ಪೋಷಕರಿಂದ ಹಣ ಸಂಗ್ರಹ : ಶಿಕ್ಷಣ ಸಚಿವರು ಹೇಳಿದ್ದೇನು ?

0
71

ಶಾಲಾ ಶ್ರೇಯೋಭಿವೃದ್ಧಿಗೆ ಪೋಷಕರಿಂದ ಹಣ ಸಂಗ್ರಹ ಸಂಬಂಧ ಹೊರಡಿಸಿರುವ ಸುತ್ತೋಲೆ ಶಿಕ್ಷಣ ಇಲಾಖೆ ಆಯುಕ್ತರು. ಇದಕ್ಕೆ ಶಿಕ್ಷಣ ಮಂತ್ರಿಗಾಗಲಿ, ಮುಖ್ಯಮಂತ್ರಿಗಳಿಗಾಗಲಿ ಸಂಬಂಧ ಇಲ್ಲ ಎಂದು ಮೈಸೂರಿನಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತ್ನಾಡಿದ ಅವರು, ಸುತ್ತೋಲೆಯನ್ನ ಕೆಲವರು ಸರಿಯಾಗಿ ಓದಿಕೊಳ್ಳದೇ ಪ್ರತಿಕ್ರಿಯೆ ನೀಡಿದರು. ಈ ಸಂಬಂಧ ತಕ್ಷಣ ನಾನು ಶಿಕ್ಷಣ ಇಲಾಖೆ ಆಯುಕ್ತರನ್ನ ಕೇಳಿದೆ‌. SDMCಗಳ ಸಲಹೆ ಮೇರೆಗೆ ಈ ಸುತ್ತೋಲೆ ಹೊರಡಿಸಲಾಗಿದೆ. ಗೊಂದಲ ನಿವಾರಿಸಲು, ಸುತ್ತೋಲೆ ಹೊರಡಿಸಲು ಆಯುಕ್ತರಿಗೆ ಅವಕಾಶವಿದೆ. ಸುತ್ತೋಲೆ ಹೊರಡಿಸಲು ಸಂವಿಧಾನದಲ್ಲೇ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಸುತ್ತೋಲೆಯನ್ನ ಸರ್ಕಾರದ ಗಮನಕ್ಕೆ ತಂದು ಹೊರಡಿಸಬೇಕಂತಿಲ್ಲ. ಶಾಲೆ ಅಭಿವೃದ್ಧಿಗೆ ಸ್ಥಳೀಯವಾಗಿ ಹಣ ಸಂಗ್ರಹಕ್ಕೆ RTEನಲ್ಲಿ ಅವಕಾಶ ಇದೆ. RTE ಒಳ್ಳೆಯ ಕಾಯ್ದೆ, ಅದನ್ನ ಜಾರಿಗೆ ತಂದಿದ್ದು ಸಿದ್ದರಾಮಯ್ಯ ಸರ್ಕಾರ. ಪೋಷಕರು ಕಡ್ಡಾಯವಾಗಿ ಹಣ ಕೊಡಬೇಕೆಂದು ಎಲ್ಲಿಯೂ ಹೇಳಿಲ್ಲ. ಅವರಾಗಿಯೇ ಕೊಟ್ಟರೆ, ತಿಂಗಳಿಗೆ 100 ರೂ.ವರೆಗೆ ಕೊಟ್ಟು ರಶೀದಿ ಪಡೆಯಬೇಕು. ಕಾನೂನು ಪಂಡಿತ ಎನಿಸಿಕೊಂಡ ಸಿದ್ದು ಇದರಲ್ಲಿ ರಾಜಕೀಯ ಮಾಡೋದು ಸರಿಯಲ್ಲ. ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಶುರು ಮಾಡಿದ್ದಾರೆ. ಅವರಿಗೆ ಸಂಭಾವನೆ ಕೊಡುವ ನಿಟ್ಟಿನಲ್ಲಿ ಆಯಾ SDMC ತೀರ್ಮಾನ ಮಾಡುತ್ತೆ. ಸುತ್ತೋಲೆ ದುರುಪಯೋಗವಾದ್ರೆ ಹಿಂಪಡೆಯುತ್ತೇವೆ ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ರು..

LEAVE A REPLY

Please enter your comment!
Please enter your name here