‘ಅಮ್ಮ-ಮಗ ಇಬ್ಬರೂ ಒಟ್ಟಿಗೆ ರಾಜಕೀಯದಲ್ಲಿ ಇರಲ್ಲ’ ನಾವು ‘Dynasty Politics’ ಮಾಡಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ. ಮಂಡ್ಯದಲ್ಲಿ ಮಾತ್ನಾಡಿದ ಅವರು, ಅಭಿಷೇಕ್ ರಾಜಕೀಯದಲ್ಲಿ ನಾನು ಇಂಟರ್ಫಿಯರ್ ಆಗಲ್ಲ. ಅಭಿಷೇಕ್ ಅವರಿಗೆ ಮನಸ್ಸಿದ್ದರೆ ಬರ್ತಾರೆ, ಇಲ್ಲ ಬರಲ್ಲ. ಮೊದಲಿನಿಂದಲೂ ನಾನು ಒಂದು ವಿಷಯ ಹೇಳುತ್ತಿದ್ದೇನೆ. ನಾವು ವಂಶ ರಾಜಕಾರಣ ಮಾಡಲ್ಲ. ರಾಜಕೀಯದಲ್ಲಿ ನಾನು ಇರ್ತೇನೆ, ಇಲ್ಲ ಅಭಿಷೇಕ್ ಇರಬೇಕು. ನಾನು-ಅಭಿಷೇಕ್ ಇಬ್ಬರೂ ಒಟ್ಟಿಗೆ ರಾಜಕೀಯದಲ್ಲಿ ಇರಲ್ಲ. ಅಭಿಷೇಕ್ ಪರ ಕೂಗು ಕೇಳ್ತಿದೆ, 3 ವರ್ಷದಿಂದ ಜನ ಕೇಳ್ತಿದ್ದಾರೆ. ಏನಾಗುತ್ತೆ ಅಂತ ಮುಂದೆ ಕಾದು ನೋಡೋಣ. ಇಲ್ಲಿ ನಾನು ಹೌದು ಅನ್ನೋದು ಇಲ್ಲ.. ಬೇಡ ಅನ್ನೋದು ಇಲ್ಲ. ರಾಜಕೀಯಕ್ಕೆ ಬರುವುದನ್ನು ಅವನು ಡಿಸೈಡ್ ಮಾಡಬೇಕು ಎಂದು ತಿಳಿಸಿದ್ರು.
ಅಮ್ಮ-ಮಗ ಇಬ್ಬರೂ ಒಟ್ಟಿಗೆ ರಾಜಕೀಯದಲ್ಲಿ ಇರಲ್ಲ
Date: