ಚಾಮರಾಜಪೇಟೆಯ ಮೈದಾನದಲ್ಲಿ ಗಣೇಶ ಹಬ್ಬ ಏನು ಅಣ್ಣಮ್ಮ ಉತ್ಸವವನ್ನು ಮಾಡುತ್ತೇವೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ. ಯಲಹಂಕದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಬರಿ ಅಲ್ಪ ಸಂಖ್ಯಾತರನ್ನು ಓಲೈಕೆ ಮಾಡೋಕೆ ಪ್ರಯತ್ನ ಮಾಡ್ತಾ ಇದ್ದಾರೆ. ಚಾಮರಾಜಪೇಟೆಯ ಆಟದ ಮೈದಾನ ಸರ್ಕಾರದ್ದು, ಅಲ್ಲಿ ಗಣೇಶ ಉತ್ಸವ ಏನು ಅಣ್ಣಮ್ಮ, ಚಾಮುಂಡೇಶ್ವರಿ ಉತ್ಸವವನ್ನೂ ಮಾಡುತ್ತೇವೆ ಎಂದರು. ಇನ್ನೂ ಸಿದ್ದರಾಮಯ್ಯ ಮೇಲೆ ಸುಮಾರು 40 ಕ್ಕೂ ಹೆಚ್ಚು ಪ್ರಕರಣಗಳು ಇವೆ. ಅವುಗಳನ್ನು ಮುಚ್ಚಿಕೊಳ್ಳಲು ಎ.ಸಿ.ಬಿ ತಂದಿದ್ದರು. ಇಂದು ಕಾನೂನು ಹೋರಾಟದಲ್ಲಿ ಮತ್ತೆ ಲೋಕಾಯುಕ್ತಕ್ಕೆ ಬಲ ನೀಡಿ ಆದೇಶ ಬಂದಿದ್ದು ಸ್ವಾಗತಾರ್ಹ ಎಂದರು. ಇನ್ನೂ ಲೋಕಾಯುಕ್ತ ಸಂಸ್ಥೆ ಇಡೀ ದೇಶದ ತುಂಬಾ ಒಳ್ಳೇಯ ಸಂಸ್ಥೆ. ಎಂತಹವರನ್ನೂ ರಕ್ಷಣೆ ಮಾಡದೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿ ದೇಶದ ಗಮನ ಸೆಳೆದ ಸಂಸ್ಥೆಗೆ ಬಲ ನೀಡಿರುವುದು ಭ್ರಷ್ಠರಿಗೆ ನಡುಕ ತರಿಸಿದೆ. ಅದಕ್ಕಾಗಿ ಕಾಂಗ್ರೆಸ್ ನಾಯಕರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಗಣೇಶ ಹಬ್ಬ ಏನು ಅಣ್ಣಮ್ಮ ಉತ್ಸವವನ್ನು ಮಾಡುತ್ತೇವೆ
Date: