ಸುವರ್ಣದ ಕೀರ್ತಿ ಕಳಶ ಸೌಜನ್ಯ…!

Date:

ಇವರು ಇಂಜಿನಿಯರಿಂಗ್ ವಿದ್ಯಾರ್ಥಿನಿ. ಮಾಧ್ಯಮ ಕ್ಷೇತ್ರಕ್ಕೆ ಬರುವ ಬಗ್ಗೆ ಎಂದೂ ಕನಸು ಕಂಡಿರಲಿಲ್ಲ. ಗೆಳೆಯನ ಸಲಹೆಯಂತೆ ಮಾಧ್ಯಮ ರಂಗಕ್ಕೆ ಕಾಲಿಟ್ಟವರು.

ಎಲ್ಲ ಅಂದುಕೊಂಡಂತೆ ಆಗಿದ್ದರೆ ಸುವರ್ಣ ಚಾನಲ್ ನ ಮೂಲಕವೇ ಮಾಧ್ಯಮರಂಗ ಪ್ರವೇಶ ಮಾಡ್ತಿದ್ರು. ಆದ್ರೆ, ಇವರ ಜರ್ನಿ ಶುರುವಾಗಿದ್ದು ಉದಯ ಟಿವಿ ಮೂಲಕ. ಇವತ್ತು ಸುವರ್ಣ ಚಾನಲ್ ನ ಕೀರ್ತಿ ಕಳಶ…!


ಸೌಜನ್ಯ ಕೀರ್ತಿ, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷದ ಪಯಣ ಇವರದ್ದು. ಮಾಧ್ಯಮಕ್ಕೆ ಬಂದಿದ್ದು ಅಚಾನಕ್ ಆಗಿ. ಮಾತು, ನಿರೂಪಣಾ ಶೈಲಿ, ಎಲ್ರಿಗೂ ಇಷ್ಟವಾಗೋ ವಾಯ್ಸ್ ಹಾಗೂ ತನ್ನ ಪ್ರತಿಭೆಯಿಂದ ಇಲ್ಲಿಯೇ ಗಟ್ಟಿಯಾಗಿ ನೆಲೆಯೂರಿದ್ರು.


ತಂದೆ ಮೂಲತಃ ಚನ್ನಪಟ್ಟಣದವರು. ಸೌಜನ್ಯ ಹುಟ್ಟಿದ್ದು ತಾಯಿಯ ತವರು ಮಂಡ್ಯದಲ್ಲಿ. ಬೆಳೆದಿದ್ದು ಬೆಂಗಳೂರಲ್ಲಿ. ತಂದೆ ಪ್ರಭು, ರೈಲ್ವೆ ಪೊಲೀಸ್. ತಾಯಿ ಶಿವಮ್ಮ. ಅಕ್ಕ ಚೈತನ್ಯ, ಬಾವ ವೈದ್ಯಾನಂದ್. ಪತಿ ಕೀರ್ತಿ ನಾರಯಣ್, ಕಲರ್ಸ್ ಕನ್ನಡ ವಾಹಿನಿ ಉದ್ಯೋಗಿ. ಮಾವ ಗೋವಿಂದ ರಾಜ್, ಅತ್ತೆ ವತ್ಸಲ (ಸಂಗೀತ ಟೀಚರ್).


ಬೆಂಗಳೂರಿನ ಆರ್‍ಪಿಎ ಶಾಲೆಯಲ್ಲಿ ಎಲ್‍ಕೆಜಿಯಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ ಸೌಜನ್ಯ, ಅರಬಿಂದೋ ಕಾಲೇಜಿನಲ್ಲಿ ಪಿಯುಸಿಯನ್ನು ಹಾಗೂ ಸಿದ್ಧಾರ್ಥ ಕಾಲೇಜಿನಲ್ಲಿ ಎಎಂಐಇಟಿಇ ಇಂಜಿನಿಯರಿಂಗ್ ಪದವಿ ಪಡೆದ್ರು.


ಪಿಯುಸಿ ಮುಗಿದ ಮೇಲೆ ರಜೆಯಲ್ಲಿ ಕಾಯಕ ಕಂಪ್ಯೂಟರ್ ಎಜುಕೇಷನ್ಸ್ ನಲ್ಲಿ ಸ್ಪೋಕನ್ ಇಂಗ್ಲಿಷ್ ಹಾಗೂ ಟ್ಯಾಲಿ ಟೀಚ್ ಮಾಡ್ತಿದ್ದರು. ಸೈನ್ಸ್ ಸ್ಟೂಡೆಂಟ್ ಆಗಿದ್ದ ಸೌಜನ್ಯ ತಾವು ಟ್ಯಾಲಿಯಲ್ಲಿ 1 ವಾಲ್ಯುಮ್ ಕಲಿತು, ತಾನು ಕಲಿತಿದ್ದನ್ನು ಬೇರೆಯವರಿಗೆ ಹೇಳಿಕೊಡ್ತಿದ್ರು.


ವೀಕೆಂಡ್ ಒಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಕೂಲ್ ಡೇಸ್ ಫ್ರೆಂಡ್ ಪಾಲ್ಗೊಂಡಿದ್ದರು. ಸುವರ್ಣ ಚಾನಲ್ ನಲ್ಲಿದ್ದ ಅವರು, ‘ನೀನು ಆ್ಯಂಕರಿಂಗ್ ಚೆನ್ನಾಗಿ ಮಾಡ್ತೀಯ. ಸುವರ್ಣದಲ್ಲಿ ವೆಕೆನ್ಸಿ ಇದೆ ಇಂಟರ್ ವ್ಯೂ ಅಟೆಂಡ್ ಮಾಡು ಅಂದ್ರು.


ಆಗಿನ್ನೂ ಸೌಜನ್ಯ ಸೆಕೆಂಡ್ ಈಯರ್ ಇಂಜಿನಿಯರಿಂಗ್ ವ್ಯಾಸಂಗ ಮಾಡ್ತಿದ್ರು. ಬೆಳಗ್ಗೆ ಕಾಲೇಜು, ಸಂಜೆ ಸುವರ್ಣ ಆಫೀಸು. ಹೀಗೆ ಸುಮಾರು ಒಂದುವರೆ ತಿಂಗಳು ಅಲೆದ್ರು. ಯಾರೂ ಯಾರೆಂದರೆ ಯಾರೂ ಅವರನ್ನು ಮಾತಾಡಿಸಿರ್ಲಿಲ್ಲ.


ಕೊನೆಗೂ ಒಂದು ದಿನ ಸ್ಕ್ರೀನ್ ಟೆಸ್ಟ್ ಗೆ ಕರೆದ್ರು. ಸ್ಕ್ರಿನ್ ಟೆಸ್ಟ್ ನಲ್ಲಿ ಟಿಪಿ ಆಪರೇಟ್ ಮಾಡಿದ್ದು ಕೀರ್ತಿಶಂಕರಘಟ್ಟ (ಕಿರಿಕ್ ಕೀರ್ತಿ). ಯಾಕಂದ್ರೆ ಅದರ ಗಂಧಗಾಳಿ ಕೂಡ ಸೌಜನ್ಯಗೆ ಗೊತ್ತಿತರ್ಲಿಲ್ಲ.

ನಂತರ ಅಂದಿನ ಸುವರ್ಣ ಮುಖ್ಯಸ್ಥರಾಗಿದ್ದ ಎಚ್.ಆರ್ ರಂಗನಾಥ್ ಅವರು ಇಂಟರ್ ವ್ಯೂ ಗೆ ಬರ ಹೇಳಿದ್ರು. ರೆಸ್ಯೂಮ್ ನೋಡಿದ ರಂಗನಾಥ್ ಅವರು, ಈಗ ಇಲ್ಲಿಗೆ ಬಂದು ಏನ್ ಮಾಡ್ತೀಯಾ…? ಮೊದಲು ಡಿಗ್ರಿ ಕಂಪ್ಲೀಟ್ ಮಾಡು ಅಂತ ಬೈದಿದ್ದರಂತೆ…! ಆಮೇಲೆ ಸುವರ್ಣ ಕಡೆಗೆ ಸೌಜನ್ಯ ಹೋಗಿರಲಿಲ್ಲ.


ಸುವರ್ಣ ಇಂಟರ್ ವ್ಯೂ ಗೆ ಹೋಗುವ ಮೊದಲು ಆರ್ ಜೆ ಆಗಬೇಕೆಂದು ಇಷ್ಟಪಟ್ಟಿದ್ರು. ಹಾಗಾಗಿ ಎಸ್‍ಎಫ್‍ಎಂಗೆ ಹೋಗಿದ್ರು. ಅಲ್ಲಿ ಕೆಲಸ ಖಾಲಿ ಇರಲಿಲ್ಲ.


ನಂತರ ಉದಯ ಟಿವಿಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದ್ರು. ಉದಯ ಚಾನಲ್ ನಲ್ಲಿ ಜಯಶ್ರೀ ಶೇಖರ್ ಅವರು ಸ್ಕ್ರೀನ್ ಟೆಸ್ಟ್ ಕೊಟ್ರು. ಅದು 2010 ಆಗಸ್ಟ್ 28.

ಸ್ಕ್ರೀನ್ ಟೆಸ್ಟ್ ಪಾಸ್ ಆಗಿ ಕೆಲಸ ಗಿಟ್ಟಿಸಿಕೊಂಡ ಸೌಜನ್ಯ ಅವರಿಗೆ ಮೊದಲ ದಿನ ವಾಯ್ಸ್ ವೋವರ್ ಕೊಡೋಕೆ ಹೇಳಿದ್ರು. ಟೆಸ್ಟ್ ಗೆ ಅಂತ ಕೊಟ್ಟಿದ್ದ ವಾಯ್ಸ್ ಓಕೆಯಾಗಿ ಆನ್ ಏರ್ ಕೂಡ ಆಯ್ತು…!2010ರ ಸೆಪ್ಟೆಂಬರ್ 3ರಂದು ಮೊದಲ ಬಾರಿಗೆ ಸ್ಕ್ರೀನ್ ಅಲಂಕರಿಸಿದ್ರು.


ಅಪ್ಪ-ಅಮ್ಮನಿಗೆ ಮೀಡಿಯಾದಲ್ಲಿ ಕೆಲಸ ಮಾಡೋದು ಇಷ್ಟವಿರ್ಲಿಲ್ಲ. ಹೀಗಿರುವಾಗ ತಾನೇ ಇಂಟರ್ ವ್ಯೂಗೆ ಹೋಗಿದ್ದೆ ಅಂದ್ರೆ ಬೈಯಿಸಿಕೊಳ್ಳಬೇಕಾಗುತ್ತೆ ಅಂತ ಕಾಲೇಜಿಗೆ ಆಡಿಷನ್ ಗೆ ಬಂದಿದ್ರು ಸೆಲೆಕ್ಟ್ ಆದೆ ಅಂತ ಸುಳ್ಳು ಹೇಳಿದ್ದರು ಸೌಜನ್ಯ.


ಮುಂದೆ ಓದು ಮತ್ತು ವೃತ್ತಿ ಎರಡನ್ನೂ ನಿಭಾಯಿಸಿಕೊಂಡು ಹೋದಾಗ ತಂದೆ-ತಾಯಿ ಮೆಚ್ಚಿದ್ರು. ನಿತ್ಯ ಸಂಜೆ 5.30ರ ತನಕ ಕಾಲೇಜು ನಂತರ ರಾತ್ರಿ 10.30ವರೆಗೆ ಉದಯದಲ್ಲಿ ಕೆಲಸ. ಹೀಗೆ ಜೀವನ ಸಾಗಿತು. ಅಷ್ಟೊತ್ತಿಗೆ ಇಂಜಿನಿಯರಿಂಗ್ ಪದವಿ ಕೂಡ ಮುಗಿಯಿತು.


ಡಿಗ್ರಿ ಮಾಡಿಸಿರೋದ್ಯಾಕೆ ಅದ್ರಲ್ಲಿ ಕೆಲಸ ಮುಂದುವರೆಸು ಅಂತ ಮನೆಯಲ್ಲಿ ಒತ್ತಾಯ ಮಾಡಿದ್ರಿಂದ ಕಾಗ್ನಿಸೆಟ್-ಮಾನ್ಯತ ಟೆಕ್ ಪಾರ್ಕ್‍ನಲ್ಲಿ ಕೆಲಸಕ್ಕೆ ಸೇರಿದ್ರು. ಅಲ್ಲಿ ಎರಡೇ ಎರಡು ತಿಂಗಳು ಕೆಲಸ ಮಾಡಿದ್ದರಷ್ಟೇ. ಮಾಧ್ಯಮ ಕ್ಷೇತ್ರದ ಸೆಳೆತ ಹೆಚ್ಚಿತು.


ಟಿವಿ9ಗೆ ಹೋಗಿ ಸ್ಕ್ರೀನ್ ಟೆಸ್ಟ್ ಕೊಟ್ಟು ಸೆಲೆಕ್ಟ್ ಕೂಡ ಆದ್ರು. 3 ತಿಂಗಳು ನೈಟ್ ಶಿಫ್ಟ್ ಮಾಡ್ಬೇಕಾಗಿದ್ದರಿಂದ ಮನೆಯಲ್ಲಿ ಒಪ್ಪಲಿಲ್ಲ.

ಉದಯ ಟಿವಿಯ ಜಯಶ್ರೀ ಶೇಖರ್ ಮತ್ತು ಶ್ರೀಧರ್ ಅವರು ಉದಯಕ್ಕೆ ಕೆಲಸಕ್ಕೆ ಬರ್ಲಿ. ನೈಟ್ ಶಿಫ್ಟ್ ಇರಲ್ಲ ಅಂತ ಸೌಜನ್ಯ ಅವರ ತಂದೆ-ತಾಯಿಯ ಮನವೊಲಿಸಿದ್ರು.

ಉದಯದಲ್ಲಿ ‘ಕುಹೂ ಕುಹೂ’ ರಿ-ಎಡಿಟೆಡ್ ಕಾರ್ಯಕ್ರಮ ನಡೆಸಿಕೊಡ್ತಿದ್ರು. ‘ಇಂದಿನ ಎಲ್ಲಾ ಕಾರ್ಯಕ್ರಮಗಳ ಪ್ರಾಯೋಜಿಕರು’ ಎಂಬ ದನಿ ಇವರದ್ದೇ. ಸುಮಾರು 5 ವರ್ಷಗಳ ಕಾಲ ಉದಯ, ಉದಯ ಮ್ಯೂಸಿಕ್, ಉದಯ ಕಾಮಿಡಿ, ಉದಯ ಮೂವಿಸ್, ಚಿಂಟು ಕಮರ್ಷಿಯಲ್ ಗೆ ವಾಯ್ಸ್ ವೋವರ್ ಕೊಟ್ಟಿದ್ದಾರೆ.


2015ರಲ್ಲಿ ಸಮಯ ಚಾನಲ್ ಸೇರಿದ್ರು. ನ್ಯೂಸ್, ಡಿಸ್ಕಷನ್ಸ್, ಸಿನಿಮಾ ಸಂಬಂಧಿಸಿದ ಕಾರ್ಯಕ್ರಮಗಳು, ಇಂಟರ್ ವ್ಯೂ ಎಲ್ಲವನ್ನೂ ಸೌಜನ್ಯ ಮಾಡಿದ್ರು.


ನಾಲ್ಕು ತಿಂಗಳ ಬಳಿಕ ಅನಿವಾರ್ಯವಾಗಿ ಸಮಯ ಚಾನಲ್ ಬಿಟ್ಟರು. ಸುವರ್ಣ ಎಂಟರ್ ಟ್ರೈನ್ಮೆಂಟ್ ನಲ್ಲಿ ಬರ್ತಿದ್ದ ‘ಆನಂದ ವಾಣಿ’ ಎಂಬ ಜ್ಯೋತಿಷ್ಯ ಕಾರ್ಯಕ್ರಮ ಮಾಡಿಕೊಟ್ರು.


ಬಳಿಕ ಸುವರ್ಣ ನ್ಯೂಸ್ ನಲ್ಲಿ ಕೆಲಸ ಖಾಲಿ ಇದೆ ಅಂತ ಗೊತ್ತಾಯ್ತು. ಇಂಟರ್ ವ್ಯೂ ಅಟೆಂಡ್ ಮಾಡಿದ್ರು. ಕೆಲಸವೂ ಆಯ್ತು. 2016ರಲ್ಲಿ ಸುವರ್ಣ ಸೇರಿದ್ರು. ಹಿಂದೆ 2010ರಲ್ಲಿ ಸುವರ್ಣದಲ್ಲಿ ಕೆಲಸ ಮಾಡ್ಬೇಕು ಅಂತ ಹೋಗಿದ್ದ ಸೌಜನ್ಯ ಕನಸು 6 ವರ್ಷದ ಬಳಿಕ ನನಸಾಯಿತು.


ನಿತ್ಯ ‘ಸುವರ್ಣ ಫೋಕಸ್’ ನಡೆಸಿಕೊಡ್ತಿದ್ದಾರೆ. ಭಾವನ ಅವರು ರಜೆಯಲ್ಲಿದ್ದಾಗ ಪ್ರೈಂ ನ್ಯೂಸ್ ನಡೆಸಿಕೊಡೋ ಸೌಜನ್ಯ ಹಿಂದೆ ‘ಮಜಾ ಟಾಕ್ ಶೋ’, ‘ಮೆಟ್ರೋ ಮೆಜಿಸ್ಟಿಕ್’ ನಡೆಸಿಕೊಟ್ಟಿದ್ರು. ಸಿನಿಮಾ ಪ್ರೋಗ್ರಾಂಗಳು ಸೇರಿದಂತೆ ಎಲ್ಲಾ ಬಗೆಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ.


ಬೆಂಗಳೂರು ಕರಗ ಟೈಮಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನೆ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಇಡೀ ರಾತ್ರಿ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ.


ಇವರಿಗೆ ವಾಯ್ಸ್ ಡಬ್ಬಿಂಗ್ ಕೊಡೋದು ಅಂದ್ರೆ ಇಷ್ಟ. ಮಣಿಪಾಲ್ ಇ ಲರ್ನಿಂಗ್ ಅವರ ಡಾಕ್ಯುಮೆಂಟರಿ ಸೇರಿದಂತೆ ಹತ್ತಾರು ಸಾಕ್ಷ್ಯಚಿತ್ರಗಳಿಗೆ ವಾಯ್ಸ್ ಕಂಠದಾನ ಮಾಡಿದ್ದಾರೆ.


ಒಮ್ಮೆ ಮನೋಮೂರ್ತಿ ಅವರು ಡಬ್ಬಿಂಗ್ ಆದ ಬಳಿಕ ಸೌಜನ್ಯ ಅವರಿಂದ ಹಾಡು ಹೇಳಿಸಲು ಬಯಸಿದ್ದರು. ಸೌಜನ್ಯ ಹಾಡಲು ಬರಲ್ಲ ಅಂದಾಗ ಇಷ್ಟೊಂದು ಒಳ್ಳೆಯ ವಾಯ್ಸ್ ಇದೆ ಹಾಡಲ್ಲ ಅಂದ್ರೆ ಹೇಗೆ ಅಂದಿದ್ದರು…!

8ನೇ ತರಗತಿಯಲ್ಲಿರುವಾಗ ಸಂಗೀತ ಕಲಿಯಲು ಹೋಗಿದ್ದ ಸೌಜನ್ಯ ಅವರಿಗೆ ಸಂಗೀತ ಟೀಚರ್ ರಫ್ ವಾಯ್ಸ್ ಇದೆ ಸಂಗೀತ ಆಗಲ್ಲ ಅಂತ ಹೇಳಿ ಕಳುಹಿಸಿದ್ದರಂತೆ. ಇದನ್ನು ನೆನೆಯುವ ಸೌಜನ್ಯ ನಾನು ಸಂಗೀತ ಕಲಿತಿದ್ದರೆ ಒಳ್ಳೆಯ ಅವಕಾಶ ಸಿಕ್ತಿತ್ತೇನೋ ಅಂತ ಯೋಚಿಸ್ತಿರ್ತಾರೆ.


ಬಾಲ್ಯದಿಂದಲೂ ನಟರಾದ ಅನಂತ್‍ನಾಗ್ ಮತ್ತು ರಮೇಶ್ ಅರವಿಂದ್ ಅಂದ್ರೆ ಸೌಜನ್ಯ ಅವರಿಗಿಷ್ಟ. ಒಮ್ಮೆ ಅನಂತ್ ನಾಗ್ ಅವರೇ ಸೌಜನ್ಯ ಅವರ ಭಾಷೆಯ ಹಿಡಿತ, ಸ್ಪಷ್ಟತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಉದಯ ಟಿವಿಯಿಂದ ನಡೆಯುವ ಸಿನಿಮಾ ಅವಾರ್ಡ್ ಕಾರ್ಯಕ್ರಮದಲ್ಲಿ ವಿನ್ನರ್ ಗಳ ಪ್ರೊಫೆಲ್ ಅನ್ನು ಸೌಜನ್ಯ ಓದ್ತಿದ್ರು. ಮದುವೆಯಾದ ವರ್ಷ ರಜೆಯ ಕಾರಣದಿಂದ ಬೇರೆಯಾರೋ ಇದಕ್ಕೆ ವಾಯ್ಸ್ ಕೊಟ್ಟಿದ್ದರು.

ಇದನ್ನು ಗಮನಿಸಿದ ರಮೇಶ್ ಅರವಿಂದ್ ಅವರು, ಕಳೆದಬಾರಿ ನೀಡಿದ್ದ ಹುಡುಗಿ ಹತ್ತಿರವೇ ವಾಯ್ಸ್ ಕೊಡ್ಸಿ ಅಂತ 10 ದಿನ ಕಾದು ವಾಯ್ಸ್ ತೆಗೆದುಕೊಂಡಿದ್ದರು. ಇವೆನ್ನೆಲ್ಲಾ ಯಾವತ್ತೂ ಮರೆಯಕ್ಕಾಗಲ್ಲ ಅಂತಾರೆ ಸೌಜನ್ಯ.


ಕೆಲವರು ಆ್ಯಂಕರ್ ಗಳನ್ನು ಜರ್ನಲಿಸ್ಟ್ ರೀತಿ ಟ್ರೀಟ್ ಮಾಡಲ್ಲ. ಇದು ತುಂಬಾ ನೋವು ಕೊಡೋ ವಿಚಾರ ಎಂದು ಎನ್ನುವ ಸೌಜನ್ಯ, ನಾವು ತೆರೆ ಮುಂದಿರುತ್ತೇವೆ. ಆದರೆ, ತೆರೆಯ ಹಿಂದೆ ಕೆಲಸ ಮಾಡುವವರ ಶ್ರಮ ತುಂಬಾ ಇರುತ್ತೆ. ಮುಖ್ಯವಾಗಿ ಅವರಿಗೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ ಎನ್ನುವುದನ್ನು ಮರೆತಿಲ್ಲ.


