ಭಾರತ ಇದೀಗ ವಿಶ್ವದ 2ನೇ ಅತಿದೊಡ್ಡ ಸ್ಮಾರ್ಟ್‍ಫೋನ್ ಮಾರುಕಟ್ಟೆಯಾಗಿದೆ..! ಅಮೆರಿಕಾವನ್ನು ಹಿಂದಿಕ್ಕಿರುವ ಭಾರತ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಚೀನಾನಂತರ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ..!
ಮೇಕ್ ಇನ್ ಇಂಡಿಯಾ ಹಾಗೂ 4 ಜಿ ಸೇವೆಗಳ ಅಭಿವೃದ್ಧಿಯಿಂದ ಭಾರತ ಈ ಸ್ಮಾರ್ಟ್‍ಫೋನ್ ಜಗತ್ತಿನ 2ನೇ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸ್ಯಾಮ್‍ಸಂಗ್ ಇಲೆಕ್ಟ್ರಾನಿಕ್ಸ್, ಕ್ಲಿಯಾಮಿ ಇಂಕ್, ವಿವೋ ಇಲಾಕ್ಟ್ರಾನಿಕ್ಸ್ ಕಾರ್ಪ್, ಒಪ್ಪೋ ಎಲೆಕ್ಟ್ರಾನಿಕ್ಸ್ ಹಾಗೂ ಲೆನೊವೊ ಭಾರತದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವಂತಹವು. ಸ್ಯಾಮ್‍ಸಂಗ್ ಮತ್ತು ಕ್ಲಿಯಾಮಿ ಒಟ್ಟು ಮಾರುಕಟ್ಟೆಯಲ್ಲಿ ಶೇ 75ರಷ್ಟು ಪಾಲನ್ನು ಹೊಂದಿವೆ. ಸ್ಯಾಮ್ಸಂಗ್ ಕಳೆದ ವರ್ಷದಿಂದ ಇಲ್ಲಿಯವರೆಗೆ 9.4 ಮಿಲಿಯನ್, ಆಪಲ್ ಇಂಕ್ 9,00,000 ಸ್ಮಾಟ್ ಫೋನ್ ಗಳನ್ನು ಮಾರಾಟ ಮಾಡಿದೆ ಎಂದು ವಿಶ್ಲೇಷಕ ಸಂಸ್ಥೆ ಕ್ಯಾನಾಲಿಸ್ ವರದಿ ಮಾಡಿದೆ.