ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..!

admin
By admin
1 Min Read

ಭಾರತೀಯರಿಗೂ, ಕನ್ನಡಿಗರೆಲ್ಲರಿಗೂ ಒಂದು ಶುಭ ಸುದ್ದಿ..! ಜಮ್ಮು ಕಾಶ್ಮೀರದ ಸಿಯಾಚಿನ್ನಲ್ಲಿ ಸಂಭವಿಸಿದ್ದ ಹಿಮಕುಸಿತದಲ್ಲಿ ಕಣ್ಮರೆಯಾಗಿದ್ದ ನಮ್ಮ ಕರ್ನಾಟಕದ ಯೋಧ `ಹನುಮಂತಪ್ಪ ಕೊಪ್ಪದ’ ಪವಾಡಸದೃಶ್ಯ ರೀತಿಯಲ್ಲಿ ಬದುಕುಳಿದಿದ್ದಾರೆ..!
ಧಾರವಾಡ ಜಿಲ್ಲೆಯಕುಂದಗೋಳ ತಾಲ್ಲೂಕಿನ ಬೆಟದೂರಿನ ಹನುಮಂತಪ್ಪನವರು ಇದೇ ತಿಂಗಳ ಮೂರನೇ ತಾರೀಖು ಸಂಭವಿಸಿದ್ದ ಹಿಮಕುಸಿತದಿಂದಾಗಿ 25 ಅಡಿ ಆಳದ ಹಿಮರಾಶಿಯಲ್ಲಿ ಮುಳುಗಿ ಸಾವು ಬದುಕಿನ ನಡುವೆ ಹೋರಾಡ್ತಾ ಇದ್ರು..! ಅವರು ಕಣ್ಮರೆಯಾದಲ್ಲಿಂದಲೂ ರಕ್ಷಣಾ ಕಾರ್ಯಚರಣೆ ನಿರಂತರವಾಗಿ ಸಾಗಿತ್ತು. ಅಂತೂ ಇಂತೂ ಕೊನೆಗೂ ಹನುಂತಪ್ಪ ನಿನ್ನೆ (ಸೋಮವಾರ) ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ..! ಆರು ದಿನಗಳಕಾಲ ಹಿಮದಲ್ಲಿದ್ದು ಬದುಕುಳಿದಿರೋದು ನಿಜಕ್ಕೂ ಪವಾಡ..! ಈ ಪವಾಡದ ಬಗ್ಗೆ ಮಾತಾಡಿರುವ ಸೇನೆಯ ನಾರ್ತರ್ನ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಡಿ.ಎಸ್ ಹೂಡಾ `ಅದೊಂದು ನಂಬಲಸಾಧ್ಯವಾದ ಕಾರ್ಯಚರಣೆ ಎಂದು ಉದ್ಗರಿಸಿದ್ದಾರೆ..!
ಅಂತು-ಇಂತೂ ಯೋಧ ಬದುಕುಳಿದರಲ್ಲ..! ಅಷ್ಟು ಸಾಕು..! ಯೋಧರು ದೇಶದ ದೊಡ್ಡ ಆಸ್ತಿ

Video :

https://www.youtube.com/watch?v=6oHFqNfW_U0&list=PLqTcg3orOj4VlotytrMnTunaXfwMYg-SC

 

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share This Article