೆಲೆಯಲ್ಲಿ ಏರಿಕೆ‌ ಕಂಡು ಬಂದಿದೆ. ಪರಿಷ್ಕೃತ ನೂತನ ದರ ಈ ತಕ್ಷಣದಿಂದಲೇ ಜಾರಿಗೆ ಬರುತ್ತಿದೆ. ಈಗಾಗಲೇ ಈ ಬಗ್ಗೆ ಆಯಾಯ ಕಂಪನಿಗಳು ಪರಿಷ್ಕೃತ ದರಪಟ್ಟಿಯನ್ನು ಬಿಡುಗಡೆ ಮಾಡಿವೆ. ನಿನ್ನೆಯಿಂದಲೇ..ಅಂದ್ರೆ ಏಪ್ರಿಲ್ 1 ರಿಂದಲೇ ಈ ಹೊಸ ದರ ಜಾರಿಯಾಗುತ್ತಿದೆ.
ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದ ಆ್ಯಪಲ್ ಐಫೋನ್ 11 ಸರಣಿಯಲ್ಲೂ ಏರಿಕೆ ಕಂಡು ಬಂದಿದೆ. ಐಫೋನ್ 11 ಆರಂಭಿಕ ಆವೃತ್ತಿಯ ಬೆಲೆ 3,400 ರೂಪಾಯಿನಷ್ಟು ಏರಿಕೆಯಾಗಿದೆ. ಬಜೆಟ್ 2020ರ ಪರಿಣಾಮದಿಂದಾಗಿ ಮೊಬೈಲ್ ದರ ಹೆಚ್ಚಳ ಅನಿವಾರ್ಯ ಎಂದು ಕಂಪನಿಗಳು ಹೇಳುತ್ತಿವೆ.
ಹೊಸ ದರ ಕಂಪನಿಯ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾಗಿದ್ದು, ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲೂ ಪರಿಷ್ಕೃತ ದರ ಅನ್ವಯವಾಗಲಿವೆ.
ಆ್ಯಪಲ್ ಐಫೋನ್, ದುಬಾರಿ
ಸ್ಮಾರ್ಟ್‌ಫೋನ್‌ಗಳ ಮೇಲೆ ಈ ಮುಂಚೆ ಶೇಕಡ 12ರಷ್ಟು ಜಿಎಸ್‌ಟಿ ದರ ವಿಧಿಸಲಾಗುತ್ತಿತ್ತು. ಆದರೆ ನೂತನ ಹಣಕಾಸು ವರ್ಷದಿಂದ ಶೇಕಡ 12 ಬದಲಾಗಿ ಶೇಕಡ 18ಕ್ಕೆ ಜಿಎಸ್‌ಟಿ ದರ ವಿಧಿಸಲಾಗುತ್ತಿದೆ. ಹೀಗಾಗಿ ಗ್ರಾಹಕರು ಅಧಿಕ ಬೆಲೆ ಕೊಟ್ಟು ಸ್ಮಾರ್ಟ್‌ಫೋನ್ ಕೊಂಡುಕೊಳ್ಳುವಂತಾಗಿದೆ.

Share post:

Subscribe

spot_imgspot_img

Popular

More like this
Related

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ...

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ!

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ! ಬೆಂಗಳೂರು:...

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ...

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ ಬೆಂಗಳೂರು:...