ಶಶಿಧರ್ ಭಟ್ , ಕನ್ನಡ ದೃಶ್ಯಮಾಧ್ಯಮ ಜಗತ್ತಲ್ಲಿ ಸ್ಟಾರ್ ಪಟ್ಟ ಅಲಂಕರಿಸಿದ ಕೆಲವೇ ಕೆಲವು ಪತ್ರಕರ್ತರಲ್ಲಿ ಒಬ್ರು.
ವಿಭಿನ್ನ ಮಾತಿನ ಶೈಲಿ , ತಿಳಿ ಹಾಸ್ಯದ ಮೂಲಕವೇ ಬೀಸುವ ಮಾತಿನ ಚಾಟಿ ಭಟ್ಟರ ಸ್ಟೈಲ್.
ಪ್ರಿಂಟ್ ಮೀಡಿಯಾ ಯುಗದಲ್ಲಿ ಟೆಲಿವಿಷನ್ ಇನ್ನೂ ಅಂಬೆಗಾಲಿಡುತ್ತಿದ್ದ ಕಾಲದಲ್ಲೇ ‘ಕಾವೇರಿ’ ಎಂಬ ಚಾನಲ್ ಆರಂಭಿಸಿದ್ದರು ಭಟ್ಟರು.
ಸುವರ್ಣ ವಾಹಿನಿ ಸೇರಿದಂತೆ ಕೆಲವು ಚಾನಲ್ ಗಳನ್ನು ಸಮರ್ಥವಾಗಿ ನಿರ್ವಹಿಸಿದ ಭಟ್ಟರ ಕನಸಿನ ಕೂಸು “ಸುದ್ದಿ” ಟಿವಿಯನ್ನು ಹುಟ್ಟು ಹಾಕಿದ್ರು.
ಈಗ ಸುದ್ದಿ ಟಿವಿ ಮೂರುವರ್ಷದ ಕೂಸು. ಈಗಲೇ ಈ ಕೂಸು ಸದ್ದು ನಿಲ್ಲಿಸಿದೆ.
ಹಣಕಾಸಿನ ಮುಗ್ಗಟ್ಟಿಂದ ಸುದ್ದಿ ಬಂದ್ ಆಗಿದೆ ಅಂತ ಸ್ವತಃ ಭಟ್ಟರೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ದೆ ಮತ್ತೆ ಹೊಸ ಹೂಡಿಕೆದಾರರು ಬಂದಿದ್ದಾರೆ ಮತ್ತೆ ಸಂಸ್ಥೆ ಕಟ್ಟುವೆ ಎಂದಿದ್ದಾರೆ. ಸುದ್ದಿ ಹೊಸ ಲೋಗೋ ಬಂದಿದೆ..ಹೊಸತನದೊಂದಿಗೆ ಮರಳಿ ಬರಲಿದೆ ಅನ್ನೋ ಮಾತಿದೆ.
ಅದಿರಲಿ ಸುದ್ದಿ ಸದ್ದು ನಿಲ್ಲಿಸಿದ ಹಿಂದೆ ಹಣಕಾಸಿನ ಮುಗ್ಗಟ್ಟು ಮಾತ್ರ ಕಾರಣವಲ್ಲ. ಹತ್ತಾರು ಕಾರಣಗಳಿವೆ ಎನ್ನುವ ಮಾತು ಸಹ ಕೇಳಿಬಂದಿದೆ.
ಭಟ್ಟರ ಉದಾರತೆ ಕೂಡ ಅದರಲ್ಲಿ ಒಂದು. ಕಷ್ಟ ಅಂತ ಬಂದವರಿಗೆ ಸಂಬಳ ಜಾಸ್ತಿ ಮಾಡಿಸಿ ಮಾನವೀಯತೆ ಮೆರೆಯುತ್ತಿದ್ದಾರಂತೆ ಭಟ್ಟರು. ಇಷ್ಟೇ ಆಗಿದ್ದರೆ ಪರವಾಗಿ ಇರ್ತಿರ್ಲಿಲ್ಲ. ಭಟ್ಟರು ಅವರ ಬಳಿ ಬಂದು ಯಾರು ಏನೇ ಹೇಳಿದ್ರು ಅದನ್ನು ನಂಬುತ್ತಿದ್ದರಂತೆ. ಇದನ್ನು ಪ್ಲಸ್ ಆಗಿ ತಗೊಂಡ ಕೆಲವರು ತಮಗೆ ಆಗದೇ ಇರೋರ ಬಗ್ಗೆ ಬೆಳವಣಿಗೆ ಸಹಿಸದೆ ಇಲ್ಲ ಸಲ್ಲದ್ದನ್ನು ಹೇಳುತ್ತಿದ್ದರಂತೆ. ಇದರಿಂದ ಕಚೇರಿಯಲ್ಲಿ ಆತಂರಿಕ ಮುನುಸಿ ಹೆಚ್ಚಾಗಿತ್ತು. ಬರು ಬರುತ್ತಾ ಭಟ್ಟರು “ಯಾರದ್ದೋ ಮಾತು ಕೇಳಿ ” ನಿಜವಾಗಿಯೂ ನಿಷ್ಠಾವಂತರಾಗಿ ಕೆಲಸ ಮಾಡುತ್ತಿದ್ದವರನ್ನೇ ಸೈಡ್ ಲೈನ್ ಮಾಡಿದ್ರು ಎಂಬ ಮಾತು ಬಲವಾಗಿ ಕೇಳಿಬಂದಿದೆ.
ಹೀಗೆ ನಾನಾ ಕಾರಣಗಳು ಸುದ್ದಿ ಬಾಗಿಲು ಹಾಕಲು ಕಾರಣವಾಗಿವೆ. ಆದರೆ,ಭಟ್ಟರು ಹೊಸ ಹೂಡಿಕೆದಾರರನ್ನು ಕರೆತಂದು ಸುದ್ದಿ ಪುನರಾರಂಭಗೊಳಿಸಲಿದ್ದಾರೆ. ಭಟ್ಟರು ಮನಸ್ಸು ಮಾಡಿದರೆ ಸುದ್ದಿ ಸುದ್ದಿಲೋಕದ ಸಾಮ್ರಾಟ್ ಆಗಬಹುದು.