ಡ್ರಗ್ಸ್ ಬದಲು ಚಿನ್ನ ಕಳ್ಳಸಾಗಣೆ ಮಾಡಿ ಎಂದ ಶಾಸಕ…! ಮೇ 7 ರ ಹೇಳಿಕೆ‌ ಇದೀಗ ವೈರಲ್ ಆಯ್ತು…!

Date:

ಡ್ರಗ್ಸ್ ಕಳ್ಳಸಾಗಣೆ ಮಾಡುವ ಬದಲು ಚಿನ್ನ ಕಳ್ಳ ಸಾಗಣೆ ಮಾಡಿ ಎಂದು ರಾಕಸ್ಥಾನದ ಜೋಧಪುರ ಜಿಲ್ಲೆಯ ಬಿಲಾರ ಕ್ಷೇತ್ರದ ಶಾಸಕ ನೀಡಿರುವ ಪ್ರಚೋಧನಕಾರಿ ಹೇಳಿಕೆ ಇದೀಗ ವೈರಲ್ ಆಗಿದೆ.

ಬಿಲಾರ ಕ್ಷೇತ್ರದ ಬಿಜೆಪಿ ಶಾಸಕ ಅರ್ಜುನ್ ಲಾಲ್ ಜಾರ್ಜ್ ರವರು ಮೇ 7ರಂದು ಜೈತ್ವಾಸ್ ಗ್ರಾಮದ ದೇವಸ್ಥಾನ ಉದ್ಘಾಟನೆ ಸಮಾರಂಭದಲ್ಲಿ ದೇವಾಸಿ ಸಮುದಾಯವನ್ನು ಕುರಿತು ಹೇಳಿಕೆ ನೀಡಿದ್ದಾರೆ. ನೀವು ಡ್ರಗ್ಸ್ ಕಳ್ಳಸಾಗಣೆ ಮಾಡುವ ಬದಲು ಚಿನ್ನ ಕಳ್ಳ ಸಾಗಣೆ ಮಾಡಿ ಎಂದಿದ್ದಾರೆ. ಚಿನ್ನ ಮತ್ತು ಡ್ರಗ್ಸ್ ಬೆಲೆಗಳು ಒಂದೇ ಆಗಿದೆ. ಈ ಡ್ರಗ್ಸ್ ಕೇಸ್‍ನಲ್ಲಿ ನಿಮಗೆ ಯಾವುದೇ ಕಾರಣಕ್ಕೂ ಬೇಲ್ ಸಿಗುವುದಿಲ್ಲ, ಚಿನ್ನದ ಕಳ್ಳಸಾಗಣೆಯಲ್ಲಿ ನಿಮಗೆ ಬೇಲ್ ಸುಲಭವಾಗಿ ಸಿಗುವುದು. ಡ್ರಗ್ಸ್ ಕೇಸ್‍ನಲ್ಲಿ ಸಿಕ್ಕಿ ಬೀಳೊಕ್ಕಿಂತ ಚಿನ್ನ ಕದ್ದು ಸಿಕ್ಕಿ ಬಿದ್ರೆ ಮರ್ಯಾದೆ ಜಾಸ್ತಿ ಎಂದು ಹೇಳಿದ್ದಾರೆ. ಶಾಸಕರ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಕುರಿತಂತೆ ರೇಖಾ ಮಹಾ ಸಭಾದ ಜಿಲ್ಲಾ ಕಾರ್ಯದರ್ಶಿಯವರು ಜಾರ್ಜ್ ರವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ದೇವಾಸಿ ಸುಮುದಾಯದವರು ಹೆಮ್ಮೆ ಪಟ್ಟುಕೊಳ್ಳುವ ವಿಚಾರವಲ್ಲ ಹಾಗೂ ಯಾವುದೇ ಕಳ್ಳ ಸಾಗಣೆಯಲ್ಲಿ ಸಿಕ್ಕರೆ ಶಿಕ್ಷೆ ತಪ್ಪಿದ್ದಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ಅತಿ ಹೆಚ್ಚು ನಡೆಯುತ್ತಿದ್ದು, ಯುವ ಪೀಳಿಗೆ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕಳ್ಳಸಾಗಣೆಯಲ್ಲಿ ಬಿಶೋಯಿ ಸಮುದಾಯಕ್ಕಿಂತ ಹೆಚ್ಚು ದೇವಾಸಿ ಸಮುದಾಯದವರು ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಾದಕ ದ್ರವ್ಯ ಕಳ್ಳಸಾಗಾಣಿಕೆಯಲ್ಲಿ ಸೆರೆ ಸಿಕ್ಕ ಇವರನ್ನು ಮಾದಕ ದ್ರವ್ಯ ಕೇಸ್ ಅಡಿಯಲ್ಲಿ ಬಂಧಿಸಿ ಜೋಧಪುರ ಜೈಲಿನಲ್ಲಿ ಇರಿಸಲಾಗಿದೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...