24 ಗಂಟೆ ಫೇಸ್ ಬುಕ್, ಟ್ವೀಟರ್, ಇನ್ಸ್ ಟಾಗ್ರಾಂ, ವಾಟ್ಸಪ್ ಅಂತ ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿ ಇರೋರಿಗೆ ಇದು ಶಾಕಿಂಗ್ ಸ್ಟೋರಿ… ಇದನ್ನು ಓದಿಯಾದ್ರು ಬದಲಾಗಿ.
ಸೋಶಿಯಲ್ ಮೀಡಿಯಾಕ್ಕೆ ಅಡಿಟ್ ಆದವರು ಯಾರೊಂದಿಗೂ ಅಷ್ಟೊಂದು ಬೆರೆಯಲ್ಲ. ಮುಕ್ತವಾಗಿ ಮಾತಾಡಲ್ಲ. ನೋವು-ನಲಿವು ಎಲ್ಲವನ್ನು ಕೂಡ ಫೇಸ್ ಬುಕ್, ಇನ್ಸ್ಟಾಗ್ರಾಂ , ವಾಟ್ಸಪ್ , ಟ್ವೀಟರ್ ನಲ್ಲಿ ಹೊರಹಾಕ್ತಾರೆ. ಸ್ಟೇಟಸ್ ಗಳು ಅವರ ಭಾವನೆ ಹೊರ ಹಾಕೋಕೆ ಇರೋ ವೇದಿಕೆ ಆಗಿದೆ.
ಹೀಗೆ ನೇರ ನೇರವಾಗಿ ಭಾವನೆ ಹೊರ ಹಾಕದೆ , ಹತ್ತಿರದವರೊಡನೆ ಹಂಚಿಕೊಳ್ಳದೇ ಇರೋರು ನಿಧಾನಕ್ಕೆ ಮಾನಸಿಕ ಖಿನ್ನತಗೆ ಒಳಗಾಗ್ತಾರೆ. ಇವರಲ್ಲಿ ಋಣಾತ್ಮಕ ಭಾವನೆಗಳೇ ಹೆಚ್ಚು ಎಂದು ಅಮೆರಿಕಾದ ಮಾನಸಿಕ ಆರೋಗ್ಯ ರಾಷ್ಟ್ರೀಯ ಸಂಸ್ಥೆ ಹೇಳಿದೆ.