ವಿದ್ಯಾರ್ಥಿಯೊಬ್ಬ ತನ್ನ ವಿದ್ಯಾರ್ಥಿನಿಯನ್ನು ನಡುಬೀದಿಯಲ್ಲಿ ಚೂರಿ ಇರಿದು ಕೊಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.
ಪ್ರೇಮ ವೈಪಲ್ಯವೇ ಈ ಕೊಲೆಗೆ ಕಾರಣ…!
ನೆಹರು ಮೆಮೊರಿಯಲ್ ಕಾಲೇಜಿನ ಬಿಎಸ್ ಸಿ ವಿದ್ಯಾರ್ಥಿನಿ ಅಕ್ಷತಾ ಕೊಲೆಯಾದವಳು. ಅದೇ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ ಆರೋಪಿ…!
ಕಾರ್ತಿಕ್ ಹಲವು ಬಾರಿ ಅಕ್ಷತಾ ಜೊತೆ ತನ್ನ ಪ್ರೀತಿಯನ್ನು ನಿವೇಧಿಸಿಕೊಂಡಿದ್ದ. ಆದರೆ ಆಕೆ ಅದನ್ನು ನಿರಾಕರಿಸಿದ್ದಳು. ಇಂದು ರಥಬೀದಿಯಲ್ಲಿ ಹೋಗುವಾಗ ಅಕ್ಷತಾ ಗೆ ಚೂರಿಯಿಂದ ಇರಿದು, ತಾನು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸುಳ್ಯ ಠಾಣೆಯಲ್ಲಿ ಪ್ರಕರ ದಾಖಲಾಗಿದೆ.