ಎಸ್ ಎಸ್ ಎಲ್ ಸಿ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಶೇ. 71.93 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಬ್ಬರು 625ಕ್ಕೆ 625 ಅಂಕಪಡೆದಿದ್ದಾರೆ. 8 ಮಂದಿ 624 ಹಾಗೂ 12 ಮಂದಿ 623 ಅಂಕ ಪಡೆದಿದ್ದಾರೆ. ಈ ಬಗ್ಗೆ ಈಗಾಗಲೇ ನಿಮಗೆ ತಿಳಿದಿದೆ.
ಕಡಿಮೆ ಅಂಕ ಹಾಗೂ ನಿರೀಕ್ಷೆಗೆ ತಕ್ಕಂತೆ ಕಡಿಮೆ ಅಂಕ ಬರದೇ ಇರುವ ವಿದ್ಯಾರ್ಥಿಗಳು ಮರು ಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸುವವರಿದ್ದಾರೆ. ಅನುತ್ತೀರ್ಣರಾದವರು ನಿರಾಶಾರಾಗೋದು ಬೇಕಿಲ್ಲ….ಮತ್ತೊಂದು ಅವಕಾಶವಿದೆ. ಪೂರಕ ಪರೀಕ್ಷೆ ಬರೆದು ಇದೇ ಶೈಕ್ಷಣಿಕ ಸಾಲಿನಲ್ಲಿ ಕಾಲೇಜು ಮೆಟ್ಟಿಲು ಏರಬಹುದು.
ಪೂರಕ ಪರೀಕ್ಷೆ ಜೂನ್ 21 ಜೂನ್ 28 ರವರೆಗೆ ನಡೆಯಲಿದೆ.
ಮೇ 11ರಿಂದ ಮರುಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಮೇ 21 ಕ್ಕೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹಾಗೆಯೇ ಉತ್ತರ ಪತ್ರಿಕೆ ಜೆರಾಕ್ಸ್ ಪ್ರತಿಯನ್ನು ಸಹ ಪಡೆಯಬಹುದು. ಒಂದು ಪತ್ರಿಕೆಗೆ 305 ರೂ ಪಾವತಿಸಬೇಕು.