ಇವರು ಕನ್ನಡದ ಮೊದಲ 24*7 ನ್ಯೂಸ್ ಚಾನಲ್ ನ ಪ್ರಪ್ರಥಮ ಲೈವ್ ನ್ಯೂಸ್ ಆ್ಯಂಕರ್. ಪ್ರತಿಷ್ಠಿತ ಎನ್ಬಾ (ಇಓಃಂ) ಅವಾರ್ಡ್‍ನ ದಕ್ಷಿಣ ಭಾರತದ ಬೆಸ್ಟ್ ಆ್ಯಂಕರ್ ವಿಭಾಗದಲ್ಲಿ ಫೈನಲ್‍ಗೆ ತಲುಪಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸುದ್ದಿವಾಹಿನಿಗಳ ನಿರೂಪಕರನ್ನು ಹಿಂದಿಕ್ಕಿ ಫೈನಲ್ ನ ಟಾಪ್ 4 ಲೀಸ್ಟ್ ನಲ್ಲಿ ಆಯ್ಕೆಯಾದ ಏಕೈಕ ಕನ್ನಡತಿ ಇವ್ರ ಬಗ್ಗೆ ಬರೆಯದೇ ಇದ್ರೆ ಹೇಗೆ…?
ಇವತ್ತು ಇವರ ಬಗ್ಗೆ ಬರೆಯಲೇ ಬೇಕಂತ ಡಿಸೈಡ್ ಮಾಡಿ, ಕಾಲ್ ಮಾಡ್ದೆ. ‘`ಅಯ್ಯೋ…ನಾನು ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ…! ನನ್ನ ಬಗ್ಗೆ ಬರೆಯುವಂತಹದ್ದೇನು ಇಲ್ಲ…! ಈಗ ಏನೂ ಬರೆಯೋದು ಬೇಡ’’ ಅಂತ ಕೇಳಿಕೊಂಡ್ರು.
ಮೇಡಂ, ನೀವು ಸಾಧಿಸಿದ್ದು ಬೇಕಾದಷ್ಟಿದೆ. ನಿಜ, ಸಾಧಿಸಬೇಕಿರುವುದೂ ಬೆಟ್ಟದಷ್ಟು ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಜನ ನಿಮ್ಮನ್ನು ತುಂಬಾ ಇಷ್ಟಪಟ್ಟಿದ್ದಾರೆ. ಕಳೆದ ವರ್ಷ ನಾವು ನಡೆಸಿದ್ದ ‘ಕರ್ನಾಟಕ ಫೇವರೇಟ್ ಆ್ಯಂಕರ್ ಕಾಂಪಿಟೇಶನ್’ ನಲ್ಲಿ ವಿನ್ನರ್ ಆದವರು ನೀವು. ನಿಮ್ಮನ್ನು ಮೆಚ್ಚಿ ಗೆಲ್ಲಿಸಿರೋ ಕನ್ನಡಿಗರಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳೋ ಕುತೂಹಲವಿದೆ. ಅದಕ್ಕೆ ಅಕ್ಷರ ರೂಪ ನೀಡಲು ನಾನು ಉತ್ಸುಕನಾಗಿದ್ದೇನೆ ಎಂದೆ.
ನಾನಿಷ್ಟು ತಲೆ ತಿಂದ ಮೇಲೆ ಪಾಪಾ, ಅವ್ರು ಮಾತನಾಡದೇ ಇರಲು ಆಗುತ್ತಾ…? ಒಂದಿಷ್ಟು ವಿಷ್ಯಗಳನ್ನು ಪ್ರೀತಿಯಿಂದ ಹಂಚಿಕೊಂಡ್ರು.
ನಿಮ್ಮ ದಿ ನ್ಯೂ ಇಂಡಿಯನ್ ಟೈಮ್ಸ್ ನಡೆಸಿದ್ದ ‘ಕರ್ನಾಟಕ ಫೇವರೇಟ್ ಆ್ಯಂಕರ್’ ಸ್ಪರ್ಧೆಯ ವಿಜೇತರು ಅಂದ್ರೆ ನಿಮಗೆ ಗೊತ್ತಾಗಿದೆ. ಯಸ್, ಇವರು ಸುಕನ್ಯ ಸಂಪತ್.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಾಮದ ಪದೌ ಸುಕನ್ಯ ಸಂಪತ್ ಅವರ ತವರು. ತಂದೆ ನರಸಿಂಹ ಭಟ್, ತಾಯಿ ಪಾರ್ವತಿ. ಶ್ರೀಪತಿ ಮತ್ತು ಕೇಶವ್ ಕುಮಾರ್ ಇವರ ತಮ್ಮಂದಿರು. ಸಂಪತ್ ಕುಮಾರ್ ಪತಿ, ತನ್ವಿರಾವ್ ಮುದ್ದಿನ ಮಗಳು. ಮಾವ ದಿ. ಶ್ರೀಧರ್ ರಾವ್, ಅತ್ತೆ ಯಶೋಧ.
ಸುಕನ್ಯ ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಾಯಿತು. ಪಿಯುಸಿ ಮತ್ತು ಪದವಿ (ಬಿಎಸ್‍ಸಿ) ವ್ಯಾಸಂಗ ಮಾಡಿದ್ದು ಬಂಟ್ವಾಳದ ಎಸ್ ವಿ ಎಸ್ ಕಾಲೇಜಿನಲ್ಲಿ.
