ಪತಿ ಬಗ್ಗೆ ಸನ್ನಿ ಲಿಯೋನ್ ಬಿಚ್ಚಿಟ್ಟ ಸತ್ಯ ಏನ್ ಗೊತ್ತಾ?

Date:

ನೀಲಿಚಿತ್ರ ತಾರೆಯಾಗಿ ಗುರುತಿಸಿಕೊಂಡು, ಇದೀಗ ಬಾಲಿವುಡ್ ನಲ್ಲಿ ನೆಲೆ ನಿಲ್ಲುತ್ತಿರುವ ನಟಿ ಸನ್ನಿ ಲಿಯೋನ್.

ಒಂದೆಡೆ ಟೀಕೆಗಳನ್ನು, ಇನ್ನೊಂದೆಡೆ ಅಭಿಮಾನಿಗಳಿಂದ ಅದಕ್ಕಿಂತ ಹೆಚ್ಚಿನ ಪ್ರೀತಿಯನ್ನು ಗಳಿಸಿರುವ ಇವರಿಗೆ ಪ್ರತಿ ಹಂತದಲ್ಲಿಯೂ ಜೊತೆಯಾಗಿರುವುದು ಪತಿ ಡೇನಿಯಲ್ ವೆಬರ್.


ಸನ್ನಿ ಲಿಯೋನ್ ಇದೀಗ ಪತಿ ಡೇನಿಯಲ್ ವೆಬರ್ ಮತ್ತು ತಮ್ಮ ನಡುವಿನ ಪ್ರೇಮಾಂಕುರ ಸೇರಿದಂತೆ ಕೆಲವು ಸಂಗತಿಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.
ತಾನು ಮೊದಲ ಬಾರಿಗೆ ವೆಗಾಸ್ ನಲ್ಲಿ ಡೇನಿಯಲ್ ನನ್ನು ನೋಡಿದೆ. ಸ್ವತಃ ಡೇನಿಯಲ್ ಹೇಳುವಂತೆ ಇದು ಲವ್ ಅಟ್ ಫಸ್ಟ್ ಸೈಟ್…!


ಕೆಲವೇ ಹೊತ್ತು ನಡೆದ ಆ ಮಾತುಕತೆಯಲ್ಲಿ ಒಬ್ಬರಿಗೊಬ್ಬರು ಇಷ್ಟವಾಗಿದ್ದೆವು.
ಕಾಂಟೆಕ್ಟ್ ನಂಬರ್ ಮತ್ತು ಈ-ಮೇಲ್ ಐಡಿ ಪಡೆದ ಡೇನಿಯಲ್ ಕರೆ ಮಾಡುವುದರ ಬದಲಾಗಿ ಈ-ಮೇಲ್ ಮೂಲಕ ಮಾತುಕತೆ ನಡೆಸುತ್ತಿದ್ದರು. ಅವರ ಈ ಗುಣ ನಂಗೆ ಇಷ್ಟವಾಯ್ತು.
ನಾನು ಅವರೊಂದಿಗೆ ಡೇಟಿಂಗ್ ಹೋಗಲು ಸಾಕಷ್ಟು ಸಮಯ ತೆಗೆದುಕೊಂಡೆ ಆದರೂ ಅವರು ನನಗಾಗಿ ಅವರು ಕಾದಿದ್ದಾರೆ ಎಂದು ತಿಳಿಸಿದರು. ಮೊದಲ ಬಾರಿಗೆ ಭೇಟಿಯಾದಾಗ ಮೂರು ಗಂಟೆಗಳ ಕಾಲ ಮಾತನಾಡಿದೆವು ಎಂದು ನೆನಪಿಸಿಕೊಂಡರು.
ತಾನು ಒಮನ್ ಗೆ ಹೋದಾಗ ಸಿ ಡಿ ಮತ್ತು ವಿವಿಧ ದೇಶಗಳ ಹೂವಿನ ಬೊಕ್ಕೆಯನ್ನು ಡೇನಿಯಲ್ ತನಗೆ ರವಾನಿಸಿದ್ದನ್ನು ಮರೆಯಲಾಗಲ್ಲ ಎಂದು ಸನ್ನಿ ಹೇಳಿದ್ದಾರೆ.
ನಾವಿಬ್ಬರು ಪ್ರೀತಿಸಲು ಶುರುಮಾಡಿ ಸ್ವಲ್ಪ ಕಾಲ ಆಗುವುದರೊಳಗೆ ನನ್ನ ಅಮ್ಮ ತೀರಿಕೊಂಡರು. ಆಗ ನನ್ನ ಮಾತ್ರವಲ್ಲದೆ ಇಡೀ ಕುಟುಂಬದ ಜವಬ್ದಾರಿಯನ್ನು ಡೇನಿಯಲ್ ನಿಭಾಯಿಸಿದರು. ನಾನು ಇಡೀ ರಾತ್ರಿ ಅಳುತ್ತಿದ್ದರೆ, ಡೇನಿಯಲ್ ನನಗೆ ಹೆಗಲಾಗಿ ರಾತ್ರಿ ಕಳೆದಿದ್ದರು ಎಂದರು.


ಆರಂಭದ ದಿನಗಳಲ್ಲಿ ನಾನು ನನ್ನ ವೃತ್ತಿಯಲ್ಲಿ ಪುರುಷನೊಂದಿಗೆ ಇರುವುದು ಡೇನಿಯಲ್ ಗೂ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ಅವರೂ ಸಹ ಇಂಥ ಕೆಲಸ ಮಾಡಲು ಆರಂಭಿಸಿದ. ನಂತರ ನಾವು ನಮ್ಮದೇ ಕಂಪನಿ ಆರಂಭಿಸಿದೆವು ಎಂದು ಅವರು ತಿಳಿಸಿದರು.

Share post:

Subscribe

spot_imgspot_img

Popular

More like this
Related

ಕಜ್ಜಾಯ ಕೊಡ್ತೀನಿ ಅಂತ ಕರೆದು ಕೊಲೆ: ದೃಶ್ಯ ಸಿನಿಮಾ ಶೈಲಿಯಲ್ಲಿ ವೃದ್ಧೆಯ ಹತ್ಯೆ!

ಕಜ್ಜಾಯ ಕೊಡ್ತೀನಿ ಅಂತ ಕರೆದು ಕೊಲೆ: ದೃಶ್ಯ ಸಿನಿಮಾ ಶೈಲಿಯಲ್ಲಿ ವೃದ್ಧೆಯ...

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಗೃಹ ಸಚಿವರ ಪರಮೆಶ್ವರ್​ ಗರಂ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ: ಗೃಹ ಸಚಿವರ ಪರಮೆಶ್ವರ್​ ಗರಂ ಬೆಂಗಳೂರು,...

ರಾತ್ರಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಿದೆ! ತಡೆಯಲು ಹೀಗೆ ಮಾಡಿ

ರಾತ್ರಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಿದೆ! ತಡೆಯಲು ಹೀಗೆ ಮಾಡಿ ಕೆಟ್ಟ ಕನಸುಗಳು...

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ ಸಿದ್ದರಾಮಯ್ಯ

ನಾವು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯ ಕಾಪಾಡಲು ಹೋರಾಟ ಕಟ್ಟುತ್ತೇವೆ: ಸಿಎಂ...