ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತ ನಾಲ್ಕನೇ ದಿನವೂ ಚಿನ್ನಕ್ಕೆ ಮುತ್ತಿಕ್ಕಿದೆ.
ಮಹಿಳೆಯರ 69ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಪೂನಮ್ ಯಾದವ್ (22) ಅವರು 222ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ.
ಅದೇ ರೀತಿ ಶೂಟಿಂಗ್ ನಲ್ಲಿ ಮನು ಭಾಕೇರ್ (ಚಿನ್ನ), ಹೀನ ಸಿಧು (ಬೆಳ್ಳಿ) ಪದಕ ಭಾರತಕ್ಕೆ ಒಲಿದಿದೆ.