ಮಂಡ್ಯ ಬಿಡ್ತೇನೆ ಅಂತ ಪಾಪಾ ಒಂದಷ್ಟು ಜನ ಕನಸು ಕಾಣ್ತಿದ್ದಾರೆ

Date:

ಮದ್ದೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಅಚ್ಚರಿ ಹೇಳಿಕೆ ನೀಡಿದ್ದಾರೆ . ಮಂಡ್ಯ ಬಿಡ್ತೇನೆ ಅಂತ ಪಾಪಾ ಒಂದಷ್ಟು ಜನ ಕನಸು ಕಾಣ್ತಿದ್ದಾರೆ . ಮಂಡ್ಯ ಜನರ ಆಸೆ ಪ್ರಕಾರ ನಾನು ಇಲ್ಲಿಗೆ ಬಂದಿದ್ದು  . ಮಂಡ್ಯ ಬಿಟ್ಟು ಮತ್ತೊಂದು ಕಡೆ ಯಾಕೆ ಹೋಗಬೇಕು..? ಕ್ಷೇತ್ರ ಹುಡುಕುತ್ತಿದ್ದೇನೆ ಅನ್ನೋದು ಯಾರ ಕನಸು ಅಂತ ಗೊತ್ತಿಲ್ಲ . ಮಂಡ್ಯ ಬಿಡ್ತೇನೆ ಅಂತ ಪಾಪಾ ಒಂದಷ್ಟು ಜನ ಕನಸು ಕಾಣ್ತಿದ್ದಾರೆ . ಅವರ ಕನಸಿಗೆ ನಾನು ನೀರು ಚೆಲ್ಲಿದ ಹಾಗೆ ” ಎಂದ ಸುಮಲತಾ ವ್ಯಂಗ್ಯವಾಡಿದ್ದಾರೆ . ರಾಜಕೀಯಕ್ಕೆ ಬಂದಿರೋದೆ ಮಂಡ್ಯಕ್ಕೋಸ್ಕರ . ರಾಜಕೀಯದಲ್ಲಿ ಏನೇನೋ ಆಗ್ಬೇಕು ಅಂತ ಮಂಡ್ಯಕ್ಕೆ ಬಂದಿಲ್ಲ . ರಾಜಕೀಯ ಬೇಕಾದ್ರೆ ಇವತ್ತಲ್ಲ ನಾಳೆ ಬಿಡ್ತೀನಿ, ಮಂಡ್ಯ ಬಿಡಲ್ಲ . ಮಂಡ್ಯ ಬಿಟ್ಟು ಹೋಗಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ . ಚುನಾವಣೆಗೂ ಮುನ್ನವೆ ಸಂಸದೆ ಸುಮಲತಾ ತಟಸ್ಥವಾದ ಮಾಡಿದ್ದಾರೆ . ಚುನಾವಣೆಯಲ್ಲಿ ಯಾರಿಗೂ ಬೆಂಬಲ ನೀಡಲ್ಲ ಎಂದ ಸಂಸದೆ ಹೇಳಿದ್ದಾರೆ . ಕಳೆದ ಬಾರಿಯೂ ಬೆಂಬಲ ನೀಡದೆ ತಟಸ್ಥರಾಗಿದ್ದ ಸುಮಲತಾ , ಇನ್ನೂ ಕೂಡ ಅಭ್ಯರ್ಥಿಗಳು ಯಾರು ಅಂತ ಗೊತ್ತಿಲ್ಲ. ಮುಂಬರುವ ಚುನಾವಣೆಯಲ್ಲಿ ಯಾರಿಗೆ ಅಂತ ಬೆಂಬಲ ಕೊಡಲಿ . ಯಾರನ್ನು ನೋಯಿಸಬಾರದು, ಎಲ್ಲರೂ ಕೂಡ ನನ್ನ ಪರ ಇದ್ದಾರೆ . ಚುನಾವಣೆಯಲ್ಲಿ ನನಗೆ ಬೆಂಬಲವನ್ನೂ ಕೂಡ ಕೊಟ್ಟಿದ್ದಾರೆ . ಹಾಗಾಗಿ ಕಳೆದ ಚುನಾವಣೆಗಳಂತೆ ಇರೋಣ ಎಂದು ಮಂಡ್ಯ ಸಂಸದೆ
ಸುಮಲತಾ ಸ್ಪಷ್ಟನೆ ನೀಡಿದ್ದಾರೆ .

Share post:

Subscribe

spot_imgspot_img

Popular

More like this
Related

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ

ಹೈದರಾಬಾದ್‌ಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಅಹಮದಾಬಾದ್ʼನಲ್ಲಿ ತುರ್ತು ಭೂಸ್ಪರ್ಶ ಹೈದರಾಬಾದ್:...

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ: ಡಿ.ಕೆ.ಶಿವಕುಮಾರ್

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ:...