ಹೀಗೆ ಸುಕನ್ಯಾ ಅವರು ತಮ್ಮ ಕುಟುಂಬ, ವಿದ್ಯಾಭ್ಯಾಸದ ಬಗ್ಗೆ ಹೇಳಿಕೊಂಡ ಮೇಲೆ, ‘ಮೇಡಂ, ವಿಜ್ಞಾನ ವಿದ್ಯಾರ್ಥಿನಿಯಾದ ನಿಮಗೆ ಈ ಪತ್ರಿಕೋದ್ಯಮದ ಆಸಕ್ತಿ ಹೇಗೆ ಬಂತು’ ಎಂದು ಕೇಳಿದೆ.
ಕಥೆ, ಕವನ ಬರೆಯುತ್ತಿದ್ದರು. ಯಾವುದೇ ಕಾಂಪಿಟೇಶನ್ ಇರಲಿ ಅಲ್ಲಿ ಸುಕನ್ಯ ಇಲ್ಲದೇ ಇರುತ್ತಿರಲಿಲ್ಲ. ಭಾಷಣ, ಚರ್ಚಾಸ್ಪರ್ಧೆ, ಆಶುಭಾಷಣದಲ್ಲಂತೂ ಸುಕನ್ಯ ಯಾವಾಗಲೂ ಫಸ್ಟ್… ಡಿಗ್ರಿ ಮಾಡುವಾಗ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರು.
ಇನ್ನು ದಕ್ಷಿಣ ಕನ್ನಡದವರು ಬೇರೆ, ಯಕ್ಷಗಾನವನ್ನೂ ಮಾಡ್ತಿದ್ರು ಅಂತ ಹೇಳ್ಬೇಕ…? ಸುಕನ್ಯ ಯಕ್ಷಗಾನ, ಡ್ಯಾನ್ಸ್‍ನಲ್ಲೂ ಮುಂದಿದ್ರು. ಸಖತ್ತಾಗಿ ಕೇರಂ ಕೂಡ ಆಡ್ತಿದ್ರು…!
ತಾನು ಫ್ಯೂಚರಲ್ಲಿ ಆ್ಯಂಕರ್ ಆಗ್ತೀನಿ ಅಂತ ಸುಕನ್ಯ ಕನಸು ಮನಸಲ್ಲೂ ಅನ್ಕೊಂಡಿರ್ಲಿಲ್ಲ. ಆದರೆ, ಇವರಿಗೆ ಪಾಠ ಮಾಡ್ತಿದ್ದ ಉಪನ್ಯಾಸಕರಿಗೆ ಗೊತ್ತಿತ್ತು…! ಖಂಡಿತಾ ಈ ನಮ್ಮ ಶಿಷ್ಯ ಒಳ್ಳೆಯ ನ್ಯೂಸ್ ಆ್ಯಂಕರ್ ಆಗ್ತಾಳೆ ಅಂತ…!
ಸುಕನ್ಯ ಕೇವಲ ಸೈನ್ಸ್ ಡಿಪಾರ್ಟ್‍ಮೆಂಟ್ ಮಾತ್ರವಲ್ಲದೆ ಎಲ್ಲಾ ವಿಭಾಗದ ಲೆಕ್ಚರರ್ಸ್ ಗೆಲ್ಲ ಅಚ್ಚುಮೆಚ್ಚಾಗಿದ್ರು. ಕನ್ನಡ ಸ್ಟೂಡೆಂಟ್ಸ್ ಸೇರಿ ಅಗ್ರಹಾರದ ಬಗ್ಗೆ ಪ್ರಾಜೆಕ್ಟ್ ಮಾಡಿದ್ರು. ಇದಕ್ಕೆ ಯಾವುದೇ ಅಂಕಗಳು ಇರ್ಲಿಲ್ಲ. ಸುಮ್ನೆ ಖಷಿಗೆ ಮಾಡಿದ್ದಾಗಿತ್ತು. ಈ ಪ್ರಾಜೆಕ್ಟ್ ವರ್ಕ್ ಲೀಡರ್ ಸುಕನ್ಯ. ಹೀಗೆ ಮೊದಲಿಂದಲೂ ಇವ್ರು ಸಿಕ್ಕಾಪಟ್ಟೆ ಆ್ಯಕ್ಟಿವ್.
`ಹೀಗೆ ನಾನು ಪತ್ರಿಕೋದ್ಯಮಕ್ಕೆ ಬಂದಿದ್ದು ಆಕಸ್ಮಿಕ. ಶಾಲಾ-ಕಾಲೇಜು ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದುದೇ ಇದಕ್ಕೆ ಕಾರಣವಾಯ್ತೇನೋ ಅಂದ್ರು’.
ಹೈಸ್ಕೂಲ್ ನಲ್ಲಿರುವಾಗಲೇ ಸುಕನ್ಯ ಅವರಲ್ಲಿದ್ದ ನ್ಯೂಸ್ ಆ್ಯಂಕರ್ ಆಗೋ ಕೌಶಲವನ್ನು ಗುರುತಿಸಿದ್ದು ಶಿಕ್ಷಕ ಶೇಖರ್ ಅವರು. ಸಾಮಾನ್ಯ ಜ್ಞಾನದ ಬಗ್ಗೆ, ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಆಸಕ್ತಿ ಮೂಡಲು ಕಾರಣವೇ ಶೇಖರ್ ಅವರು.
ಅದು 2006 ಸುಕನ್ಯಾ ಅವರ ಡಿಗ್ರಿ ಎಕ್ಸಾಮ್ ಇನ್ನೂ ಮುಗಿದಿರ್ಲಿಲ್ಲ. ಟಿವಿ9 ಕನ್ನಡ ಚಾನಲ್ ಲಾಂಚ್ ಗೆ ತಯಾರಿ ನಡೀತಾ ಇತ್ತು. ಹೊಸ ಸುದ್ದಿವಾಹಿನಿಗೆ ಹೊಸ ಮುಖಗಳನ್ನು ಹುಡುಕುತ್ತಿದ್ದಾರೆ ಅನ್ನೋದು ಉಪನ್ಯಾಸಕರಾದ ರಾಜಮಣಿ ರಾಮಕುಂಜ ಅವರಿಗೆ ಗೊತ್ತಾಯ್ತಂತೆ. ಆಗ ಅವರು ಸುಕನ್ಯ ಅವರಿಗೆ ಟ್ರೈ ಮಾಡೋಕೆ ಹೇಳಿದ್ರಂತೆ.
ಯಾವಾಗಲ್ಲೂ ಉದಯ ಮ್ಯೂಸಿಕ್ (ಯು2) ನೋಡ್ತಿದ್ದ ಸುಕನ್ಯ ಕೆಲಸ ತುಂಬಾ ಆರಾಮಿಗಿರುತ್ತೆ. ಊಟ ಆಯ್ತಾ, ತಿಂಡಿ ಆಯ್ತಾ ಅಂತ ಕೇಳ್ಕೊಂಡು ಮಾತಾಡ್ತಿದ್ರೆ ಸಾಕು ಅಂತ ಟಿವಿ9ಗೆ ರೆಸ್ಯೂಮ್, ಫೋಟೋ ಕಳುಹಿಸಿಕೊಟ್ಟಿದ್ರು.
ಟಿವಿ9 ನಿಂದ ಇಂಟರ್ ವ್ಯೂಗೆ ಬರುವಂತೆ ಫೋನ್ ಬಂತು. ಕೊನೆಯ ಸೆಮಿಸ್ಟರ್‍ನ ಎರಡು ಎಕ್ಸಾಮ್ ಮಾತ್ರ ಮುಗಿದಿತ್ತಷ್ಟೇ. ಇನ್ನೂ ಐದಾರು ಎಕ್ಸಾಮ್ ಬಾಕಿ ಇತ್ತು. ಪರೀಕ್ಷೆಗಳ ನಡುವೆ 1-2 ದಿನ ಗ್ಯಾಪ್ ಇರುತ್ತಲ್ಲಾ..? ಆ ಗ್ಯಾಪಲ್ಲಿ ಫ್ರೆಂಡ್ ಶ್ವೇತ ಜೊತೆ ಬೆಂಗಳೂರು ಬಸ್ ಹತ್ತಿದ್ರು.
ಇಂಟರ್ ವ್ಯೂ ಮುಗಿಯಿತು. ಸುಕನ್ಯ ಸೆಲೆಕ್ಟ್ ಆದ್ರು. ಎಕ್ಸಾಮ್ ಮುಗಿಸಿಕೊಂಡು ಬರ್ತೀನಿ ಅಂತ ಪರ್ಮಿಶನ್ ತಗೊಂಡು ಊರಿಗೆ ವಾಪಸ್ಸಾದ್ರು.
2006 ಏಪ್ರಿಲ್ 26ಕ್ಕೆ ಎಕ್ಸಾಮ್ ಮುಗೀತು. 27ಕ್ಕೆ ಟಿವಿ9ಗೆ ಜಾಯಿನ್…! ಟಿವಿ9ನಲ್ಲಿ ಫಸ್ಟ್ ಲೈವ್ ನ್ಯೂಸ್ ಪ್ರೆಸೆಂಟ್ ಮಾಡಿದ್ದು ಇವರೇ. ಈ ಮುಖೇನ ಕರ್ನಾಟಕದ ಫಸ್ಟ್ 24*7 ನ್ಯೂಸ್ ಚಾನಲ್ ನ ಮೊಟ್ಟ ಮೊದಲ ಲೈವ್ ನ್ಯೂಸ್ ಆ್ಯಂಕರ್ ಎಂಬ ಪ್ರಸಿದ್ಧಿ ಇವರದ್ದು.
ಆರಂಭದ ದಿನಗಳಲ್ಲೇ ‘ಸುಪ್ರಭಾತ’, ‘ನಮ್ಮೂರು’, ‘ಫಿಲ್ಮಿ ಫಂಡ’ ‘ವಾರೆಂಟ್’ ಸೇರಿದಂತೆ ಬಹುತೇಕ ಎಲ್ಲಾ ಕಾರ್ಯಕ್ರಮಗಳನ್ನು, ಕ್ರೀಡೆ, ಸಿನಿಮಾ ಡಿಸ್ಕಶನ್ಸ್ ನಡೆಸಿಕೊಟ್ಟಿದ್ದರು.
ರವಿಕುಮಾರ್ ಮತ್ತು ಮಾರುತಿ (ಈಗ ಫಸ್ಟ್ ನ್ಯೂಸ್) ಅವರು ಸುಕನ್ಯ ಅವರಿಗೆ ತುಂಬಾ ಸಪೋರ್ಟ್ ಮಾಡಿದ್ದರು. ಇವಳ ಕೈಯಲ್ಲಿ ಖಂಡಿತಾ ಎಲ್ಲವೂ ಆಗುತ್ತೆ ಅಂತ ತುಂಬಾ ಅವಕಾಶಗಳನ್ನು ಕೊಟ್ಟಿದ್ದರು. ಇದನ್ನು ಸುಕನ್ಯ ಸ್ಮರಿಸಿಕೊಳ್ಳದೇ ಇರ್ತಾರ…?
2007ರಲ್ಲಿ ಬದಲಾವಣೆ ಬಯಸಿ ಕಸ್ತೂರಿ ಚಾನಲ್ ಗೆ ಹೋದ್ರು. ಇಲ್ಲಿ ಪ್ರೋತ್ಸಾಹ ನೀಡಿದ ಎಂ.ಆರ್ ಸುರೇಶ್, ಮನೋಜ್, ದಿವಾಕರ್ ಅವರನ್ನು ನೆನೆಯುತ್ತಾರೆ.
2009ರಲ್ಲಿ ಸುವರ್ಣ ಚಾನಲ್ ಪ್ರವೇಶಿಸಿದ್ರು. ಇಲ್ಲಿ ಎಚ್.ಆರ್ ರಂಗನಾಥ್ (ಪಬ್ಲಿಕ್ ಟಿ.ವಿ), ರವಿ ಹೆಗ್ಡೆ, ರಂಗನಾಥ್ ಭಾರಧ್ವಜ್ (ಈಗ ಟಿವಿ9), ವಿಜಯ ಲಕ್ಷ್ಮಿ ಶಿಬರೂರು (ಈಗ ನ್ಯೂಸ್ 18 ಕನ್ನಡ) ಅವರು ನೀಡಿದ ಪ್ರೋತ್ಸಾಹದ ಬಗ್ಗೆ ಹೆಮ್ಮೆಯಿಂದ ನನ್ನೊಂದಿಗೆ ಹೇಳಿಕೊಂಡ್ರು.
2011ರಲ್ಲಿ ಮಗಳು ತನ್ವಿ ಹುಟ್ಟಿದ್ಲು. ಆಗ ಅವಳಿಗೆ ಟೈಮ್ ಕೊಡೋ ಸಲುವಾಗಿ ಕೆಲಸ ಬಿಟ್ರು. ಮತ್ತೆ ಚಾನಲ್ ನಲ್ಲಿ ಕೆಲಸ ಮಾಡಲ್ಲ ಅಂತ ಡಿಸೈಡ್ ಮಾಡಿದ್ರಂತೆ.
ಆದ್ರೆ, 2012ರಲ್ಲಿ ಎಚ್. ಆರ್ ರಂಗನಾಥ್ ಅವರು ತಮ್ಮ ಪಬ್ಲಿಕ್ ಟಿವಿಗೆ ಕರೆದ್ರು. ಫುಲ್ ಟೈಮ್ ಆಗದೇ ಇದ್ರೆ ಪಾರ್ಟ್ ಟೈಮ್ ಮಾಡು ಅಂದಿದ್ರು. ಪಾರ್ಟ್ ಟೈಮ್ ಕೆಲಸ ಅಂತ ಪಬ್ಲಿಕ್ ಟಿವಿ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ರೀ ಎಂಟ್ರಿ ಕೊಟ್ರು. ರಂಗನಾಥ್ ಅವರಿಂದಾಗಿ ಮಾಧ್ಯಮ ಕ್ಷೇತ್ರದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಾಧ್ಯವಾಯ್ತು. ಇಲ್ದೆ ಇದ್ದಿದ್ರೆ ನಾನಿಂದು ಮಾಧ್ಯಮ ರಂಗದಿಂದ ಕಣ್ಮರೆಯಾಗಿರುತ್ತಿದ್ದೆ ಎಂದು ಸುಕನ್ಯ ರಂಗನಾಥ್ ಅವರನ್ನು ಸ್ಮರಿಸಿಕೊಂಡ್ರು.
2013 ನವೆಂಬರ್ 8ಕ್ಕೆ ಮರಳಿ ಗೂಡಿಗೆ ಎಂಬಂತೆ ಟಿವಿ9ಗೆ ರೀ ಎಂಟ್ರಿ ಕೊಟ್ಟ ಸುಕನ್ಯ ಅವರು ಇಂದು ಟಿವಿ9 ಸುಕನ್ಯ ಎಂದೇ ಜನಪ್ರಿಯರಾಗಿದ್ದಾರೆ.
ಟಿವಿ9ನ ಎಂಡಿ ಮಿಶ್ರ ಅವರ ಪ್ರೋತ್ಸಾಹವನ್ನು ನೆನೆಯದೇ ಇದ್ರೆ ಆಗುತ್ತೇನ್ರೀ….ಎಂದು ಮಿಶ್ರ ಅವರು ನೀಡೋ ಪ್ರೋತ್ಸಾಹ, ಸಹಕಾರದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡ್ರು ಸುಕನ್ಯ.
ಸುವರ್ಣದಲ್ಲಿರುವಾಗ ‘ದುನಿಯ’, ‘ಬೆಂಗಳೂರು ಟುಡೆ’, ‘ಸುಹಾಸಿನಿ’, ಇವರು ನಡೆಸಿಕೊಟ್ಟ ಪ್ರಮುಖ ಕಾರ್ಯಕ್ರಮಗಳು. ಪಬ್ಲಿಕ್ ಟಿವಿಯಲ್ಲಿ ‘ಬೆಂಗಳೂರು ಮೆಟ್ರೋ’, ‘ಪ್ರಳಯ ಫಿಕ್ಸ್’, ಇವರ ಸಿಗ್ನೇಚರ್ ಪ್ರೋಗ್ರಾಂ.
ಟಿವಿ9ನಲ್ಲಿ ‘ಸುಪ್ರಭಾತ’, ‘ಜಸ್ಟ್ ಬೆಂಗಳೂರು’, ‘ಇಂದು ಸಂಜೆ’, ‘ನೇಷನ್ @9’, ‘ಪ್ರೈಂ ನ್ಯೂಸ್’, ಡಿಸ್ಕಶನ್ಸ್ ಹೀಗೆ ಸಾಮಾನ್ಯ ಎಲ್ಲಾ ಕಾರ್ಯಕ್ರಮಗಳಲ್ಲೂ ನೀವು ಇವರನ್ನು ನೋಡ್ತಿರ್ತೀರಿ.
