ನಂಜನಗೂಡು ಕ್ಷೇತ್ರದ ಮೇಲೆ ಘಟಾನುಘಟಿ ನಾಯಕರ ಕಣ್ಣು

Must read

ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ನಂಜನಗೂಡು ಕ್ಷೇತ್ರದ ಮೇಲೆ ಘಟಾನುಘಟಿ ನಾಯಕರು ಕಣ್ಣಿಟ್ಟಿದ್ದು, ಟಿಕೆಟ್ಗೆ ಮೂವರು ಅರ್ಜಿ ಸಲ್ಲಿಸಿದ್ದಾರೆ.
ನಂಜನಗೂಡು ಟಿಕೆಟ್ಗಾಗಿ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ, ಕಾಂಗ್ರೆಸ್ ಕಾರ್ಯಾಧಕ್ಷ ಧ್ರುವನಾರಾಯಣ್ ಮತ್ತು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅರ್ಜಿ ಸಲ್ಲಿಸಿದ್ದಾರೆ. ಪುತ್ರನಿಗಾಗಿ ನರಸೀಪುರ ಕ್ಷೇತ್ರ ತ್ಯಾಗ ಮಾಡಿರುವ ಮಹದೇವಪ್ಪ ನಂಜನಗೂಡು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನ ರಾಜ್ಯ ರಾಜಕಾರಣಕ್ಕೆ ‌ಮರಳಿರುವ ಆರ್.ಧ್ರುವನಾರಾಯಣ್ ನಂಜನಗೂಡು ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ. ಜೊತೆಗೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಕೂಡ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದು, ನಂಜನಗೂಡು ಕ್ಷೇತ್ರದ ಅಭ್ಯರ್ಥಿ ಆಯ್ಕೆ ತೀವ್ರ ಕುತೂಹಲ ಕೆರಳಿಸಿದೆ.

- Advertisement -spot_img

More articles

- Advertisement -spot_img

Latest article