ಬಿಗ್ ಬಾಸ್ ಗೆ ಒಲ್ಲೆ ಎಂದ ಸ್ಟ್ರೈಟ್ ಹಿಟ್ ಸುಗುಣ…!

Date:

ಸಿನಿಮಾ ವರದಿಗಾರಿಕೆ, ಸಿನಿ ಸ್ಟಾರ್ ಗಳ ಇಂಟರ್ ವ್ಯೂ, ಸಿನಿಯಾನದ ನಿರೂಪಣೆ ಎಂದ್ರೆ ತಟ್ಟನೆ ನೆನಪಾಗೋ ಹೆಸರಿದು ‘ಸುಗುಣ’.

ಕಳೆದೊಂದು ದಶಕದಿಂದ ದೃಶ್ಯಮಾಧ್ಯಮದಲ್ಲಿ ‘ಸಿನಿಯಾತ್ರೆ’ ಕೈಗೊಂಡಿರುವ ಈ ಹಳ್ಳಿ ಹುಡ್ಗಿ ಸ್ಟ್ರೈಟ್ ಹಿಟ್ ಸುಗುಣ ಅಂತಲೇ ಫೇಮಸ್ ಆಗಿದ್ದಾರೆ.

ಈ ವರ್ಷ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬಿಗ್ ಬಾಸ್ ಮನೆಗೆ ಪ್ರವೇಶಿಸೋ ಅವಕಾಶ ಕೂಡ ಇತ್ತು…! ಆದ್ರೆ, ಬಿಗ್ ಬಾಸ್ ಗೆ ಒಲ್ಲೆ ಅಂದಿದ್ದಾರೆ…!


ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಸುಗುಣ ಹುಟ್ಟೂರು. ನಾರಾಯಣ ಸ್ವಾಮಿ ಮತ್ತು ಯಶೋಧಮ್ಮ ದಂಪತಿಯ 4 ಮಂದಿ ಮಕ್ಕಳಲ್ಲಿ ಕೊನೆಯ ಮುದ್ದುಮಗಳಿವರು.


ಸುಗುಣ ಒಂದು ವರ್ಷದ ಪುಟ್ಟ ಮಗುವಾಗಿದ್ದಾಗ ತಂದೆ ಅಪಘಾತದಲ್ಲಿ ತೀರಿಕೊಂಡ್ರು. ತಾತ ಮುನಿ ತಿಮ್ಮಯ್ಯನವರು ಬೆಳೆಸಿದ್ರು. ತಂದೆ ಇಲ್ಲದ ಕೊರಗನ್ನು ತಾಯಿ ತುಂಬಿದರು. ತಾವು ಅಶಿಕ್ಷಿತರಾಗಿದ್ದರೂ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದ ಅವರು ಸುಗುಣ ಅವರ ಯಶಸ್ಸಿಗೆ ದಾರಿದೀಪ.


ಹೆಣ್ಣುಮಕ್ಕಳನ್ನು ಜಾಸ್ತಿ ಓದಿಸಬಾರದು, ಅವರ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಹುಡುಗನನ್ನು ಹುಡುಕಿ ಮದ್ವೆ ಮಾಡೋದು ಕಷ್ಟ ಆಗುತ್ತೆ ಎಂಬುದು ಅಜ್ಜನ ನಿಲುವು. ಆದರೆ, ಅಮ್ಮ ಮತ್ತು ಅಣ್ಣ ಅವರ ಮನವೊಲಿಸಿ ಸುಗುಣ ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಿದರು.


ಹುಟ್ಟೂರು ಹಂಡಿಗನಾಳದಲ್ಲಿ ಪ್ರಾಥಮಿಕ ಶಿಕ್ಷಣ, ತಾಯಿ ತವರು ಗಿಡ್ನಹಳ್ಳಿಯಲ್ಲಿ ಪ್ರೌಢಶಿಕ್ಷಣ, ಶಿಡ್ಲಘಟ್ಟದಲ್ಲಿ ಪಿಯುಸಿ, ನಂತರ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಬಿಎ ಪದವಿ ಪಡೆದರು ಸುಗುಣ.


ಚಿಕ್ಕಂದಿನಿಂದಲೂ ಕವನ ಬರೆಯುತ್ತಿದ್ದ ಸುಗುಣ ಪಿಯುಸಿ, ಪದವಿ ದಿನಗಳಲ್ಲಿ ಗಾಯನ ಸ್ಪರ್ಧೆ, ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು.

ಅಂತರಕಾಲೇಜು ಕಾಂಪಿಟೇಷನ್ ಅಂತಾದ್ರೆ ತಮ್ಮ ಕಾಲೇಜನ್ನು ಪ್ರತಿನಿಧಿಸುತ್ತಿದ್ದುದು ಇವರೇ. ಸೋಲೋ-ಗೆಲುವೋ ಭಾಗವಹಿಸುವಿಕೆ ಮುಖ್ಯ ಎಂದು ಭಾವಿಸಿದ್ದ ಸುಗುಣ ಹುಷಾರಿಲ್ಲದೇ ಇದ್ರೂ ಕಾಂಪಿಟೇಷನ್ ಮಿಸ್ ಮಾಡಿಕೊಳ್ತಿರ್ಲಿಲ್ಲ. ಇವರೇ ಭಾಗವಹಿಸಬೇಕು ಅನ್ನೋದು ಉಪನ್ಯಾಸಕರ ಇಚ್ಚೆಯ ಒತ್ತಾಯ ಕೂಡ ಆಗಿತ್ತು.


ಮಹಾರಾಣಿ ಕಾಲೇಜಿನಲ್ಲಿ ಓದುವಾಗ ನ್ಯಾಷನ್ ಸ್ಕೂಲ್ ಆಫ್ವ ಡ್ರಾಮದಿಂದ ‘ಮ್ಯಾಕ್ ಬೆತ್’ ನಾಟಕ ಮಾಡಿಸಲಾಗಿತ್ತು. ಇದರಲ್ಲಿ ಮ್ಯಾಕ್ ಬೆತ್ ಆಗಿ ಬಣ್ಣ ಹಚ್ಚಿದ್ದು ಸುಗುಣ…! ಈ ನಾಟಕ ರವೀಂದ್ರ ಕಲಾಕ್ಷೇತ್ರ, ಎನ್ ಡಿ ಎ ರಂಗಮಂದಿರದಲ್ಲಿ ಪ್ರದರ್ಶನಗೊಂಡಿತ್ತು.

ಬೆಸ್ಟ್ ಔಟ್ ಗೋವಿಂಗ್ ಸ್ಟೂಡೆಂಟ್, ಬೆಸ್ಟ್ ಟ್ಯಾಲೆಟೆಂಡ್ ಸ್ಟೂಡೆಂಟ್ ಎಂಬ ಪ್ರಶಸ್ತಿಗಳೊಂದಿಗೆ ಮಹಾರಾಣಿ ಕಾಲೇಜಿಂದ ಬೀಳ್ಕೊಳಲ್ಪಟ್ಟ ಸುಗುಣ, ಇಂಗ್ಲಿಷ್ ಪ್ರಾದ್ಯಾಪಕ ನಾಗಭೂಷಣ ಅವರ ಸಲಹೆ ಮೇರೆಗೆ ಬೆಂಗಳೂರು ವಿವಿಯಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್‍ಇ ಮಾಡಲು ಡಿಸೈಡ್ ಮಾಡಿದರು.


ಎಂಎಸ್‍ಇ ಎಂಟ್ರೆನ್ಸ್ ಎಕ್ಸಾಮ್ ಯಾವತ್ತು ಅಂತ ಇವರಿಗೆ ಗೊತ್ತಿರಲಿಲ್ಲ. ಅಪ್ಲಿಕೇಶನ್ ಹಾಕಿದ್ದ ಇವರು ಎಕ್ಸಾಮ್ ದಿನವೇ ಪ್ರಾದ್ಯಾಪಕ ಚಂದ್ರಮೌಳಿ ಅವರಿಗೆ ಫೋನ್ ಮಾಡಿದರು. ಇವತ್ತೇ ಎಕ್ಸಾಮ್ ಅಂದ್ರು…!

ಅದಾಗಲೆ 8 ಗಂಟೆಯಾಗಿತ್ತು. ವಿವಿಗೆ ಬರುವಷ್ಟರಲ್ಲಿ ಪರೀಕ್ಷೆ ಸಮಯ ಮಿತಿ ಮುಗಿಯುತ್ತಾ ಬಂದಿತ್ತು. ದೂರದಿಂದ ಬಂದಿದ್ದಾರೆ ಅಂತ ಪರೀಕ್ಷೆ ಬರೆಯುವ ಅವಕಾಶ ಮಾಡಿಕೊಟ್ರು.


ಎಕ್ಸಾಮ್ ಪಾಸ್ ಆಯ್ತು. ಇಂಟರ್ ವ್ಯೂ ಟೈಮಲ್ಲಿ ಕಾಲೇಜುಗಳಲ್ಲಿ ತಮ್ಮ ಪಠ್ಯೇತರ ಚಟುವಟಿಕೆಗಳ ಸಾಧನಾ ಪ್ರಮಾಣ ಪತ್ರವನ್ನು ತೋರಿಸಿದ್ರು.ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇದೆ ಎಂದು ಸಂದರ್ಶನ ಮಾಡಿದ್ದ ಪ್ರೊಫೆಸರ್ ಅಶೋಕ್ ಮತ್ತು ಚಂದ್ರುಮೌಳಿ ಅವರಿಗೆ ಗೊತ್ತಾಯಿತೇನೋ…? ಎಂಎಸ್‍ಇಗೆ ಸೀಟ್ ಕೊಟ್ರು.


ಪಿಜಿ ಮಾಡುವಾಗ ಅನುಭವಿ ಪತ್ರಕರ್ತ ಈಶ್ವರ್ ದೈತೋಟ ಅವರು ಆಗಾಗ ಅತಿಥಿ ಉಪನ್ಯಾಸಕರಾಗಿ ಉಪನ್ಯಾಸ ನೀಡ್ತಿದ್ರು. ಅವರೊಮ್ಮೆ ಆಲ್ ಇಂಡಿಯಾ ರೇಡಿಯೋಗೆ ಕಾರ್ಯಕ್ರಮ ಮಾಡಿಕೊಡಬಹುದು ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದರು.

ಅದನ್ನು ಸೀರಿಯಸ್ ಆಗಿ ತಗೊಂಡ ಸುಗುಣ ತಮ್ಮ ಬಾಲ್ಯದ ಆಟ, ಆಟವಾಡುವಾಗ ಆಡ್ತಿದ್ದ ಹಾಡುಗಳನ್ನೊಳಗೊಂಡ ಚಂದದ ಕಾರ್ಯಕ್ರಮಗಳನ್ನು ಮಾಡಿದ್ದರು…! ಅದು ಹಿಂದೆ ಸಾಕಷ್ಟು ಬಾರಿ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗಿದೆ. ಆಗಾಗ ಇವತ್ತಿಗೂ ಪ್ರಸಾರ ಆಗುತ್ತಲೇ ಇರುತ್ತೆ…!


ಪರಿಸರ ದಿನದಂದು ಸ್ನೇಹಿತೆ ನಿರ್ಮಲಾ ಅವರೊಡನೆ ಸೇರಿ ‘ಕುಣಿಗಲ್ ಕೆರೆ’ ಬಗ್ಗೆ ಸಾಕ್ಷ್ಯಚಿತ್ರವನ್ನು ಮಾಡಿದ್ದರು. ಸ್ನಾತಕೋತ್ತರ ಪದವಿಯ ಭಾಗವಾಗಿ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಇಂಟರ್ನಿಶಿಪ್ ಮಾಡಿದ್ರು. ಆಗ ಎಚ್. ಆರ್ ರಂಗನಾಥ್ ಅವರು ಕನ್ನಡ ಪ್ರಭ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು.


ನಂತರ ಟಿವಿ9 ಕನ್ನಡ ಸುದ್ದಿವಾಹಿನಿ ವಿವಿಯಲ್ಲಿ ಕ್ಯಾಂಪಸ್ ಇಂಟರ್ ವ್ಯೂ ಮಾಡಿದಾಗ ಸುಗುಣ ತನ್ನ ಆಸಕ್ತಿ ಕ್ಷೇತ್ರ ಸಿನಿಮಾ ಅಂದ್ರು.

ಸಿನಿಮಾ ಬಗ್ಗೆ ಬರೆಯಲು ಹೇಳಿದಾಗ ಐಶ್ವರ್ಯ ರೈ ಬಗ್ಗೆ ಬರೆದ್ರು. ಕನ್ನಡ ಪ್ರಭದಲ್ಲಿ ಇಂಟರ್ನಿಶಿಪ್ ಮಾಡುವಾಗ ಅಲ್ಲಿ ಸಬ್ ಎಡಿಟರ್ ಆಗಿದ್ದ ಶಿವಶಂಕರ್ ಅವರು ಟಿವಿ9 ಆಯ್ಕೆಪ್ರಕ್ರಿಯೆಯಲ್ಲೂ ಇದ್ದರೂ…! ಸುಗುಣ ಅವರ ಟ್ಯಾಲೆಂಟ್ ಬಗ್ಗೆ ಗೊತ್ತಿದ್ದ ಇವರು ಟಿವಿ9ಗೆ ಸುಗುಣ ಅವರನ್ನು ಓಕೆ ಮಾಡಿದ್ರು.


ಕಾಪಿಎಡಿಟರ್ ಆಗಿ ಕೆಲಸ ಮಾಡುವಂತೆ ಸುಗುಣಗೆ ಹೇಳಲಾಯ್ತು. ಆದ್ರೆ, ತಾನು ರಿಪೋರ್ಟಿಂಗ್ ಮಾಡ್ತೀನಿ ಅಂದ್ರು ಸುಗುಣ. ಟಿವಿ9 ಲಾಂಚ್ ಆಗುವ 1 ವರ್ಷ ಮೊದಲೇ ಆ ಕುಟುಂಬ ಸೇರಿದ್ದರಿಂದ ರಿಪೋರ್ಟಿಂಗ್, ಕಾಪಿಎಡಿಟಿಂಗ್, ಆ್ಯಂಕರಿಂಗ್ ಎಲ್ಲವನ್ನೂ ಅಭ್ಯಾಸ ಮಾಡುವ ಸದಾವಕಾಶ ಸುಗುಣ ಅವರಿಗೆ ಸಿಕ್ತು.


ಡಾ. ರಾಜ್‍ಕುಮಾರ್ ಅವರನ್ನು ಇಂಟರ್ ವ್ಯೂ ಮಾಡ್ಬೇಕು ಎಂಬ ಆಸೆ ಸುಗುಣ ಅವರಲಿತ್ತು. ಆದ್ರೆ, ಟಿವಿ9 ಲಾಂಚ್ ಆಗುವ ಮುನ್ನ ಇವರೊಬ್ಬ ವರದಿಗಾರರಾಗಿ ಫೀಲ್ಡ್ ಗೆ ಹೋಗಿ ವರದಿ ಮಾಡಬೇಕಾಗಿ ಬಂದಿದ್ದು ಡಾ. ರಾಜ್ ಅವರ ನಿಧನ ವಾರ್ತೆಯನ್ನು…!


ಟಿವಿ9 ಲಾಂಚ್ ಆದ ಬಳಿಕ ಸಿನಿಮಾ ರಿಪೋರ್ಟರ್ ಆಗಿ ಕಾರ್ಯನಿರ್ವಹಿಸಲಾರಂಭಿಸಿದ್ರು. ನಂತರ ‘ಫಿಲ್ಮಿ ಫಂಡಾ’ ಕಾರ್ಯಕ್ರಮ ನಡೆಸಿಕೊಡುವ ಜವಬ್ದಾರಿಯೂ ಇವರದ್ದಾಯಿತು. ಕೆಲವೊಮ್ಮೆ ಈ ಕಾರ್ಯಕ್ರಮದ ರಿಪೋರ್ಟ್, ಸ್ಕ್ರಿಪ್ಟ್, ವಾಯ್ಸ್ ವೋವರ್, ನಿರೂಪಣೆ ಎಲ್ಲವೂ ಇವರದ್ದೇ ಆಗಿರುತ್ತಿತ್ತು.


ಇವರು ನಡೆಸಿಕೊಡ್ತಿದ್ದ ‘ಸ್ಟ್ರೈಟ್ ಫಾವರ್ಡ್’ ಕಾರ್ಯಕ್ರಮ ಗೊತ್ತೇ ಇದೆ. ನೇರ ನೇರ ಪ್ರಶ್ನೆಗಳನ್ನು ಕೇಳುತ್ತಿದ್ದ ಸುಗುಣ, ರಮ್ಯಾ ಅವರಿಗೆ ನೀವು ಎಸ್ ಎಂ ಕೃಷ್ಣ ಅವರಂತೆ ಇದ್ದೀರಿ…! ನೀವು ಅವರ ಮಗಳಾ..? ಅಂತ ಡೈರೆಕ್ಟ್ ಆಗಿ ಪ್ರಶ್ನೆ ಕೇಳಿದ್ದರು…! ಈ ಕಾರ್ಯಕ್ರಮ ಸುಗಣ ಅವರ ಜನಪ್ರಿಯತೆ ಹೆಚ್ಚಿಸಿತು.


‘ಗಲ್ಲಿ ಗಾಸಿಪ್’ ಹಾಗೂ ಹೀಗೂ ಉಂಟೆಗೂ ವಾಯ್ಸ್ ವೋವರ್ ನೀಡ್ತಿದ್ರು. ಈ ಬಗ್ಗೆ ಉದಯ ವಾಣಿ ದಿನಪತ್ರಿಕೆಯಲ್ಲಿ ಲೇಖನ ಕೂಡ ಪ್ರಕಟವಾಗಿತ್ತು. ‘ಹಳ್ಳಿ ಹುಡ್ಗಿ ಪ್ಯಾಟೆಗೆ ಬಂದಾಗ’ ಎಂಬ ಶೀರ್ಷಿಕೆ ಅಡಿಯಲ್ಲಿ ‘ಸಖಿ’ ನಿಯತಕಾಲಿಕೆಯಲ್ಲೂ ಸುಗುಣ ಅವರ ಕುರಿತ ಬರಹ ಪ್ರಕಟವಾಗಿದೆ.


ಮಾತಾಡ್ ಮಾತಾಡ್ ಮಲ್ಲಿಗೆ ಸಿನಿಮಾ ಪ್ರಮೋಷನ್ ಟೈಮಲ್ಲಿ ವಿಷ್ಣುವರ್ಧನ್ ಅವರನ್ನು ಒಳಗೊಂಡಂತೆ ಇಡೀ ಸಿನಿಮಾ ತಂಡದೊಂದಿಗೆ ಬೆಂಗಳೂರಿಂದ ಬೆಳಗಾವಿಗೆ ಟ್ರೈನ್ ನಲ್ಲಿ ಹೊರಟಾಗ ವಿಷ್ಣು ವರ್ಧನ್ ಅವರ ಜೊತೆ ಕಳೆದ ಕ್ಷಣಗಳು ಸುಗುಣ ಅವರೆಂದೂ ಮರೆಲು ಸಾಧ್ಯವಿಲ್ಲ. ಸುಗುಣ ಅವರು ಸಿಕ್ಕಾಗಲೆಲ್ಲಾ ವಿಷ್ಣು ಸರ್ ಚಾಕಲೇಟ್ ಕೊಡ್ತಿದ್ರು…!