ಸುಕನ್ಯ ಅವರ ಲೈಫಲ್ಲಿ ನಡೆದ ಟ್ರಾಜಿಡಿ ಅವರ ತಂದೆಯ ಸಾವು…! ‘ತೋಟದಲ್ಲಿ ಕೆಲಸ ಮಾಡುವಾಗ ನೀರಿಗೆ ಬಿದ್ದು ಸಾವನ್ನಪ್ಪಿದ್ದರು. ಇವತ್ತಿಗೂ ಆ ನೋವು ಸುಕನ್ಯ ಅವರನ್ನು ಕಾಡುತ್ತೆ. ನೀರಿನ ಅವಘಡಕ್ಕೆ ಸಂಬಂಧಿಸಿದ ಸುದ್ದಿಯನ್ನು ಓದುವಾಗ ತುಂಬಾ ಬೇಜಾರಾಗುತ್ತೆ. ಜೊತೆಗೆ ಮಕ್ಕಳಿಗೆ ಸಂಬಂಧಿಸಿದ ಕ್ರೈಂ ಸುದ್ದಿಯನ್ನು ಓದುವಾಗ ತುಂಬಾ ನೋವಾಗುತ್ತೆ’ ಅಂತಾರೆ ಸುಕನ್ಯ.
ಸಿನಿಮಾ ನೋಡೋದು, ಟ್ರಾವೆಲ್ ಮಾಡೋದು, ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡೋದು ಅಂದ್ರೆ ಸುಕನ್ಯ ಅವರಿಗಿಷ್ಟ. ಹೆಚ್ಚಾಗಿ ಟ್ರಾವೆಲ್ ಮಾಡೋ ಅಭ್ಯಾಸ ನ್ಯೂಸ್ ಓದುವಾಗ ತುಂಬಾ ಸಹಾಯಕ್ಕೆ ಬರುತ್ತೆ ಎನ್ನೋದು ಸುಕನ್ಯ ಅವರ ಅನುಭವದ ಮಾತು.
ಸುಕನ್ಯ ಅವರ ಸಾಧನೆಯ ಹಿಂದೆ ಕುಟುಂಬದ ಪಾತ್ರ ದೊಡ್ಡದಿದೆ. ಉಪನ್ಯಾಸಕರು, ಪ್ರೋತ್ಸಾಹ ನೀಡಿ ಬೆಳೆಸಿದ, ಬೆಳೆಸುತ್ತಿರುವ ವೃತ್ತಿರಂಗದ ಹಿರಿಯರನ್ನೆಲ್ಲಾ ಮಾತಿನ ನಡು ನಡುವೆ ನೆನೆಪು ಮಾಡಿಕೊಂಡ ಸುಕನ್ಯ ಅವರು, ಕುಟುಂಬ, ಸಹೋದ್ಯೋಗಿಗಳು, ಅಭಿಮಾನಿಗಳ ಬಗ್ಗೆ ಹೇಳೋದನ್ನು ಮರೆಯಲಿಲ್ಲ.
ನನ್ನದು ಅವಿಭಕ್ತ ಕುಟುಂಬ, ಅಪ್ಪ, ಅಮ್ಮ, ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರು ಎಲ್ರೂ ತುಂಬಾ ಪ್ರೋತ್ಸಾಹ ನೀಡ್ತಿದ್ರು. ಟಿವಿಯಲ್ಲಿ ಬರುತ್ತಿದ್ದ ನ್ಯೂಸ್ ಅನ್ನು ನೋಡಿ ನೋಡಿ, ನಾನೇ ನ್ಯೂಸ್ ಬರೆದು ಓದ್ತಿದ್ದೆ. ಅದಕ್ಕೆಲ್ಲಾ ಮನೆಯ ಸದಸ್ಯರೆಲ್ಲರೂ ಸಪೋರ್ಟ್ ಮಾಡ್ತಿದ್ರು. ತಪ್ಪುಗಳನ್ನು ತಿದ್ದುತ್ತಿದ್ರು. ಸೋದರ ಸಂಬಂಧಿ ವೇಣುಗೋಪಾಲ್ ಅವರ ನೀಡೋ ಪ್ರೋತ್ಸಾಹ ಕೂಡ ತುಂಬಾ ದೊಡ್ಡದು ಎಂದು ಮನೆ ಮಂದಿಗೆಲ್ಲಾ ಥ್ಯಾಂಕ್ಸ್ ಹೇಳಿದ್ರು.
ಮೇಡಂ, ನ್ಯೂಸ್ ಬರೆದು ಓದ್ತಿದ್ದೆ ಅಂದ್ರಿ, ಯಾವ್ ನ್ಯೂಸ್ ಬರೀತಾ ಇದ್ರಿ ಅಂತ ಹಾಗೇ ಸುಮ್ಮನೆ ಕೇಳ್ದೆ. ‘ಆನೆ ಮತ್ತು ಇರುವೆ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇರುವೆ ಮೃತಪಟ್ಟಿದ್ದು, ಆನೆಗೆ ಗಂಭೀರವಾದ ಗಾಯಗಳಾಗಿವೆ’ ಅಂತೆಲ್ಲಾ ಕಾಮಿಡಿಯಾಗಿ ನ್ಯೂಸ್ ಬರೀತಿದ್ದೆ ಎಂದು ನಕ್ಕರು…!
