ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರನ್ನು ವೈದ್ಯರ ತಂಡ ಆರೈಕೆ ಮಾಡುತ್ತಿದೆ ಎಂದು ಮಣಿಪಾಲ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಶ್ವಾಸಕೋಶದ ಸೊಂಕಿನಿಂದ ಬಳಲುತ್ತಿರುವ ಎಸ್‍ಎಂಕೆಗೆ ಡಾ ಸತ್ಯನಾರಾಯಣ್ ಮತ್ತು ಡಾ ಸುನೀಲ್ ಕಾರಂತ್ ರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದು ವೈದ್ಯರ ತಂಡ ಆರೈಕೆ ಮಾಡ್ತಾ ಇದೆ. ಶ್ವಾಸಕೋಶದ ಒಳಗಡೆ ಆಕ್ಸಿಜನ್ ಪ್ರಮಾಣ ಏರುಪೇರು ಆಗ್ತಾ ಇದ್ದು, ವೈದ್ಯರ ತಂಡ ನಿಗಾವಹಿಸಿದೆ. ಆರೋಗ್ಯ ಸಚಿವ ಡಾ. ಸುಧಾಕರ್ ಮೇಲ್ವಿಚಾರಣೆ ನಡೆಸುತ್ತಾ ಇದ್ದಾರೆ. ಅಲ್ಲದೆ ವೈದ್ಯರ ತಂಡದ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಬುಲೆಟಿನ್ ನಲ್ಲಿ ತಿಳಿಸಲಾಗಿದೆ. ಇನ್ನೂ ತೀವ್ರ ಜ್ವರ ಹಿನ್ನೆಲೆ ಶನಿವಾರ ರಾತ್ರಿ 11 ಗಂಟೆವರೆಗೂ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದರು. ಐಸಿಯು ಮತ್ತು ಹೆಚ್ಚಿನ ನಿಗಾ ಹಿನ್ನೆಲೆ ಕುಟುಂಬಸ್ಥರು ಅವರನ್ನು ಮಣಿಪಾಲ್ ಆಸ್ಪತ್ರೆ ಗೆ ಶಿಫ್ಟ್ ಮಾಡಿದ್ದಾರೆ. ಸದ್ಯ ಮಣಿಪಾಲ್ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಸ್ ಎಂ ಕೆ ಹೆಲ್ತ್ ಬುಲೆಟಿನ್ ಬಿಡುಗಡೆ
Date: