ನಟಿ ಶ್ರೀದೇವಿ ನಮ್ಮನ್ನು ಅಗಲಿ ದಿನಗಳು ಉರುಳಿವೆ. ಅವರ ದಿಢೀರ್ ಸಾವಿನ ಸುದ್ದಿ ಬರುತ್ತಿದ್ದಂತೆ ಇಡೀ ದೇಶ ಸೂತಕದಲ್ಲಿ ಮುಳುಗಿತು. ಭಾರತೀಯ ಚಿತ್ರರಂಗ ಕಣ್ಣೀರಾಯಿತು.
ಕುಟುಂಬ ಕೂಡ ಆ ನೋವಿನಿಂದ ಹೊರಬಂದಿಲ್ಲ. ಇದೇ ವೇಳೆ ಶ್ರೀದೇವಿ ಅವರ ಮುದ್ದಿನ ಮಗಳು ಜಾಹ್ನವಿ ಅವರ ಹುಟ್ಟುಹಬ್ಬ ಬಂದಿದೆ. ಮಾರ್ಚ್ 7ರಂದು ಜಾಹ್ನವಿ 21ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಮೊದಲಬಾರಿಗೆ ಅಮ್ಮನ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಜೊತೆಗೆ ತಂದೆ-ತಾಯಿ ಹೆಮ್ಮೆ ಪಡುವಂತಹ ಕೆಲಸ ಮಾಡಿ ಸಂದೇಶ ನೀಡಿದ್ದಾರೆ.
ಅಮ್ಮ ನೀನು ದೂರಾವಾದ ಪ್ರತಿಕ್ಷಣವೂ ನನ್ನೊಂದಿಗೆ ಇದ್ದಂತೆ ಅನಿಸುತ್ತದೆ. ಎಂದಿಗೂ ಆಕೆಯ ಪ್ರೀತಿ ನನ್ನ ಸುತ್ತಲೂ ಇದ್ದಂತೆ ಭಾವಿಸ್ತೀನಿ. ‘ಇದ್ದಕ್ಕಿಯ ಅಂಧಕಾರವಾದ ತನ್ನ ಜೀವನದಲ್ಲಿ ಸ್ಪೂರ್ತಿಯಾಗಿ ತೆಗೆದುಕೊಂಡು ಮುಂದೆ ಸಾಗ್ತೀನಿ. ಈಗಲೂ ಪ್ರೀತಿಯನ್ನು ಪಡೆಯುತ್ತಿದ್ದೇನೆ. ನೋವು, ಸಂಕಟದಿಂದ ನೀನೇ ನನ್ನ ರಕ್ಷಿಸುತ್ತೀಯ ಎಂದುಕೊಳ್ಳುತ್ತಿದ್ದೇನೆ.
ಪ್ರತಿಕ್ಷಣವೂ ಕಣ್ಮಚ್ಚಿಕೊಂಡರೆ ನನಗೆ ಒಳ್ಳೆಯ ಸಂಗತಿಗಳೇ ಕಾಣಿಸುತ್ತವೆ. ಅದನ್ನೆಲ್ಲಾ ಕೊಟ್ಟಿದ್ದು ನೀನೇ…ನೀ ತುಂಬಾ ಒಳ್ಳೆಯವಳು. ಪರಿಶುದ್ಧವಾದ ಮನಸ್ಸು ನಿನ್ನದು. ಪ್ರೀತಿ ಇರೋ ತಾಯಿ . ಅದಕ್ಕಾಗಿಯೇ ದೇವ್ರು ನಿನ್ನನ್ನು ಕರೆದೊಯ್ದಿದ್ದು. ನೀನು ಹೆಮ್ಮೆಪಡುವಂತೆ ಇರುತ್ತೀವಿ ಎಂದು ಬರೆದಿದ್ದಾರೆ.