ಅಂತರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳಾಗಿ ಪರಿವರ್ತಿಸ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಡೆನಿಸ್,ಬಿಪಿನ್ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು SIP trunk line ಡಿವೈಸ್ ಇಟ್ಟುಕೊಂಡು ಪಿಆರ್ ಐ ಲೈನ್ ನಲ್ಲಿ 1 ನಿಮಿಷಕ್ಕೆ ಲಕ್ಷಾಂತರ ಇಂಟರ್ನ್ಯಾಷನಲ್ ಕಾಲ್ ಗಳನ್ನ ಲೋಕಲ್ ಕಾಲ್ ಗಳಾಗಿ ಪರಿವರ್ತಿಸ್ತಿತ್ತು. ಗಲ್ಫ್ ಕಂಟ್ರಿಗಳಲ್ಲಿ ಡೇಟಾ ಕಾಲನ್ನ ಬೇರೆ ಸರ್ವರ್ ಗೆ ಕಳುಹಿಸಿ ಇದೇ ರೀತಿ ಇಂಟರ್ನೆಟ್ ಸಹಾಯದಿಂದ ಕಾಲ್ ಗಳನ್ನ ಕನ್ವರ್ಟ್ ಮಾಡುತ್ತಿದರು. ಟೂರಿಸಂ ಕಸ್ಟಮರ್ ಕೇರ್ ಮಾಡ್ತಿದ್ದೇವೆ ಎಂದು ನಂಬಿಸಿ ಬಿಜ್ ಹಬ್ ಸೊಲ್ಯುಷನ್ ಪ್ರೈವೇಟ್ ಲಿಮಿಟೆಡ್, ಆರ್ಚರ್ ಟೆಕ್ನಾಲಜಿ, ಟೈಮ್ ಇನ್ಫೋ ಟೆಕ್ನಾಲಜಿ ಕಂಪೆನಿ ತೆರೆದು ವಂಚನೆ ಮಾಡುತ್ತಿದ್ದರು. ಇದರಿಂದ ಸರ್ಕಾರಕ್ಕೆ ಹತ್ತಾರು ಕೋಟಿ ನಷ್ಟ ಮಾಡಿದರು. ಈ ಸಂಬಂಧ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಅಂತರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳಾಗಿ ಪರಿವರ್ತನೆ
Date: