ಮೀನಿನ ಹೆಜ್ಜೆ GTD ನಡೆ ಎರಡನ್ನೂ ಕಂಡು ಹಿಡಿಯಲು ಕಷ್ಟವಂತೆ…!

admin
1 Min Read

GTD ನಡೆ, ಮೀನಿನ ಹೆಜ್ಜೆ ಎರಡನ್ನೂ ಕಂಡು ಹಿಡಿಯಲು ಆಗುವುದಿಲ್ಲ. ಇದನ್ನ ನಾನು ಮೊದಲೇ ಹೇಳಿದ್ದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ರು.

ಈ ಬಗ್ಗೆ ಮೈಸೂರಿನಲ್ಲಿ ಮಾತ್ನಾಡಿದ ಅವರು, ಜೆಡಿಎಸ್ನಲ್ಲೇ ಜಿ.ಟಿ.ದೇವೇಗೌಡ ಉಳಿದಿರುವುದರಲ್ಲಿ ವಿಶೇಷತೆ ಏನೂ ಇಲ್ಲ. ಬಿಜೆಪಿಗೆ ಬರುವಂತೆ ಜಿ.ಟಿ.ದೇವೇಗೌಡ ಅವರನ್ನು ಕರೆದಿರಲಿಲ್ಲ. ಕಾಂಗ್ರೆಸ್ ಬಗ್ಗೆ ನನಗೆ ಗೊತ್ತಿಲ್ಲ.

 

 

ಬಿಜೆಪಿಗೆ ಬರುವಂತೆ ಕೋರಿ ನಾನಂತೂ ಅವರನ್ನ ಸಂಪರ್ಕ ಮಾಡಿಲ್ಲ. ಉಸ್ತುವಾರಿ ಸಚಿವನಾಗಿ ಎಲ್ಲಾ ಶಾಸಕರ ಜೊತೆ ಆತ್ಮೀಯವಾಗಿ ಇದ್ದೇನೆ ಅಷ್ಟೇ. ಜೆಡಿಎಸ್ ಶಾಸಕರಾಗಿ GTD ಜೆಡಿಎಸ್ ನಲ್ಲೇ ಉಳಿದಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ಸೇರಿ 224 ಕ್ಷೇತ್ರದಲ್ಲೂ ನಮಗೆ ಸಮರ್ಥ ಅಭ್ಯರ್ಥಿಗಳಿದ್ದು, ಮುಂದಿನ ಬಾರಿಯೂ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ರು.

Share This Article
Leave a Comment