ದೇಶದ ಪರಮೋಚ್ಛ ನಾಯಕನ ಭಾಷಣ ಜನತೆಯನ್ನ ಸ್ಫೂರ್ತಿಗೊಳಿಸೋದು, ಒಳ್ಳೆಯ ಕೆಲಸಕ್ಕೆ ಪ್ರೇರೇಪಿಸುವಂತೆ ಮಾಡೋದು ಸಹಜ. ಆದರೆ ದೇಶಾದ್ಯಕ್ಷನ ಭಾಷಣ ಇಡೀ ದೇಶದ ಜನತೆಯನ್ನೇ ಬೆತ್ತಲೆಗೊಳಿಸೋದು ಎಲ್ಲಾದ್ರೂ ಉಂಟಾ..? ಹೌದು ಸ್ವಾಮಿ.. ನೀವು ನಂಬ್ತೀರೋ ಬಿಡ್ತೀರೋ ದೇಶಾದ್ಯಕ್ಷನ ಭಾಷಣ ಇಡೀ ದೇಶದ ಜನತೆಯ ಬಟ್ಟೆಯನ್ನೇ ಬಿಚ್ಚಿಸಿರೋ ಘಟನೆ ಯೂರೋಪ್‌ನ ಬೆಲಾರಸ್ ಎಂಬ ಪುಟ್ಟ ದೇಶದಲ್ಲಿ ನಡೆದಿದೆ.
ಅದು ಪೂರ್ವ ಯೂರೋಪ್‌ನ ಬೆಲಾರಸ್ ಎಂಬ ಪುಟ್ಟ ದೇಶ. ಈ ದೇಶದ ಅಧ್ಯಕ್ಷ ಅಲೆಕ್ಸಾಂಡ್ರೋ ಲುಕಷೆಂಕೋ ಮಿನ್‌ಸಕ್‌ನಲ್ಲಿ ಸಮ್ಮೇಳನವೊಂದರಲ್ಲಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದಲ್ಲಿ ಅಧ್ಯಕ್ಷ ಅಲೆಕ್ಸಾಂಡರ್ ಸೋಮಾರಿತನ ಬಿಟ್ಟು ಬೆವರು ಹರಿಯೋ ತನಕ ಕೆಲಸ ಮಾಡಿ ಎಂದು ಜನತೆಗೆ ಕರೆ ನೀಡಿದ್ದಾರೆ. ಕೆಲಸ ಎಂಬ ಪದಕ್ಕೆ ರಜ್‌ವಿವತ್ಸ್ಯಾ(RAZVIVATSYA) ಎಂಬ ಪದ ಬಳಕೆ ಮಾಡಿರೋ ಅಧ್ಯಕ್ಷರ ಮಾತನ್ನ ಅಲ್ಲಿನ ಜನತೆ ಮಾತ್ರ ಸಂಪೂರ್ಣ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.
ಬಲಾರಸ್‌ನ ಭಾಷೆಯಲ್ಲಿ ರಜ್‌ವಿವತ್ಸ್ಯಾ ಎಂದರೆ ಶ್ರಮದಿಂದ ದುಡಿ ಎಂಬ ಅರ್ಥದಂತೆ, ಬೆತ್ತಲೆ ಎಂಬ ಮತ್ತೊಂದು ಅರ್ಥವೂ ಇದೆ. ಹೀಗಾಗಿ ನಮ್ಮ ದೇಶಾಧ್ಯಕ್ಷರೇ ಬೆತ್ತಲಾಗಿ ಕೆಲಸ ಮಾಡಲು ಹೇಳಿದ್ದಾರೆಂದು, ಇಡೀ ದೇಶದ ಜನ್ರು ಅವರ ಆಜ್ಞೆ ಪಾಲಿಸಲು ಹೋಗಿದ್ದಾರೆ.
- ಶ್ರೀ
POPULAR STORIES :
ಸತ್ತ ನಂತರವೂ ವ್ಯಕ್ತಿಗಳ ಜತೆ ಸಂವಹನ ನಡೆಸಿ!!
ವಿಮಾನದ ಮೆಟ್ಟಿಲಿನಿಂದ ಬಿದ್ದವಳು ಏನಾದಳು? ಹೆಂಗಿದ್ದ ಮಹಿಳೆ ಹೇಗಾದ್ಲು ಗೊತ್ತಾ?
ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ರಿಂಗಿಂಗ್ ಬೆಲ್ಸ್?
ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಯಲ್ಲಿ ಶೋಭ ಹಸ್ತಕ್ಷೇಪ ಇಲ್ವಂತೆ..!?
ಸುದೀಪ್, ಪ್ರಿಯ ಒಂದಾದ್ರ.? ಮತ್ತೆ ಒಂದಾಯ್ತು ಕಿಚ್ಚನ ಸಂಸಾರ..!?