ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಲಿವುಡ್ ಸಿನಿಮಾದಲ್ಲಿ ನಟಿಸೋ ಸುದ್ದಿ ಗೊತ್ತೇ ಇದೆ. ಹಾಲಿವುಡ್‍ನ ರೈಸನ್ ಸಿನಿಮಾದಲ್ಲಿ ಹೆಮ್ಮೆಯ ಕನ್ನಡಿಗ ಸುದೀಪ್ ನಟಿಸ್ತಿದ್ದಾರೆ.
ಇದೀಗ ಚಿತ್ರ ಫಸ್ಟ್ ಲುಕ್ ಹಾಗೂ ಸೌಂಡ್ ಟ್ರ್ಯಾಕ್ ಕೂಡ ರಿಲೀಸ್ ಆಗಿದೆ. ಎಡ್ಡಿ ಆರ್ಯ ನಿರ್ದೇಶನದ ಚಿತ್ರ ರೈಸನ್. ಸುದೀಪ್ ಪೈಲ್ವಾನ್ ಚಿತ್ರದ ನಂತರ ಈ ಸಿನಿಮಾದ ಶೂಟಿಂಗ್‍ನಲ್ಲಿ ಭಾಗವಹಿಸ್ತಾರೆ.
ಒಂದೆಡೆ ಸಿನಿಮಾ, ಇನ್ನೊಂದೆಡೆ ರಿಯಾಲಿಟಿ ಶೋ, ಕ್ರಿಕೆಟ್ ಹೀಗೆ ತುಂಬಾನೇ ಬ್ಯುಸಿ ಆಗಿರೋ ಸುದೀಪ್ ಅವರಿಗೆ ಅಮೆರಿಕಾಕ್ಕೆ ಹೋಗಲು ಆಗಿರ್ಲಿಲ್ಲ. ಆದ್ದರಿಂದ ಹಾಲಿವುಡ್ ಚಿತ್ರತಂಡವೇ ನಮ್ಮ ಬೆಂಗಳೂರಿಗೆ ಬಂದು ಸಿನಿಮಾ ಕಥೆ ಹೇಳಿ, ಫೋಟೋಶೂಟ್ ನಡೆಸಿ ಹೋಗಿತ್ತು.