ಈಗಾಗಲೇ ಗೊತ್ತಿರುವಂತೆ ಬಾಲಿವುಡ್ ನಟಿ ಸನ್ನಿ ಲಿಯೋನ್ ನವೆಂಬರ್ 3 ರಂದು ಬೆಂಗಳೂರಿಗೆ ಬರ್ತಿದ್ದಾರೆ. ಟೈಮ್ಸ್ ಕ್ರಿಯೇಷನ್ಸ್ ನವರು 2018ರ ಹೊಸ ವರ್ಷಾಚರಣೆಗೆ ಸನ್ನಿಯನ್ನು ಕರೆಸಬೇಕು ಅಂತ ಪ್ಲಾನ್ ಮಾಡಿದ್ರು. ಕೆಲವು ಸಂಘಟನೆಗಳು ಇದಕ್ಕೆ ಅಡ್ಡಪಡಿಸಿದ್ವು. ಈಗ ಸನ್ನಿ ಕಾರ್ಯಕ್ರಮವನ್ನು ಟೈಮ್ಸ್ ಕ್ರಿಯೇಷನ್ಸ್ ನವರು ನವೆಂಬರ್ 3 ರಂದು ಖಾಸಗಿ ಹೋಟೆಲ್ ಒಂದರಲ್ಲಿ ನಡೆಸಲಿದ್ದಾರೆ.
ಡ್ಯಾನ್ಸ್ ಶೋನ ಟಿಕೆಟ್ ಹೆಚ್ಚು ಮಾರಾಟವಾಗಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆ ದಿನ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಕಡ್ಡಾಯವಾಗಿ ಮದ್ಯ ನಿಷೇಧಿಸಲಾಗುತ್ತದೆ ಎಂದು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.