ಇಂದಿನ ಯಾಂತ್ರಿಕ ಜೀವನದಲ್ಲಿ ಕೆಲಸದ ಒತ್ತಡದಿಂದಾಗಿ ಜನಸಾಮಾನ್ಯರ ಮುಖದಲ್ಲಿ ನಗು ಅನ್ನೋದೆ ಕಾಣ್ಸೊಲ್ಲ. ಅವರೆಲ್ಲಾ ಯಾವಾಗ್ಲೂ ಫುಲ್ ಸೀರಿಯಸ್ ಆಗಿ ಇರ್ತಾರೆ..! ಅವರ್ದೆಲ್ಲಾ ಏನಿದ್ರೂ ಆರ್ಟಿಫಿಷಲ್ ನಗು.. ಹೀಗೆ ಬಂದು ಹಾಗೆ ಹೋಗ್ಬಿಡತ್ತೆ..! ಇನ್ನು ಅವ್ರೆದ್ರುಗೆ ಯಾರಾದ್ರು ಜೋರಾಗಿ ನಕ್ರೋ..? ಅಷ್ಟೆ ಬಿಡಿ ಅವನಿಗೆ ಹುಚ್ಚನ್ ಪಟ್ಟ ಗ್ಯಾರೆಂಟಿ..! ಆದ್ರೆ ನೆನಪಿರಲಿ ಇದೇ ನಗು ನಮ್ಮ ಆರೋಗ್ಯ ಮೇಲೆ ಒಳ್ಳೆಯ ಪರಿಣಾಮ ಬೀರುತ್ತೆ. ನಗು ದೈಹಿಕವಾಗಿ ಒಳ್ಳೆಯ ವ್ಯಾಯಾಮ ಅಂತಾರೆ ಸಂಶೋಧಕರು. ಆಯಾಸ ಇಲ್ಲದೆ ತುಂಬಾ ಸುಲಭವಾಗಿ ಮಾಡೋ ವ್ಯಾಯಾಮ ಅಂದ್ರೆ ಅದು ನಗೋದು ಮಾತ್ರ..! ನಗು ನಮ್ಮ ಮನಸಿನ ನೋವನ್ನು ಮಾತ್ರ ನಿವಾರಣೆ ಮಾಡೊಲ್ಲ, ದೈಹಿಕ ನೋವನ್ನೂ ಕೂಡ ತಗ್ಗಿಸುತ್ತೆ ಅಂತ ಅಧ್ಯಯನವೊಂದು ವರದಿ ಮಾಡಿದೆ. ನಗುವಿಗೂ ದೈಹಿಕ ನೋವಿಗೂ ಅನ್ನೂನ್ಯ ಸಂಬಂಧವಿದೆ ಅಂತ ವರದಿ ಮೂಲಕ ತಿಳಿಸಿಕೊಟ್ಟಿದ್ದಾರೆ ಸಂಶೋಧಕರು. ಜೋರಾಗಿ ನಗುವ ಪರಿಣಾಮವಾಗಿ ಮೆದುಳಿನ ಎಂಡಾರ್ಫಿನ್ ರಾಸಾಯನಿಕ ಬಿಡುಗಡೆ ಮಾಡಿ, ನೋವು ನಿವಾರಕದಂತೆ ಕೆಲಸ ಮಾಡುತ್ತೆ. ಇನ್ನೊಂದು ಸಂಶೋಧನೆಯಲ್ಲಿ ಆಸ್ಪತ್ರೆಯ ರೋಗಿಗಳ ಮೇಲೆ ನಡೆದ ಪ್ರಯೋಗವೊಂದರಲ್ಲಿ ರೋಗಿಗಳಿಗೆ ಈ ದೃಶ್ಯಗಳನ್ನು ತೋರಿಸಲಾಯಿತು. ಈ ದೃಶ್ಯಗಳನ್ನು ನೋಡಿದ ಬಳಿಕ ರೋಗಿಗಳಲ್ಲಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು ಎಂದು ತಿಳಿದು ಬಂದಿದೆ.
ನಿತ್ಯ ಹೆಚ್ಚು ಹೆಚ್ಚು ನಗೋದ್ರಿಂದ ಮನಸ್ಸು ಶಾಂತಚಿತ್ತವಾಗಿ ಕಾರ್ಯ ನಿರ್ವಹಿಸುತ್ತೆ. ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತೆ. ಉಸಿರಾಟದ ವೇಳೆ ಶ್ವಾಸಕೋಶಗಳ ಮೂಲಕ ಗಾಳಿ ಎಳೆದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತೆ. ಅದರಂತೆ ಗಾಳಿ ವಿನಿಮಯ ಕೂಡ ಹೆಚ್ಚಿಗೆಯಾಗುತ್ತೆ.
ರಕ್ತದ ಒತ್ತಡ ಕಡಿಮೆಯಾಗುವ ಸಾಧ್ಯತೆಗಳಿವೆ. ಮನಸ್ಸಿನ ಒತ್ತಡಗಳು ಹೆಚ್ಚಿರುವವರು ತಮ್ಮ ಸುಖ ದುಃಖವನ್ನು ಬೇರೆಯವರೊಂದಿಗೆ ಹಂಚಿಕೊಂಡಾಗ ಮನಸ್ಸು ಇನ್ನಷ್ಟು ಹಗುರವಾಗುತ್ತೆ.
ನಿತ್ಯ ನಗುವಿನ ಹರಟೆ ಅನುಭವಗಳನ್ನು ಹಾಸ್ಯಾಲೋಪಗಳೊಂದಿಗೆ ಹಂಚಿಕೊಂಡಾಗ ನಿಮ್ಮ ಬಗ್ಗೆ ಗೌರವ ಭಾವನೆಗಳು ಮೂಡುವುದರೊಂದಿಗೆ ಮನಸ್ಸಿಗೆ ಏಕಾಗ್ರತೆ ಉಂಟಾಗಿ ಕೆಲಸ ಮಾಡಲು ಹುಮ್ಮಸ್ಸು ಹೆಚ್ಚಿಸುತ್ತೆ. ಜೊತೆಗೆ ಹಾಸ್ಯ ಚೇಷ್ಟೆಗಳಿಂದ ಕೂಡಿದರೆ ಮನಸ್ಸ ಮತ್ತಷ್ಟು ಹಗುರವಾಗಿ ಚೈತನ್ಯ ಶಕ್ತಿ ಮೂಡುತ್ತದೆ.
ದೇಹದ ನೋವುಗಳಿಗೆ ನಗು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಧುಮೇಹ ಕಾಯಿಲೆಗಳಂತಹ ತೊಂದರೆಗಳಿಗೂ ಕೂಡ ನಿತ್ಯ ನಗುವಿನ ವ್ಯಾಯಾಮ ಪರಿಣಾಮಕಾರಿಯಾದ ಉದಾಹರಣೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಆರ್‍ಟಿಇ ಪ್ರವೇಶ: ಜನವರಿ 15ರಿಂದ ಅರ್ಜಿ ಸ್ವೀಕೃತಿ, ಆಧಾರ್ ಕಡ್ಡಾಯ
ಬಿಗ್‍ಬಾಸ್ ಮನೆಯಲ್ಲಿ ಸಖತ್ ವಾಕ್ಸಮರ..!
ದರ್ಶನ್‍ರನ್ನು ಬಿಗ್‍ಬಾಸ್ ವೇದಿಕೆಗೆ ಕರ್ದಿದೀರಾ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು..?
ಗುಡ್ ನ್ಯೂಸ್: ಚಿನ್ನದ ಬೆಲೆ 3000ರೂ ಇಳಿಕೆ..!
ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!
ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!