ಗಂಗೂಲಿಗೆ ಮೈಕ್ರೋಸಾಫ್ಟ್ ಕಂಪನಿ ಮುನ್ನೆಡೆಸೋ ಸಾಮಾರ್ಥ್ಯವಿದೆ…! ಹೀಗೆಂದು ಹೇಳಿದ್ದು ಯಾರು ಗೊತ್ತಾ..?

Date:

ಎಲ್ಲರ ಪ್ರೀತಿಯ ದಾದಾ ಸೌರವ್ ಗಂಗೂಲಿ. ಭಾರತ ಕ್ರಿಕೆಟ್‍ಗೆ ಹೊಸ ಆಯಾಮವನ್ನು ತಂದುಕೊಟ್ಟ ನಾಯಕ. ವಿದೇಶಿ ನೆಲದಲ್ಲಿ ಗೆಲ್ಲೋದು ಹೇಗೆ ಅಂತ ತೋರಿಸಿದ ಕ್ಯಾಪ್ಟನ್..!

ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಕ್ರಿಕೆಟಿಗ, ಅತ್ಯುತ್ತಮ ನಾಯಕ..! ತಂಡವನ್ನು ಯಶಸ್ವಿಯಾಗಿ ಮುನ್ನೆಡಿಸಿದ ಗಂಗೂಲಿಗೆ ಮೈಕ್ರೋಸಾಫ್ಟ್ ಕಂಪನಿಯನ್ನು ಸಹ ಮುಂದುವರೆಸೋ ಸಾಮಾರ್ಥ್ಯವಿದೆ…!
ಹೀಗಂತ ಯಾರೋ ಕ್ರಿಕೆಟಿಗರಾಗಲಿ ಅಥವಾ ಸಿನಿಮಾ ತಾರೆಗಳಾಗಲಿ ಹೇಳಿದ್ದಲ್ಲ..! ಮೈಕ್ರೋಸಾಫ್ಟ್ ಸಂಸ್ಥೆಯ ಹಾಲಿ ಸಿಇಒ ಸತ್ಯ ನಾದೆಲ್ಲ..!


ಹೌದು, ಟೀಂ ಇಂಡಿಯಾದ ಮಾಜಿನಾಯಕ ಸೌರವ್ ಗಂಗೂಲಿಗೆ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಮುನ್ನೆಡಸೋ ಸಾಮಾರ್ಥ್ಯವಿದೆ ಅಂತ ಸತ್ಯ ನಾದೆಲ್ಲ ಹೇಳಿದ್ದಾರೆ.
ತಮ್ಮ ‘ಹಿಟ್ ರಿಫ್ರೆಸ್’ ಪುಸ್ತಕ ಪ್ರಚಾರದ ಸಲುವಾಗಿ ಭಾರತ ಪ್ರವಾಸದಲ್ಲಿದ್ದು, ಪಶ್ಚಿಮ ಬಂಗಾಳದಲ್ಲಿ ಮಾತನಾಡಿದ ಅವರು, ಗಂಗೂಲಿ ಟೀಂ ಇಂಡಿಯಾದ ನಾಯಕರಾಗಿದ್ದು ಅನಿರೀಕ್ಷಿತ. ಆದರೆ, ನಾಯಕರಾದ ಮೇಲೆ ಟೀಂ ಇಂಡಿಯಾದಲ್ಲಿ ಸಾಕಷ್ಟು ಕ್ರಾಂತಿಕಾರಿ ಬೆಳವಣಿಗೆಗಳಿಗೆ ಕಾರಣರಾದ್ರು. ಉಮೇಶ್ ಯಾದವ್ ಅವರಂತಹ ಆಟಗಾರರು ಟೀಂ ಇಂಡಿಯಾದಲ್ಲಿರಲು ಕಾರಣ ಸೌರವ್ ಎಂದು ಹಾಡಿ ಹೊಗಳಿದ್ದಾರೆ.


ಗಂಗೂಲಿ ಅವರ ನಾಯಕತ್ವ ಗುಣಗಳು ಸತ್ಯ ನಾದೆಲ್ಲಾ ಅವರ ಮೇಲೆ ಪ್ರಭಾವ ಬೀರಿವೆಯಂತೆ..! ಗಂಗೂಲಿ ಟೀಂ ಇಂಡಿಯಾದ ನಾಯಕತ್ವವಹಿಸಿಕೊಳ್ಳೋ ಮೊದಲು ತಂಡದಲ್ಲಿ ಕೇವಲ 5-6 ರಾಜ್ಯದ ಆಟಗಾರರ ಪ್ರಭಾವ ಮಾತ್ರವಿತ್ತು. ಗಂಗೂಲಿ ಕ್ಯಾಪ್ಟನ್ ಆದ ಮೇಲೆ ನಾನಾ ರಾಜ್ಯದ ಪ್ರತಿಭಾವಂತ ಆಟಗಾರರಿಗೆ ಅವಕಾಶಗಳು ಸಿಕ್ಕವು ಎಂದು ಹೇಳಿರೋ ಸತ್ಯ ನಾದೆಲ್ಲಾ ಗಂಗೂಲಿ ನಾಯಕತ್ವ ಗುಣಗಳನ್ನು ಕೊಂಡಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...