ವೃತ್ತಿ ಬದುಕುಕೊಟ್ಟ ಟಿವಿ9ನಲ್ಲೇ ಬಾಳಸಂಗಾತಿಯೂ ಸಿಕ್ಕರು…! ಈಗ ದಿಗ್ವಿಜಯ ವಾಹಿನಿಯಲ್ಲಿರೋ ಕ್ರಿಯೇಟಿವ್ ಹೆಡ್ ಶ್ರೀನಿವಾಸ್ ಅವರು ಅಂದು ಟಿವಿ9ನಲ್ಲಿದ್ದರು. ಇಬ್ಬರ ನಡುವೆ ಪ್ರೇಮಾಂಕುರವಾಗಿ ಮದುವೆ ಆಯ್ತು. ಇವರ ಪ್ರೀತಿಯ ಸಂಕೇತವಾಗಿ ಮಗಳು ಹಾಸನಿ ಇಂದು ಜೊತೆಗಿದ್ದಾಳೆ.

ಟಿವಿ9ನಲ್ಲೊಂದು ಐದು ವರ್ಷ ಕೆಲಸ ಮಾಡಿ ನಂತರ ಜನಶ್ರಿ ವಾಹಿನಿಗೆ ಸಿನಿಮಾ ಬ್ಯೂರೋ ಮುಖ್ಯಸ್ಥರಾಗಿ ಪ್ರಯಾಣ ಬೆಳೆಸಿದ್ರು. ಅಂದು ಅನಂತ ಚಿನಿವಾರ ಅವರು ಎಡಿಟರ್ ಆಗಿದ್ರು. ಅದು ಜನಶ್ರೀ ಆರಂಭದ ದಿನಗಳು. ಅಲ್ಲಿ ‘ಮಾಯಾ ಬಜಾರ್’ ಎಂಬ ಕಾರ್ಯಕ್ರಮ ನಡೆಸಿಕೊಡ್ತಿದ್ರು. ಈ ಕಾರ್ಯಕ್ರಮವನ್ನು ರೆಬಲ್ ಸ್ಟಾರ್ ಅಂಬರೀಷ್ ಅವರು ಹೋಸ್ಟ್ ಮಾಡುವ ಮೂಲಕ ಚಾಲನೆ ನೀಡಿದ್ದರು…! 100ನೇ ಎಪಿಸೋಡನ್ನು ನಡೆಸಿಕೊಟ್ಟಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.


‘ಹ್ಹಹ್ಹಹ್ಹ’ ಎಂಬ ವಿನೂತನ ಕಾರ್ಯಕ್ರಮಗಳಲ್ಲಿ ಸೆಲಬ್ರಿಟಿಗಳ ಜೀವನದ ಹಾಸ್ಯ ಪ್ರಜ್ಞೆ ತೋರಿಸಿಕೊಡಲಾಗ್ತಿತ್ತು. ‘ಏನೋನೋ ಮಾಡ್ತಾರೆ’ ಎಂಬ ಕಾರ್ಯಕ್ರಮದಲ್ಲಿ ಸ್ಟಾರ್ ಗಳ ಕ್ರೇಜಿ ವಿಷಯಗಳನ್ನು ಪರಿಚಯಿಸಲಾಗ್ತಿತ್ತು. ‘ಧ್ರುವತಾರೆ’ ಮರೆಯಾದ ತಾರೆಯರ ಕುರಿತ ಜನಪ್ರಿಯ ಕಾರ್ಯಕ್ರಮವಾಗಿತ್ತು.


