ಸನ್ನಿ ಲಿಯೋನ್ ಟ್ವೀಟನ್ನು ಸ್ವಲ್ಪ ಗೃಹ ಇಲಾಖೆಗೆ ತಲುಪಿಸ್ತೀರ…?

Date:

ಹೊಸ ವರ್ಷಾಚರಣೆ ಪ್ರಯುಕ್ತ ಮಾನ್ಯತ ಟೆಕ್ ಪಾರ್ಕ್‍ನಲ್ಲಿ ದಿ ಟೈಮ್ಸ್ ಕ್ರಿಯೇಶನ್ಸ್ ಆಯೋಜಿಸಿದ್ದ ‘ಸನ್ನಿ ನೈಟ್’ ಗೆ ಅವಕಾಶ ಕೊಡಲ್ಲ ಅಂತ ಗೃಹಸಚಿವ ರಾಮಲಿಂಗ ರೆಡ್ಡಿ ಅವ್ರು ಹೇಳಿದ್ದು ಹಳೇ ವಿಷ್ಯ. ಈಗ ಹೊಸದೇನಪ್ಪ ಅಂದ್ರೆ, ಸನ್ನಿ ಲಿಯೋನ್ ಅವರೇ ತಾವು ‘ಸನ್ನಿ ನೈಟ್’ನಲ್ಲಿ ಪಾಲ್ಗೊಳ್ಳೋದಿಲ್ಲ ಅಂತ ಟ್ವೀಟ್ ಮಾಡಿದ್ದಾರೆ…!

ಅಬ್ಬಾ… ಅಂತೂ ಇಂತೂ ಸನ್ನಿ ಬರಲ್ಲ…! ಇದು ನಮ್ ಪ್ರತಿಭಟನೆಗೆ ಸಂದ ಜಯ ಅಂತ ಸನ್ನಿ ನೈಟ್ ಗೆ ವಿರೋಧ ವ್ಯಕ್ತಪಡಿಸಿದ್ದ ಮಹಾನುಭಾವರು ಸಂಭ್ರಮಿಸ ಬಹುದು…!?


ಆದ್ರೆ, ನಮ್ ರಾಜ್ಯ ಸರ್ಕಾರ, ಅದರಲ್ಲೂ ಮಾನ್ಯ ಗೃಹಮಂತ್ರಿಗಳು, ಗೃಹ ಇಲಾಖೆ, ಪೊಲೀಸರು ತಲೆತಗ್ಗಿಸಬೇಕು…! ಯಾಕಂದ್ರೆ ಸನ್ನಿ ಟ್ವೀಟ್ ಹಂಗಿದೆ…! ಅವರ ಟ್ವೀಟನ್ನು ಗಂಭೀರವಾಗಿ ಗಮನಿಸಿದ್ರೆ, ಕರ್ನಾಟಕ ಗೃಹ ಇಲಾಖೆಗೆ ಸೂಕ್ತ ಭದ್ರತೆ ನೀಡೋ ಶಕ್ತಿ ಇಲ್ಲ ಎಂಬಂತಿದೆ…!


‘`ಹೊಸ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನನಗೆ ಹಾಗೂ ನನ್ನ ಅಭಿಮಾನಿಗಳಿಗೆ ಸೂಕ್ತ ರಕ್ಷಣೆ ನೀಡಲು ಸಾಧ್ಯವಿಲ್ಲ ಅಂತ ಬೆಂಗಳೂರು ಪೊಲೀಸರು ಬಹಿರಂಗವಾಗಿ ಹೇಳಿದ್ದಾರೆ. ನಮ್ಮ ತಂಡ ಮತ್ತು ನಾನು ಜನರ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತೇವೆ’’ ಆದ್ದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲ. ದೇವ್ರು ಒಳ್ಳೇದು ಮಾಡ್ಲಿ. ನಾನು ಪ್ರತಿಯೊಬ್ಬರ ಸುರಕ್ಷತೆಯನ್ನು ಬಯಸ್ತೀನಿ, ಹೊಸ ವರ್ಷದ ಶುಭಾಶಯಗಳು’’ ಅಂತ ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದಾರೆ.


ಪೊಲೀಸ್ ಇಲಾಖೆ ತಮ್ಮಿಂದ ಭದ್ರತೆ ನೀಡೋಕೆ ಆಗಲ್ಲ ಅನ್ನೋದೆ ಸರ್ಕಾರ, ಇಲಾಖೆ ನಾಚಿಕೆ ಪಡಬೇಕಾದ ವಿಷ್ಯ. ಅದಕ್ಕಿಂತ ಹೆಚ್ಚಾಗಿ ಕಲಾವಿದೆ, ತಮಗೆ, ತಮ್ಮ ಅಭಿಮಾನಿಗಳಿಗೆ ರಕ್ಷಣೆ ಸಿಗಲ್ಲ ಅಂತ ನಮ್ಮ ಬೆಂಗಳೂರಲ್ಲಿ ಕಾರ್ಯಕ್ರಮಕ್ಕೆ ಬರಲು ನಿರಾಕರಿಸಿರೋದು ತಲೆತಗ್ಗಿಸಬೇಕಾದ ವಿಷ್ಯ. ಇದು ದೇಶ/ ವಿಶ್ವಮಟ್ಟದಲ್ಲಿ ರಾಜ್ಯದ ಗೃಹ ಇಲಾಖೆಯ ಸಾಮಥ್ರ್ಯವನ್ನು ತೋರಿಸುತ್ತಿದೆ. ಸನ್ನಿ ಲಿಯೋನ್ ಟ್ವೀಟನ್ನು ಹೇಗಾದ್ರು ಮಾಡಿ ರಾಜ್ಯ ಸರ್ಕಾರ, ಗೃಹ ಇಲಾಖೆ, ನಮ್ ಗೃಹಸಚಿವರಿಗೆ ತಲುಪಿಸ ಬೇಕಲ್ಲಾ…?

Share post:

Subscribe

spot_imgspot_img

Popular

More like this
Related

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ  ಬೆಂಗಳೂರು: ರಾಜ್ಯದ...

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌ ಬೆಂಗಳೂರು: ಗ್ಯಾರಂಟಿ...