ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ರಂಗದಲ್ಲೀಗ ಅತ್ಯುತ್ತಮ ಸ್ಥಾನದಲ್ಲಿದ್ದಾರೆ.
ಹೆಮ್ಮೆಯ ಕನ್ನಡಿಗ ಸುದೀಪ್ ಬಹುಭಾಷಾ ನಟನಾಗಿ ಮಿಂಚುತ್ತಿದ್ದಾರೆ. ಕಿಚ್ಚನಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಕನ್ನಡದಲ್ಲಿ ದಿ ವಿಲನ್, ಪೈಲ್ವಾನ್ ಕೋಟಿಗೊಬ್ಬ 3 ಒಂದಾಂದ ಮೇಲೊಂದರಂತೆ ತೆರೆಗೆ ಬರಲಿವೆ.
ಕನ್ನಡದ ಮೂರು ಚಿತ್ರಗಳ ಜೊತೆಗೆ ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿ ಅವರೊಂದಿಗೆ ‘ಸೈರಾ ನರಸಿಂಹ’ ರೆಡ್ಡಿ ಚಿತ್ರದ ಚಿತ್ರೀಕರಣದಲ್ಲಿ ಕಿಚ್ಚ ತೊಡಗಿದ್ದಾರೆ.
ತಮಿಳಿನಲ್ಲಿ ಧನುಶ್ ಅಭಿನಯದ ಚಿತ್ರವೊಂದರಲ್ಲಿ ಹಾಗೂ ಹಾಲಿವುಡ್ ನ ರೈಸನ್ ಚಿತ್ರದಲ್ಲೂ ನಮ್ಮ ಅಭಿನಯ ಚಕ್ರವರ್ತಿ ಕಾಣಿಸಿಕೊಳ್ಳುತ್ತಿದ್ದಾರೆ.
ಇವುಗಳ ಜೊತೆಗೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಸುದೀಪ್ ನಟಿಸಲಿದ್ದಾರೆ.ಸೊಹಾಲಿ ಖಾನ್ ಪ್ರೊಡಕ್ಷನ್ ನಲ್ಲಿ ಮೂಡಿ ಬರ್ತಿರೋ ದಬಾಂಗ್-3 ನಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಭುದೇವ್ ಆ್ಯಕ್ಷನ್ ಕಟ್ ಹೇಳಲಿರೋ ಈ ಚಿತ್ರದಲ್ಲಿ ನಟಿಸಲು ಸುದೀಪ್ ಓಕೆ ಎಂದಿದ್ದಾರಂತೆ…! ಡಿಸೆಂಬರ್ ನಲ್ಲಿ ಚಿತ್ರೀಕರಣಲ್ಲಿ ಸುದೀಪ್ ತೊಡಗಿಸಿಕೊಳ್ಳಲಿದ್ದಾರಂತೆ.
ಸುದೀಪ್ 2008ರಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಪೂಂಕ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದರು. ನಂತರ ರಾಣ್, ರಕ್ತ ಚರಿತ ಭಾಗ1 ಮತ್ತು 2 ರಲ್ಲಿ ಅಭಿನಯಿಸಿದ್ದರು. ಸುದೀಪ್ ಅಭಿನಯದ ತೆಲುಗು ಸಿನಿಮಾ ಈಗ ಸಹ ಹಿಂದಿಗೆ ಡಬ್ ಆಗಿದೆ.