ಭಾರತಕ್ಕೆ ಚಿನ್ನದ ಪದಕ ಇಂದು ಬರುತ್ತೆ ನಾಳೆ ಬರುತ್ತೆ ಅಂತಾನೆ ಭಾವಿಸಿಕೊಂಡಿದ್ದ ಅಸಂಖ್ಯಾತ ಭಾರತೀಯರ ಕನಸು ದಿನೇ ದಿನೇ ಕಳೆಗಂದುತ್ತಾ ಬಂದಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಘಟಾನು ಘಟಿಗಳೆಲ್ಲರೂ ಇದೀಗ ತವರು ಮನೆ ಮುಖ ಮಾಡಿ ನಿಂತಿದ್ದಾರೆ, ಇದರ ನಡುವೆಯೂ ಭಾರತೀಯರಿಗೆ ಪದಕದಾಸೆ ಜೀವಂತವಾಗಿರಿಸಲು ಒಬ್ಬರಾದರೂ ಮುಂದಗುತ್ತಿರುವುದು ಭಾರತೀಯರಲ್ಲಿ ಚಿನ್ನ ಗೆಲ್ಲತ್ತಾರೆಂಬ ಭರವಸೆಯನ್ನು ಮೂಡಿಸುತ್ತಿದ್ದಾರೆ. ರಿಯೋ ಒಲಂಪಿಕ್‍ನ 10ನೇ ದಿನವಾದ ಸೋಮವಾರವೂ ಕೂಡ ಅಂತಹ ಭರವಸೆಯ ಆಶಾ ಕಿರಣ ಮೂಡಿಸಿದ್ದು ಬ್ಯಾಡ್ಮಿಂಟನ್ ತಾರೆಯರು ಮಾತ್ರ..!
ಇದೇ ಮೊದಲ ಬಾರಿಗೆ ಒಲಂಪಿಕ್ ಕ್ರೀಡಾಕೂಟಕ್ಕೆ ಪಾದಾರ್ಪಣೆ ಮಾಡಿರುವ ಕಿಡಂಬಿ ಶ್ರೀಕಾಂತ್ ಹಾಗೂ ಪಿವಿ ಸಿಂಧು ಎಲ್ಲರ ನಿರೀಕ್ಷೆಯನ್ನು ಜೀವಂತವಾಗಿರಿಸಿ ಕ್ವಾಟರ್ ಫೈನಲ್ ತಲುಪಿದ್ದಾರೆ. ಈ ಮೂಲಕ ಬ್ಯಾಡ್ಮಿಂಟನ್‍ನಲ್ಲಿ ಪದಕದ ಭರವಸೆ ಉಳಿಸಿಕೊಂಡಿದ್ದಾರೆ.
ಸೋಮವಾರ ನಡೆದ ಪುರುಷರ ಪ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ ಶ್ರೀಕಾಂತ್ 21-19, 21-19 ಸೆಟ್‍ಗಳಿಂದ ಡೆನ್ಮಾರ್ಕ್‍ನ ಜಾನ್ ಓ ಜಾರ್ಗೆನ್ಸನ್ ವಿರುದ್ದ ಗೆಲವು ಪಡೆದಿದ್ದಾರೆ. ವನಿತೆಯರ ಸಿಂಗಲ್ಸ್ ಪ್ರೀ ಕ್ವಾಟರ್ ಫೈನಲ್‍ನಲ್ಲಿ ಪಿವಿ ಸಿಂಧು 21-13, 21-5 ನೇರ ಸೆಟ್‍ಗಳಿಂದ ಚೈನೀಸ್ ತೃಪೆಯ ಚು ಯಿಂಗ್ ತ್ಸು ವಿರುದ್ದ ಸುಲಭ ಜಯ ದಾಖಲಿಸಿದರು. ಇದೀಗ ಇವರಿಬ್ಬರು ಮಾತ್ರ ಪದಕದಾಸೆಯನ್ನು ಜೀವಂತವಾಗಿರಿಸಿದ್ದಾರೆ.
POPULAR STORIES :
ಆಸ್ತಿಗಾಗಿ ಐಸಿಯುನಲ್ಲಿದ್ದ ತಂದೆಯ ಆಕ್ಸಿಜನ್ ಪೈಪ್ ಕಿತ್ತು ಹಾಕಿದ ಪುತ್ರಿ..!
ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆದರೆ ಐದು ವರ್ಷ ಜೈಲು..!
ಕಿಂಗ್ ಖಾನ್‍ಗೆ ಅಮೇರಿಕಾ ವಿಮಾನ ನಿಲ್ದಾಣದಲ್ಲಿ ಮತ್ತೊಮ್ಮೆ ಪಪ್ಪಿ ಶೇಮ್…!
ಸೈಕಲ್ ಕದಿಯಲು ಇಡೀ ಮರವನ್ನೇ ಕತ್ತರಿಸಿದ ಕತರ್ನಾಕ್ ಕಳ್ಳ…!
ಸ್ಯಾಮ್ ಸಂಗ್ ಕಂಪನಿಯು ಭೀಕರ ರಹಸ್ಯದ ಬಗ್ಗೆ ಬಾಯ್ಮುಚ್ಕೊಂಡು ತೆಪ್ಪಗಿರೋಕೆ ಕೆಲಸಗಾರರಿಗೆ ಭಾರೀ ಮೊತ್ತ ನೀಡಿತ್ತಂತೆ
ಈ ಹಾಡನ್ನು ಕೇಳಿದವ್ರೆಲ್ಲಾ ಸುಸೈಡ್ ಮಾಡ್ಕೊಂಡ್ರಂತೆ…!
ದೇಶೀ ತಳಿ ಹಸುವಿನ ಸಗಣಿ ಸೇವಿದರೆ ನಾರ್ಮಲ್ ಡಿಲೆವರಿ…!
ಚಲಿಸುತ್ತಿರೋ ಟ್ರೈನ್ ನಲ್ಲಿದ್ದ R.B.I ನ 225 ಬಾಕ್ಸ್ ನಿಂದ 5.78 ಕೋಟಿ ರೂಪಾಯಿಗಳ ದರೋಡೆ ಮಾಡಿದ ಖದೀಮರು
ಒಲಿಂಪಿಕ್ಸ್ ನಲ್ಲಿ ಕಳ್ಳರ ಕಾಟ, ಭಯಭೀತರಾಗಿರುವ ಪ್ರವಾಸಿಗರು..! #Video