ಆರಂಭದ ದಿನಗಲ್ಲಿ ಏನೂ ಅಲ್ಲದ ನನಗೆ ಸಪೋರ್ಟ್ ಮಾಡಿದ್ದ ಜಯಶ್ರೀ ಶೇಖರ್ ಮೇಡಂ, ಶ್ರೀಧರ್ ಸರ್, ಜಯಪ್ರಕಾಶ್ ಶೆಟ್ಟಿ ಸರ್ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಈಗ ರವಿಹೆಗ್ಡೆ ಸರ್, ಅಜಿತ್ ಹನುಮಕ್ಕನವರ್ ಸರ್, ಭಾವನ ತುಂಬಾ ಪ್ರೋತ್ಸಾಹ ನೀಡ್ತಾರೆ. ಒಟ್ಟಾರೆ ಇಲ್ಲಿನ ಎನ್ವಿರಾನ್ಮೆಂಟ್ ತುಂಬಾ ಚೆನ್ನಾಗಿದೆ ಎನ್ನುತ್ತಾರೆ.


ಇಷ್ಟೆ ಅಲ್ಲದೆ ಸೌಜನ್ಯ ಅವರು ಆಗಾಗ ಪೆನ್ಸಿಲ್ ಸ್ಕೆಚ್ ಮಾಡ್ತಿರ್ತಾರೆ. ಜೊತೆಗೆ ರಾಜಾಜಿನಗರದ ರಾಘವೇಂದ್ರ ಸ್ಕೂಲ್ ಆಫ್ ಯೋಗದಲ್ಲಿ ಶೇಷಗಿರಿ ಅವರಿಂದ ಯೋಗಭ್ಯಾಸ ಕೂಡ ಮಾಡ್ತಿದ್ದಾರೆ.

ಜೊತೆಗೆ ಆಭರಣ ಮತ್ತು ಸೀರೆ ಜಾಹಿರಾತುಗಳಿಗೆ ಪೋಸ್ ಕೊಡೋದು ಅಂದ್ರೆ ಸಿಕ್ಕಾಪಟ್ಟೆ ಇಷ್ಟ…! ಒಂದಿಷ್ಟು ಜಾಹಿರಾತುಗಳಿಗೆ ಆಫರ್ ಬಂದಿದ್ರೂ ಕೆಲವೊಂದು ಕಾರಣಗಳಿಂದ ಮಾಡಲು ಸಾಧ್ಯವಾಗಿಲ್ಲ.


ಸೌಜನ್ಯ ಮತ್ತು ಇವರ ಪತಿ ಕೀರ್ತಿ ಅವ್ರು ಸ್ಟೇಜ್ ಪ್ರೋಗ್ರಾಂಗಳನ್ನು ನಡೆಸಿಕೊಡ್ತಿರ್ತಾರೆ. 2011ರಲ್ಲಿ ಡೆಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಹಮ್ಮಿಕೊಂಡಿದ್ದ ‘ ವಲ್ರ್ಡ್ ಕಪ್ ಸಿಗ್ನೇಚರ್ ಕ್ಯಾಂಪೇನಲ್ಲಿ ಇಬ್ಬರ ಮೊದಲ ಭೇಟಿ, ಪರಿಚಯ.

ಆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದ ಇವರಿಬ್ಬರು 2015 ರಲ್ಲಿ ನಡೆದ ವಿಶ್ವಕಪ್ ಹೊತ್ತಿಗೆ ಮದುವೆ ಆಗಿದ್ರು…! ಪ್ರೋಗ್ರಾಂ ನಡೆಸಿಕೊಡಲು ಕೀರ್ತಿ ಅವರೇ ತನಗೆ ಮುಖ್ಯ ಗುರು. ಸರಿ-ತಪ್ಪುಗಳನ್ನು ತಿಳಿಸುವುದು ಅವರೇ ಎನ್ನುತ್ತಾರೆ ಸೌಜನ್ಯ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

47) 25ಡಿಸೆಂಬರ್ 2017 : ಸೌಜನ್ಯ ಕೀರ್ತಿ

 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...