3 ವರ್ಷದ ಬಳಿಕ ಕಾರಣಾಂತರದಿಂದ 2014ರಲ್ಲಿ ಸುದ್ದಿ ಮಾಧ್ಯಮ ಬಿಟ್ಟು ಎಂಟರ್ ಟ್ರೈನ್ಮೆಂಟ್ ಮೀಡಿಯಾಕ್ಕೆ ಬಂದರು. ಇಲ್ಲಿ 10 ತಿಂಗಳ ಕಾಲ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಆಗಿ ಸೇವೆಸಲ್ಲಿಸಿ ನಂತರ ಮತ್ತೆ ಸುದ್ದಿವಾಹಿನಿಯ ಸೆಳೆತದಿಂದ ಸುವರ್ಣ ಚಾನಲ್ ಗೆ ಎಂಟ್ರಿಕೊಟ್ರು.


ಸಿನಿಮಾ ಬ್ಯೂರೋ ಮುಖ್ಯಸ್ಥರಾಗಿ ಸುಗುಣ ಎಂಟ್ರಿ ಕೊಟ್ಮೇಲೆ ಸುವರ್ಣದ ‘ಸಿನಿಮಾ ಹಂಗಾಮ’ ಕ್ಕೆ ನಂಬರ್ 1 ಟಿಆರ್‍ಪಿ ಬಂತು. ಗಾಸಿಪ್ ಮತ್ತು ‘ಪುಂಗಾಯಣ’ಕ್ಕೆ ವಾಯ್ಸ್ ವೋವರ್ ಕೊಡ್ತಿರೋದು ಇವರೇ.


ಇನ್ನು ಜೀವನದ ಇಂಟ್ರೆಸ್ಟಿಂಗ್ ಘಟನೆಗಳ ಬಗ್ಗೆ ಹೇಳುತ್ತಾ ಹೋಗೋದಾದ್ರೆ ಒಮ್ಮೆ ಅಂಬರೀಷ್ ಅವರತ್ರ ತಾನು ರಜನಿಕಾಂತ್ ಅವರನ್ನು ಭೇಟಿ ಆಗ್ಬೇಕು ಅಂದಿದ್ರಂತೆ ಸುಗುಣ. ಇದನ್ನು ನೆನಪಿಟ್ಟಕೊಂಡಿದ್ದ ಅಂಬಿ ಒಂದು ದಿನ ಸುಗುಣೆ ಕರೆ ಮಾಡಿ ಮನೆಗೆ ಬರಲು ತಿಳಿಸಿದ್ರಂತೆ…! ಸುಗುಣ ರೆಬಲ್ ಸ್ಟಾರ್ ಅಂಬಿ ಮನೆಗೆ ಹೋದಾಗ ಅಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಇದ್ರಂತೆ…!


ಓದಿದ್ದು ಕನ್ನಡ ಮೀಡಿಯಂನಲ್ಲಿ. 1ನೇ ತರಗತಿಯಿಂದ ಎಂಎಸ್‍ಇ ವರೆಗೂ ಫಸ್ಟ್‍ಕ್ಲಾಸ್. ಎನ್‍ಸಿಸಿ ಮತ್ತು ಎನ್‍ಎಸ್‍ಎಸ್ ನಲ್ಲೂ ಇದ್ರು.