ಮುಂದುವರೆದು ಸೇರಿದ ಮನೆಯಲ್ಲೂ ನಂಗೆ ತುಂಬಾ ಪ್ರೋತ್ಸಾಹ ನೀಡ್ತಾರೆ. ಪತಿ ಸಂಪತ್ ಸದಾ ಬೆನ್ನೆಲುಬಾಗಿದ್ದಾರೆ ಎಂದು ಹೇಳಿದ ಸುಕನ್ಯ, ತಾನು ಆಫೀಸಿಗೆ ಹೋದಾಗ ತನ್ನ ಮುದ್ದಿನ ಮಗಳು ತನ್ವಿಯನ್ನು ನೋಡಿಕೊಳ್ಳುವ ಅಜ್ಜಿ (ತಾಯಿಯ ತಾಯಿ)ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.
ಹೀಗೆ ಮಾತಾಡಿ ಕರೆ ಸ್ಥಗಿತಗೊಳಿಸಿದ್ದೆ ಅಷ್ಟೇ… ಇನ್ನೊಂದು ವಿಷ್ಯ ಅತ್ಯಂತ ಮುಖ್ಯವಾದುದು. ಹೇಳೋಕೆ ಮರ್ತಿದ್ದೆ ಅಂತ ವಾಪಸ್ಸು ಕರೆಮಾಡಿದ್ರು.
ಹ್ಞಾಂ ಮೇಡಂ ಹೇಳಿ ಅಂದೆ. ಇವತ್ತು ಜನ ನನ್ನ ಗುರುತು ಹಿಡಿದ್ದಾರೆ, ಇಷ್ಟಪಟ್ಟಿದ್ದಾರೆ ಅನ್ನೋದಕ್ಕೆ ಕಾರಣ ನನ್ನೆಲ್ಲಾ ಸಹೋದ್ಯೋಗಿಗಳು. ನನ್ನ ಸಾಧನೆಯ ಕ್ರೆಡಿಟ್ ಎಲ್ಲಾ ಸಹೋದ್ಯೋಗಿಗಳಿಗೂ ಸಿಗಬೇಕು. ತೆರೆಮರೆಯಲ್ಲಿ ಕೆಲಸ ಮಾಡುವವರು ತುಂಬಾ ಮಂದಿ ಇದ್ದಾರೆ. ಈ ಸಂದರ್ಭದದಲ್ಲಿ ಅವರಿಗೆ ಕೃತಜ್ಞತೆ ತಿಳಿಸದಿದ್ರೆ ಮನಸ್ಸು ಒಪ್ಪಲ್ಲ ಎಂದು ಧನ್ಯವಾದ ಅರ್ಪಿಸಿದ್ದಾರೆ.
ಏನೇ ಮಾಡಿದ್ರು ಗುರುತಿಸೋದು ಪ್ರೀತಿಯ ಕನ್ನಡಿಗರು. ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಜನ ಫಾಲೋವರ್ಸ್ ಸುಕನ್ಯ ಅವರಿಗಿದ್ದಾರೆ. ಇವರ ಬಗ್ಗೆಯೂ ಸುಕನ್ಯ ಮನದಾಳದ ಮಾತುಗಳನ್ನಾಡಿದ್ರು.
ಕನ್ನಡಿಗರು ಪ್ರತಿನಿತ್ಯ ನ್ಯೂಸ್, ಪ್ರೋಗ್ರಾಂಗಳನ್ನು ನೋಡಿ, ಫೀಡ್ ಬ್ಯಾಕ್ ಕಳುಹಿಸುವ, ಫೋಟೋ, ವೀಡಿಯೋಗಳನ್ನು ಮಾಡಿ ಕಳುಹಿಸುವ ಮೂಲಕ ತುಂಬಾ ಸಪೋರ್ಟ್ ಮಾಡ್ತಾರೆ. ಕಳೆದ ವರ್ಷ ನೀವು ನಡೆಸಿದ (ದಿ ನ್ಯೂ ಇಂಡಿಯನ್ ಟೈಮ್ಸ್) ಫೇವರೇಟ್ ಆ್ಯಂಕರ್ ಸ್ಪರ್ಧೆಯಲ್ಲಿ ನಾ ಗೆಲ್ಲಲು ಕಾರಣವೇ ನನ್ನ ಇಷ್ಟಪಡೋ ಜನ , ಅಭಿಮಾನಿಗಳು ಇವರಿಗೆ ನಾನು ಸದಾ ಚಿರಋಣಿ ಎಂದು ಹೇಳಿದ್ರು.
ಇವ್ರು ಇಷ್ಟೆಲ್ಲಾ ಜನರ ಬಗ್ಗೆ ಹೇಳಿದ್ಮೇಲೆ. ನಾವು ಇವ್ರ ಗುಣದ ಬಗ್ಗೆ ಹೇಳ್ದೆ ಇದ್ರೆ ಸರಿನಾ…? ಸುಕನ್ಯ ಅವರು ಸ್ನೇಹಜೀವಿ. ಎಲ್ಲರ ಜೊತೆ ಫ್ರೆಂಡ್ಲಿಯಾಗಿ ಬೆರೀತಾರೆ. ಯಾರನ್ನೂ ನೆಗ್ಲೇಟ್ ಮಾಡಲ್ಲ. ಎಲ್ರನ್ನೂ ಪ್ರೀತಿಯಿಂದ ಕಾಣ್ತಾರೆ, ಗೌರವಿಸ್ತಾರೆ. ಸ್ಟಾರ್ ನಿರೂಪಕಿ ಆಗಿದ್ದರೂ ಸ್ಟಾರ್ ಪಟ್ಟದಲ್ಲಿದ್ದೇನೆಂದು ಅವರು ಅಂದುಕೊಂಡಿಲ್ಲ…! ನಾನು ಎಲ್ಲರಂತೆ ಸಾಮಾನ್ಯಳೆಂಬ ಭಾವ ಅವರದ್ದು. ಇದೇ ಗುಣದಿಂದಲೇ ದಿನದಿಂದ ದಿನಕ್ಕೆ ಕೀರ್ತಿ, ಜನಪ್ರಿಯತೆ ಹೆಚ್ಚುತ್ತಿರೋದು.
