ಸುಪ್ರೀಂ ನ್ಯಾಯಮೂರ್ತಿಗಳ ನಡುವಿನ‌ ಮುನಿಸು‌ ಹಿಂದೆಯೇ‌ ಬಹಿರಂಗವಾಗಿತ್ತು…!‌ ಯಾವಾಗ ಗೊತ್ತಾ?

0
130

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು‌‌ ಸುದ್ದಿಗೋಷ್ಠಿ ನಡೆಸಿ , ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಿಪಡಿಸಿರೋದು ನಿಮಗೆ ಈಗಾಗಲೇ ತಿಳಿದಿದೆ. ಇದು‌ ನಮ್ಮ ಭಾರತದ ಇತಿಹಾಸದಲ್ಲೇ ಮೊದಲು…! ಹಿಂದೆಂದೂ ಸುಪ್ರೀಂ ನ್ಯಾಯಮೂರ್ತಿಗಳು‌ ಹೀಗೆ ಸುದ್ದಿಗೋಷ್ಠಿ ನಡೆಸಿ ನ್ಯಾಯಾಲಯದೊಳಗಿನ ಭಿನ್ನಾಭಿಪ್ರಾಯಗಳನ್ನು ಹೊರ ಹಾಕಿರಲಿಲ್ಲ.


ಸುಪ್ರೀಂ ನ್ಯಾಯಮೂರ್ತಿಗಳಾದ ಚೆಲಮೇಶ್ವರ್ ,‌ ಗೊಗೋಯಿ , ಮದನ್ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಸುದ್ದಿಗೋಷ್ಠಿ ನಡೆಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

” ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಪತ್ರ ಬರೆದಿದ್ದು , ನ್ಯಾಯಾಂಗ ವ್ಯವಸ್ಥೆಯ‌ಲ್ಲಿನ ಸ್ವಾತಂತ್ರ್ಯ ದ ಕುರಿತು ತಮ್ಮ ಕಾಳಜಿಯನ್ನು ತಿಳಿಸಿದ್ವಿ. ಆದರೆ, ಅದನ್ನವರಿಗೆ ಮನವರಿಕೆ ಮಾಡಿಕೊಡಲು‌ ವಿಫಲವಾಗಿದ್ದೇವೆ. ನ್ಯಾಯಾಂಗ ವ್ಯವಸ್ಥೆಯಿಲ್ಲದೆ‌ ಪ್ರಜಾಪ್ರಭುತ್ವ ಬದುಕುಳಿಯುವುದು ಕಷ್ಟ.‌ ಆದ್ದರಿಂದ ಅನಿವಾರ್ಯವಾಗಿ ಸುದ್ದಿಗೋಷ್ಠಿ‌ ನಡೆಸುತ್ತಿದ್ದೀವಿ’ ಎಂದು ನ್ಯಾ. ಚಲಮೇಶ್ವರ್ ತಿಳಿಸಿದ್ದಾರೆ. ಹೀಗೆ ಸುಪ್ರೀಂ ನಲ್ಲಿ ಎಲ್ಲವೂ ಸರಿಯಿಲ್ಲ ಎಂದು ತಮ್ಮ ಅಸಮಧಾನ‌‌ ಹೊರಹಾಕಿದ್ದಾರೆ.

ಆದರೆ, ನಿಮಗಿದು ಗೊತ್ತೇ? ಈ‌ ಹಿಂದೆ‌ ಕಳೆದ ನವೆಂಬರ್ ನಲ್ಲಿಯೇ ಈ ಅಸಮಧಾನ ಬಯಲಾಗಿತ್ತು…!
ಮುಖ್ಯ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಎರಡನೇ ನ್ಯಾಯಮೂರ್ತಿಗಳಾದ‌‌‌ ಚೆಲಮೇಶ್ವರ್‌ ಅವರ ನಡುವೆ ಈ ಹಿಂದಿನಿಂದಲೂ ಅಸಮಧಾನವಿತ್ತು.


ಉತ್ತರ ಪ್ರದೇಶದ ಮೆಡಿಕಲ್ ಕಾಲೇಜು‌ ಹಗರಣ‌ದಲ್ಲಿ‌ ಒಡಿಶಾ ನ್ಯಾಯಮೂರ್ತಿ ಒಬ್ಬರ ಪಾತ್ರವಿದ್ದು ಆ ಬಗ್ಗೆ ವಿಚಾರಣೆ ನಡೆಸಲು‌ ಮುಖ್ಯ ನ್ಯಾಯಮೂರ್ತಿಗಳ ಅನುಮತಿ‌ ಇಲ್ಲದೇ ನ್ಯಾ. ಚೆಲಮೇಶ್ವರ್ ಸಂವಿಧಾನ ಪೀಠ ರಚಿಸಿದ್ರು.
ಬಳಿಕ ರೋಸ್ಟರ್ ಪ್ರಕಾರವಾಗಿ ಸಂವಿಧಾನ ಪೀಠ ರಚಿಸಲು ಮತ್ತು ಮತ್ತೊಂದು‌ ಪೀಠಕ್ಕೆ ವರ್ಗಾಯಿಸೋ ಅಧಿಕಾರ ಇರೋದು ಮುಖ್ಯ ನ್ಯಾಯಧೀಶರಿಗೆ ಎಂದು ಚೆಲಮೇಶ್ವರ್ ನೀಡಿದ ಆದೇಶವನ್ನು ರದ್ದು ಮಾಡಿದ್ದರು.


ಚೆಲಮೇಶ್ವರ್ ನಿರ್ಧಾರದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ನ್ಯಾ. ಭೂಷಣ್ ವಾಕ್ ಔಟ್‌‌ ಆಗಿದ್ದರು…!.
ಈ ರೀತಿ ಹಿಂದೆಯೇ ಸುಪ್ರೀಂ ‌ನ್ಯಾಯಮೂರ್ತಿಗಳ‌‌‌ ಮಮಸ್ತಾಪ ಬಹಿರಂಗವಾಗಿತ್ತು

LEAVE A REPLY

Please enter your comment!
Please enter your name here