ರೋರಿಂಗ್ ಸ್ಟಾರ್ ಶ್ರೀಮುರುಳಿ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಇರೋ ನಟ. ಒಂದರ ಮೇಲೊಂದು ಹಿಟ್ ಸಿನಿಮಾವನ್ನು ನೀಡುತ್ತಿದ್ದಾರೆ.
ಚಂದ್ರಚಕೋರಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟವರು. ಮೊದಲ ಸಿನಿಮಾದಲ್ಲಿಯೇ ಭರ್ಜರಿ ಯಶಸ್ಸು ಗಳಿಸಿದ ನಟ. ನಂತರ ಸುಮಾರು 15 ಚಿತ್ರಗಳಲ್ಲಿ ನಟಿಸಿದರೂ ಆ ಸಿನಿಮಾಗಳು ಹೇಳಿಕೊಳ್ಳುವಂತೆ ಹಿಟ್ ಆಗಿರ್ಲಿಲ್ಲ. ಒಂದೊಳ್ಳೆ ಬ್ರೇಕ್ ಗಾಗಿ ಕಾಯುತ್ತಿದ್ದ ಮುರುಳಿಗೆ 2014ರಲ್ಲಿ ತೆರೆಕಂಡ ಉಗ್ರಂ ನಿರೀಕ್ಷೆಗೂ ಮೀರಿದ ಗೆಲುವು ತಂದುಕೊಟ್ಟಿತ್ತು.
ಬಳಿಕ 2015ರಲ್ಲಿ ತೆರೆಕಂಡ ‘ರಥಾವರ’ ಹಾಗೂ 2017ರಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಮಫ್ತಿ’ ಚಿತ್ರಗಳು ಮುರುಳಿ ಅವರನ್ನು ಮತ್ತಷ್ಟು ಎತ್ತರಕ್ಕೇರಿಸಿವೆ.
ಒಳ್ಳೆಯ ಚಿತ್ರಗಳನ್ನು ಕೊಡುವ ಉದ್ದೇಶದಿಂದ ತುಂಬಾ ಕಾದು ಸಿನಿಮಾ ಮಾಡುತ್ತಿದ್ದಾರೆ ಮುರುಳಿ. ಕಥೆ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚೂಸಿಯಾಗಿದ್ದಾರೆ.
ಇಷ್ಟೆಲ್ಲಾ ಓಕೆ, ಇದು ನಿಮಗೂ ಗೊತ್ತು. ಆದರೆ, ಇವರು ಅಕಸ್ಮಾತ್ ಸಿನಿಮಾರಂಗಕ್ಕೆ ಬರದೇ ಇದ್ದಿದ್ದರೆ ಏನಾಗಿರ್ತಿದ್ರು ಗೊತ್ತಾ..?
ಶ್ರೀಮುರಳಿ ಅವರಿಗೆ ವಿಜ್ಞಾನದ ಬಗ್ಗೆ ತುಂಬಾ ಆಸಕ್ತಿ. ಒಂದುವೇಳೆ ಬಣ್ಣದ ಲೋಕದತ್ತ ಮುಖ ಮಾಡದೇ ಇದ್ದಿದ್ದರೆ ಮುರುಳಿ ಡಾ ಶ್ರೀಮುರುಳಿ ಆಗಿರುತ್ತಿದ್ದರು. ಅಂದರೆ, ವೈದ್ಯರಾಗಿ ಜನಸೇವೆಯಲ್ಲಿ ಬ್ಯುಸಿಯಾಗಿರುತ್ತಿದ್ದರು…!
ಇತ್ತೀಚೆಗೆ ದಿ ನ್ಯೂ ಇಂಡಿಯನ್ ಟೈಮ್ಸ್ ಮುರುಳಿ ಅವರನ್ನು ಭೇಟಿ ಮಾಡಿ ಮಾತಾಡುತ್ತಿರುವಾಗ ಈ ವಿಷಯವನ್ನು ಹೇಳಿದ್ರು…! ನಾನು ಸಿನಿಮಾಕ್ಕೆ ಬರದೆ ಇದ್ದಿದ್ರೆ ಡಾಕ್ಟರ್ ಆಗಿರ್ತಿದ್ದೆ ಎಂದು ಸ್ಮೈಲ್ ಕೊಟ್ಟಿದ್ರು.
ಅದೇನೇ ಇರಲಿ. ಇಂದು ಸಿನಿಮಾರಂಗದಲ್ಲಿ ಗುರುತಿಸಿಕೊಂಡು ಅತ್ಯತ್ತಮ ನಟನೆಯಿಂದ ಜನಮಾನಸದಲ್ಲಿ ನೆಲೆಸಿರೋ ಇವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ. ಮುಂಬರುವ ಸಿನಿಮಾಗಳೂ ಗೆಲ್ಲಲಿ ಎನ್ನುತ್ತಾ…
-ಧುನಿಕ ಕೊಡಗು