ಇನ್ನು ಇವರು ಕನ್ನಡ ಮಾತಾಡೋದು ಕೇಳೋಕೆ ಚಂದ. ನಾಡು-ನುಡಿ ಮೇಲೆ ಅಪಾರ ಅಭಿಮಾನ ಇರೋ ಇವರು ಯಾವುದೇ ಸಭೆ, ಸಮಾರಂಭಗಳಿಗೆ ಹೋಗಲಿ ಕನ್ನಡದ ಕುರಿತೇ ಮಾತು ಆರಂಭಿಸೋದು.
ಇವ್ರ ಡ್ರೆಸ್ಸಿಂಗ್ ಸೆನ್ಸ್ ಗೆ ಫಿದಾ ಆಗದೇ ಇರೋರಿಲ್ಲ ಅನಿಸುತ್ತೆ. ಇವರ ಅನನ್ಯ ಶೈಲಿಯನ್ನು ಇಷ್ಟಪಟ್ಟು ಯುವತಿಯರು ಫಾಲೋ ಮಾಡ್ತಿದ್ದಾರೆ. ಸುಕನ್ಯ ಅವ್ರು ಇವತ್ತು ಯಾವ್ ಲುಕ್ ನಲ್ಲಿ ಕಾಣಿಸಿಕೊಳ್ತಾರೆ ಅಂತ ನೋಡೋಕೆಂದೇ ಹುಡುಗಿಯರು ನ್ಯೂಸ್ ನೋಡೋದು ಉಂಟು…!
ಮೊದಲೇ ಹೇಳಿದಂತೆ ಇವರು ಪ್ರತಿಷ್ಠಿತ ಎನ್ಬಾ ಅವಾರ್ಡ್‍ನ ದಕ್ಷಿಣ ಭಾರತದ ಬೆಸ್ಟ್ ಆ್ಯಂಕರ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಮಾಧ್ಯಮ ರತ್ನ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಂತೆಯೇ ಈಗಾಗಲೇ ನಿಮಗೆ ಗೊತ್ತಿರುವಂತೆ ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಕರ್ನಾಟಕ ಫೇವರೇಟ್ ಆ್ಯಂಕರ್ ಅವಾರ್ಡ್ ಸೇರಿದಂತೆ ನಾನಾ ಪ್ರಶಸ್ತಿಗಳು ಸುಕನ್ಯ ಅವರನ್ನು ಹುಡುಕಿಕೊಂಡು ಬಂದಿವೆ. ಹತ್ತಾರು ಸಂಘ-ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ. ಸಿನಿಮಾ, ಧಾರವಾಹಿ, ಜಾಹಿರಾತುಗಳಿಂದ ಅವಕಾಶಗಳು ಬರುತ್ತಿವೆ. ಕಳೆದ 12 ವರ್ಷಗಳಿಂದ ನೆಚ್ಚಿಕೊಂಡಿರುವ ಸುದ್ದಿ ಮಾಧ್ಯಮ ಲೋಕದಲ್ಲೇ ಇನ್ನೂ ಬಹುದೂರ ಸಾಗುವ ಆಸೆ, ಕನಸು ಇವರದ್ದು.
-ಶಶಿಧರ್ ಎಸ್ ದೋಣಿಹಕ್ಲು
ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.
1) 10 ನವೆಂಬರ್ 2017 : ಈಶ್ವರ್ ದೈತೋಟ
2)11 ನವೆಂಬರ್ 2017 : ಭಾವನ
3)12 ನವೆಂಬರ್ 2017 : ಜಯಶ್ರೀ ಶೇಖರ್
4)13 ನವೆಂಬರ್ 2017 : ಶೇಷಕೃಷ್ಣ
5)14 ನವೆಂಬರ್ 2017 : ಶ್ರೀಧರ್ ಶರ್ಮಾ
6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ
7)16 ನವೆಂಬರ್ 2017 : ಅರವಿಂದ ಸೇತುರಾವ್
8)17 ನವೆಂಬರ್ 2017 : ಲಿಖಿತಶ್ರೀ
9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ
10)19 ನವೆಂಬರ್ 2017 : ಅಪರ್ಣಾ
11)20 ನವೆಂಬರ್ 2017 : ಅಮರ್ ಪ್ರಸಾದ್
12)21 ನವೆಂಬರ್ 2017 : ಸೌಮ್ಯ ಮಳಲಿ
13)22 ನವೆಂಬರ್ 2017 : ಅರುಣ್ ಬಡಿಗೇರ್
14)23ನವೆಂಬರ್ 2017 : ರಾಘವ ಸೂರ್ಯ
15)24ನವೆಂಬರ್ 2017 : ಶ್ರೀಲಕ್ಷ್ಮಿ
16)25ನವೆಂಬರ್ 2017 : ಶಿಲ್ಪ ಕಿರಣ್
17)26ನವೆಂಬರ್ 2017 : ಸಮೀವುಲ್ಲಾ
18)27ನವೆಂಬರ್ 2017 : ರಮಾಕಾಂತ್ ಆರ್ಯನ್
19)28ನವೆಂಬರ್ 2017 : ಮಾಲ್ತೇಶ್
20)29/30ನವೆಂಬರ್ 2017 : ಶ್ವೇತಾ ಆಚಾರ್ಯ [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ. ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]
21)30ನವೆಂಬರ್ 2017 : ಸುರೇಶ್ ಬಾಬು
22)01 ಡಿಸೆಂಬರ್ 2017 : ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)
23)02 ಡಿಸೆಂಬರ್ 2017 : ಶಶಿಧರ್ ಭಟ್
24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್
25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ
26)05 ಡಿಸೆಂಬರ್ 2017 : ಶ್ರುತಿ ಜೈನ್
27)06ಡಿಸೆಂಬರ್ 2017 : ಅವಿನಾಶ್ ಯುವನ್
28)07ಡಿಸೆಂಬರ್ 2017 : ಶಿಲ್ಪ ಕೆ.ಎನ್
29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ
