ಏನಪ್ಪಾ ಇದು ಕಾಶ್ಮೀರದಲ್ಲಿ ಬೀಳೋ ಹಿಮನಂತೆ ಇದೆಯಲ್ಲಾ..? ವಾವ್ಹ್ ಸೂಪರ್.., ಎಲ್ಲಿ ವೀಡೀಯೋ ಮಾಡಿಕೊಂಡು ಬಂದ್ರೀ..? ಕಾಶ್ಮೀರಕ್ಕೋ, ಹಿಮಾಲಯಕ್ಕೋ ಹೋಗಿದ್ರಾ..? ಸಾರ್, ನಮಗೂ ಹೇಳಿದ್ರೆ ನಿಮ್ ಜೊತೆ ನಾವೂ ಅಲ್ಲಿಗೆ ಬರ್ತಾ ಇದ್ವಿ..! ಅಮೇಜಿಂಗ್ ಪ್ಲೇಸ್ ಅಲ್ವಾ..? ಆ ಮಂಜು ತಣ್ಣಗೆ ಮೈ ಸೋಕ್ತಾ ಇದ್ರೆ.. ಆಹ್ಹಾ.. ಚಳಿಯಲ್ಲೂ ಅದೆಂಥಾ ಹಿತ ಅನಿಸುತ್ತಲ್ವಾ ಸಾರ್..! ಮಜಾ ಮಾಡಿರ್ತೀರಾ ಬಿಡಿ.. ಹೇಗಿತ್ತು ಸಾರ್ ಕಾಶ್ಮೀರ್ ಅಥವಾ ಹಿಮಾಲಯದ ಪ್ರವಾಸ..? ಅಂತ ಕೇಳ್ತಾ ಇದ್ದೀರಾ,..?
ಈ ವೀಡೀಯೋ ನೋಡಿ..!
https://www.youtube.com/watch?v=cuunhcSMt2U
ಅಯ್ಯೋ ಗುರೂ, ನಾವು ಕಾಶ್ಮೀರಕ್ಕೂ ಹೋಗ್ಲಿಲ್ಲ, ಹಿಮಾಲಯಕ್ಕೂ ಹೋಗ್ಲಿಲ್ಲ..! ಇಂಥಹ ಸುಂದರ, ಅತಿ ಸುಂದರ ಬಿಳಿಯ ನೊರೆಯ ಬುಗ್ಗೆಯನ್ನು ನೋಡಿ ಕಣ್ ತಂಪು ಮಾಡಿಕೊಳ್ಳೋಕೆ ನಾವು ಅಷ್ಟೊಂದು ದೂರ ಹೋಗ್ಬೇಕಾ..? ಬೇಡ್ವೇ ಬೇಡ ಸಾರ್… ಇಷ್ಟೊಂದು ಸಖತ್ ಆಗಿರೋ ಪ್ಲೇಸ್ ನಮ್ ಬೆಂಗಳೂರಿನಲ್ಲೇ ಇದೆ..! ನೀವಿನ್ನೂ ಹೋಗ್ಲಿಲ್ವಾ..? ಏನ್ ಬಾಸ್ ನೀವು ಬೆಂಗಳೂರಲ್ಲೇ ಇರ್ತೀರಿ, ಆದ್ರೂ ಈ ಅಮೇಜಿಂಗ್ ಪ್ಲೇಸ್ ಗೆ ಹೋಗಿಲ್ಲ ಅಂದ್ರೆ..?! ಇನ್ನಾದ್ರೂ ಒಂದ್ಸಲ ಈ ಸ್ವರ್ಗ ಲೋಕಕ್ಕೆ ಹೋಗಿಬನ್ನಿ..! ಈ ಪ್ಲೇಸ್ ಯಾವುದು..? ಇಲ್ಲಿನ ಬಿಳಿಯ ನೊರೆಗೆ ಸೌಂದರ್ಯಕ್ಕೆ ಕಾರಣವಾದ್ರೂ ಏನೆಂದು ಹೇಳ್ತೀವಿ..! ಆಮೇಲೆ ಹೋಗ್ಬೇಕು ಅಂತ ಅನಿಸಿದ್ರೆ ಹೋಗಿ ಬನ್ನಿ..!
ಈ ಪ್ಲೇಸ್ ಬೇರೆ ಯಾವುದೂ ಅಲ್ಲ ನಮ್ ಬೆಂಗಳೂರ “ಬೆಳಂದೂರ್ ಲೇಕ್”..! ಹ್ಞಾಂ ಸಾರ್ ನಮ್ ಬೆಳಂದೂರ್ ಲೇಕೇ..! ಆದ್ರೆ ನೀವು ಅಂದು ಕೊಂಡಿರೋ ತರ ಇದು ಮಂಜು ಕರಗಿ ಬೀಳ್ತಾ ಇರೋದಲ್ಲ…! ಇದು “ಟಾಕ್ಸಿಕ್ ಫೋಮ್” ಅಥವಾ ವಿಷಕಾರಿಯಾದ ನೊರೆ ಬುಗ್ಗೆ..! ಹಿಮಾಲಯದಲ್ಲಿ ಹಿಮ ಕರಗಿದಂತೆ, ಕಾಶ್ಮೀರದಲ್ಲಿ ಮಂಜಿನ ಸೌಂದರ್ಯ ಕಣ್ಣಿಗೆ ರಾಚುವಂತೆ ಕಾಣೋ ಇದು ವಿಷಕಾರಿ ಫೋಮ್ ಅನ್ನೋದೇ ಆಘಾತಕಾರಿ..!
ನಗರದ ಆಗ್ನೇಯ ಭಾಗದಲ್ಲಿರುವ ಈ ಕೆರೆ 9000 ಎಕರೆ ವಿಸ್ತೀರ್ಣವಿದ್ದು, ಈ ಹಿಂದೆಯೂ ಇಲ್ಲಿ ಇದೇ ರೀತಿಯ ಬಿಳಿಯ ರತ್ನನೊರೆ ಕಾಣಿ ಕೊಂಡಿತ್ತು..! ಈಗ ಮತ್ತೆ ಕಾಣಿಸಿ ಕೊಂಡಿದೆ..! ವೀಡಿಯೋದಲ್ಲಿರುವಂತೆ ಸೇತುವೆ ದಾಟಲೂ ಕಷ್ಟ ಆಗ್ತಾ ಇದೆ..! ಈ ನೊರೆಯಲ್ಲಿ ಆಟ ಆಡುವುದು ತುಂಬಾ ಡೇಂಜರ್..! ಇದು ಕೈಗಾರಿಕಾ ತ್ಯಾಜ್ಯಗಳಿಂದ ಉಂಟಾಗುವ ಅಪಾಯಕಾರಿ ನೊರೆ..!
ಅಲ್ಲಾ ಸ್ವಾಮಿ ಬೆಂಗಳೂರ್ ಕ್ಲೀನ್ ಸಿಟಿ, ಸಿಲಿಕಾನ್ ಸಿಟಿ, ಇದರಷ್ಟು ನೀಟ್ ಯಾವುದೂ ಇಲ್ಲ.. ಅಂತೆಲ್ಲಾ ಜಂಬ ಕೊಚ್ಚಿ ಕೊಳ್ತೀವಿ..! ರೀ ಇದೆಂಥಾ ಸ್ವಚ್ಛ ಬೆಂಗಳೂರ್ರೀ..? ನೀವು ಈ ವಿಡೀಯೋ ನೋಡಿ ಬೆಳಂದೂರು ಲೇಕ್ ಗೆ ಹೋಗ್ತೀರೋ ಬಿಡ್ತೀರೋ ಗೊತ್ತಿಲ್ಲ..! ಹೋದ್ರೆ ಆರೋಗ್ಯ ಹಾಳಾದ್ರೆ ನಾವು ಜವಬ್ದಾರಲ್ಲ..! ಆದ್ರೆ ಒಂದಂತೂ ಮಾಡಿ, ನಮ್ ಸರ್ಕಾರಕ್ಕೆ ಉಗಿದು ಉಪ್ಪಿನಕಾಯಿ ಹಾಕೋದನ್ನು ಮರೆಯ ಬೇಡಿ..! ಬೆಂಗಳೂರಲ್ಲಿ ಒಂದ್ ಕಾಲದಲ್ಲಿ 280ಕ್ಕೂ ಹೆಚ್ಚು ಸರೋವರಗಳಿದ್ವಂತೆ..! ಆದ್ರೆ ಇವತ್ತು ನೆಟ್ಟಗೆ ಇಪ್ಪತ್ತೂ ಇಲ್ಲ..! ಇರೋದನ್ನು ಉಳಿಸಿಕೊಳ್ಳೋಕು ಆಗಲ್ಲ..ಅಂದ್ರೆ ಶೇಮ್, ಶೇಮ್ ಶೇಮ್
https://www.youtube.com/watch?v=cuunhcSMt2U
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com