ಚಿಕ್ಕಂದಿನಲ್ಲಿ ಶಾಲೆಗೆ ಹೋಗಲ್ಲ ಅಂತ ಹಠ ಮಾಡ್ತಿದ್ದ ಸುಗುಣಗೆ ಶಾಲೆಗೆ ಹೋಗದೇ ಇದ್ರೆ ಎಮ್ಮೆ ಮೇಯಿಸೋಕೆ ಕಳುಹಿಸ್ತೀವಿ ಅಂತ ಅಮ್ಮ ಹೇಳ್ತಿದ್ರು…! ಎಮ್ಮೆ ಮೇಯಿಸೋಕೆ ಭಯ ಆಗುತ್ತೆ ಅಂತ ಶಾಲೆಗೆ ಹೋಗ್ತಿದ್ದ ಸುಗುಣ ಇಂದು ಸ್ಟಾರ್ ನಿರೂಪಕಿ…! ಇವರ ಯೂನಿಕ್ ಡ್ರೆಸ್, ಟ್ರೆಂಡಿ ಮಾಡ್ರನ್ ಸ್ಟೈಲ್ ಕಾಸ್ಟ್ಯೂಮ್ ಅನ್ನು ಬೇರೆಯವರು ಫಾಲೋ ಮಾಡ್ತಾರೆ…!


ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಹವಾ…! ಟ್ವಿಟರ್ ನಲ್ಲಿ 60ಸಾವಿರ ಫಾಲೋವರ್ಸ್ ಹೊಂದಿದ್ದಾರೆ. ಇನ್ಸ್ಟ್ರಾಗ್ರಾಂ ಖಾತೆ ತೆರೆದು ಇನ್ನೂ 2 ತಿಂಗಳಾಗಿದ್ದಷ್ಟೇ 20ಸಾವಿರ ಫಾಲೋವರ್ಸ್ ಇದ್ದಾರೆ…! ಫೇಸ್ ಬುಕ್ ನ ಎರಡು ಖಾತೆಯಲ್ಲಿ ತಲಾ 30 ಸಾವಿರ ಹಿಂಬಾಲಕರಿದ್ದಾರೆ.


‘ಪತಿ ಶ್ರೀನಿವಾಸ್ ಅವರು ಮಾಧ್ಯಮ ಕ್ಷೇತ್ರದಲ್ಲೇ ಇರೋದ್ರಿಂದ ಅವರಿಂದ ಒಳ್ಳೆಯ ಪ್ರೋತ್ಸಾಹ ಸಿಗುತ್ತೆ. ಚಿಕ್ಕವಯಸ್ಸಲ್ಲಿ ತಂದೆಯನ್ನು ಕಳೆದುಕೊಂಡ ತನಗೆ ಮಾವ ವೇಣುಸ್ವಾಮಿ’ ತಂದೆಯ ಸ್ಥಾನವನ್ನು ತುಂಬಿದ್ರು. ಕಳೆದ ವರ್ಷ ಅವರನ್ನು ಕಳೆದುಕೊಂಡಿದ್ದು ತುಂಬಾ ನೋವಿನ ಘಟನೆ. ಅತ್ತೆ ಉಮಾ ಅವರು ಕೂಡ ತುಂಬಾ ಸಪೋರ್ಟ್ ಮಾಡ್ತಿದ್ದಾರೆ. ಕುಟುಂಬದ ಬೆಂಬಲದಿಂದಲೇ ವೃತ್ತಿ ಜೀವನದಲ್ಲಿ ಇವತ್ತಿಗೂ ಕ್ರಿಯೇಟಿವ್ ಆಗಿ ತೊಡಗಿಸಿಕೊಳ್ಳೋಕೆ ಸಾಧ್ಯ. ಹಾಗೂ ಸುವರ್ಣದಲ್ಲಿ ಒಳ್ಳೆಯ ವಾತಾವರಣವಿದೆ. ಇಲ್ಲಿ ಕೆಲ್ಸ ಮಾಡ್ತಿರೋದಕ್ಕೆ ತುಂಬಾ ಖುಷಿ ಇದೆ ಎನ್ನುತ್ತಾರೆ ಸುಗುಣ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ

48) 27ಡಿಸೆಂಬರ್ 2017 :ವಾಣಿ ಕೌಶಿಕ್

49) 28ಡಿಸೆಂಬರ್ 2017 : ಸುಗುಣ

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...