30)09ಡಿಸೆಂಬರ್ 2017 : ಸಂದೀಪ್ ಕುಮಾರ್
31)10ಡಿಸೆಂಬರ್ 2017 : ಪ್ರತಿಮಾ ಭಟ್
32)11ಡಿಸೆಂಬರ್ 2017 : ಹರೀಶ್ ಪುತ್ರನ್
33)12ಡಿಸೆಂಬರ್ 2017 : ನಿಶಾ ಶೆಟ್ಟಿ
34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ
35)14ಡಿಸೆಂಬರ್ 2017 : ಹಬೀಬ್ ದಂಡಿ
36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್
37)16ಡಿಸೆಂಬರ್ 2017 : ಜ್ಯೋತಿ ಇರ್ವತ್ತೂರು
38)17ಡಿಸೆಂಬರ್ 2017 : ಶಿಲ್ಪ ಐಯ್ಯರ್
39)18ಡಿಸೆಂಬರ್ 2017 : ನಾಝಿಯಾ ಕೌಸರ್
40) 19ಡಿಸೆಂಬರ್ 2017 : ಶ್ರುತಿಗೌಡ
41) 20ಡಿಸೆಂಬರ್ 2017 : ಎಂ.ಆರ್ ಶಿವಪ್ರಸಾದ್
42) 21ಡಿಸೆಂಬರ್ 2017 : ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)
43) 22ಡಿಸೆಂಬರ್ 2017 : ಶರ್ಮಿತಾ ಶೆಟ್ಟಿ
44) 23ಡಿಸೆಂಬರ್ 2017 : ಕಾವ್ಯ
45) 24ಡಿಸೆಂಬರ್ 2017 : ಹರ್ಷವರ್ಧನ್ ಬ್ಯಾಡನೂರು
46) 25ಡಿಸೆಂಬರ್ 2017 : ಸುಧನ್ವ ಖರೆ
47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ
48) 27ಡಿಸೆಂಬರ್ 2017 :ವಾಣಿ ಕೌಶಿಕ್
49) 28ಡಿಸೆಂಬರ್ 2017 : ಸುಗುಣ
50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ
ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.
51) 01ಜನವರಿ 2018 :ಐಶ್ವರ್ಯ ಎ.ಎನ್
52) 02ಜನವರಿ 2018 :ಶ್ರೀಧರ್ ಆರ್
53) 03ಜನವರಿ 2018 : ದಿವ್ಯಶ್ರೀ
54) 04ಜನವರಿ 2018 : ಮಂಜುಳ ಮೂರ್ತಿ
55) 05ಜನವರಿ 2018 : ಅಭಿಷೇಕ್ ರಾಮಪ್ಪ
56) 06ಜನವರಿ 2018 : ರೋಹಿಣಿ ಅಡಿಗ
57) 07ಜನವರಿ 2018 :ಮಾದೇಶ್ ಆನೇಕಲ್
58) 08ಜನವರಿ 2018 :ಶ್ರುತಿ ಕಿತ್ತೂರು
59) 09ಜನವರಿ 2018 : ಕೆ.ಸಿ ಶಿವರಾಂ
ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
60) 11ಜನವರಿ 2018 : ಮಾರುತೇಶ್
61) 12ಜನವರಿ 2018 :ನೀತಿ ಶ್ರೀನಿವಾಸ್
62) 13ಜನವರಿ 2018 :ರಕ್ಷಾ ವಿ
ಜನವರಿ 15 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
63) 15ಜನವರಿ 2018 : ಸುಮ ಸಾಲಿಯಾನ್
64) 16ಜನವರಿ 2018 : ಶಕುಂತಲ
ಜನವರಿ 17,18 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
65) 19 ಜನವರಿ 2018 : ವಸಂತ್ ಕುಮಾರ್ ಗಂಗೊಳ್ಳಿ
ಜನವರಿ 20 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
66) 21 ಜನವರಿ 2018 : ಮುದ್ದು ಮೀನ
67) 22 ಜನವರಿ 2018 : ಪ್ರಜ್ವಲ ಹೊರನಾಡು
ಜನವರಿ 23, 24 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
68) 25 ಜನವರಿ 2018 : ಮಂಜುನಾಥ್ ದಾವಣಗೆರೆ
ಜನವರಿ 26 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
69) 27 ಜನವರಿ 2018 : ರಕ್ಷತ್ ಶೆಟ್ಟಿ
70) 28 ಜನವರಿ 2018 : ಶಿವಶಂಕರ್
ಜನವರಿ 27 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
71) 28 ಜನವರಿ 2018 : ಸ್ಮಿತ ರಂಗನಾಥ್
ಜನವರಿ 29, 30,31, ಫೆಬ್ರವರಿ1 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ
72) 2 ಫೆಬ್ರವರಿ 2018 : ಜಾಹ್ನವಿ
73) 5 ಫೆಬ್ರವರಿ 2018 : ಸುಕನ್ಯ ಸಂಪತ್