No menu items!
12.4 C
Munich
Wednesday, April 29, 2026

ಇಂತಹ ತಾಯಿ ಎಲ್ಲಾದರೂ ಸಿಗುತ್ತಾಳೆಯೇ..?

Must read

`ಜಗತ್ತಿನಲ್ಲಿ ಕೆಟ್ಟ ಜನರು ಸಿಗುತ್ತಾರೆ. ಆದರೆ ಕೆಟ್ಟ ತಾಯಿ ಸಿಗುವುದಿಲ್ಲ’ ಎಂಬ ಮಾತು ಜನಜನಿತವಾಗಿದೆ. ಆ ಮಾತು ಸಾವಿರಾರು ಬಾರಿ ಸಾಬೀತಾಗಿದೆ. ತಾನೆಷ್ಟೇ ಕಷ್ಟಪಟ್ಟರೂ ಕೂಡಾ ತನ್ನ ಮಕ್ಕಳು ಚೆನ್ನಾಗಿರಬೇಕು ಎಂದು ಬಯಸುವುದು ತಾಯಿಯ ಗುಣ. ಇಲ್ಲೊಬ್ಬಳು ತಾಯಿಯಿದ್ದಾಳೆ ನೋಡಿ. ಬೆಳ್ಳಂ ಬೆಳಗ್ಗೆ ಕೆಲಸಕ್ಕೆ ಹೊರಟ ತನ್ನ ಮಗನಿಗೆ ಊಟ ತಯಾರು ಮಾಡಿಕೊಡಬೇಕು. ಆದರೆ ಅಸಾಧ್ಯ ಕಾಲು ನೋವು ಆಕೆಯನ್ನು ಬಾಧಿಸುತ್ತಿದೆ. ಆದ್ದರಿಂದ ಆಕೆ ಮಾಡಿದ ಐಡಿಯಾ ಮಾತ್ರ ಮೆಚ್ಚುವಂಥದ್ದು.
ಈ ತಾಯಿಗೆ ಯಾವುದೋ ಕಾರಣಕ್ಕೆ ಕಾಲಿನಲ್ಲಿ ಅಸಾಧ್ಯವಾದ ನೋವು ಕಾಣಿಸಿಕೊಂಡಿದೆ. ಆದರೆ ಆಕೆಯ ಮಗ ಕೆಲಸಕ್ಕೆ ಹೋಗಬೇಕು. ಅದಕ್ಕಾಗಿ ಅಡುಗೆಯನ್ನು ಮಾಡಲೇಬೇಕು. ಆದ್ದರಿಂದ ಈ ತಾಯಿ ಒಂದಷ್ಟು ಬಿಸಿನೀರು ಕಾಯಿಸಿ, ಅದರಲ್ಲಿ ಕಾಲನ್ನಿರಿಸಿದ್ದಾಳೆ. ಹಾಗೆ ಮಾಡಿದರೆ ನೋವು ಕಡಿಮೆಯಾಗುತ್ತದೆ ಎನ್ನುವುದು ಆಕೆಯ ಭಾವನೆ.
ರಿಜ್ವಾನ್ ಶೇಕ್ ಎಂಬುವವರ ತಾಯಿ ತನ್ನ ಮಗನಿಗಾಗಿ ಇಂಥದ್ದೊಂದು ಕೆಲಸ ಮಾಡಿದ್ದಾರೆ. ತನಗೆ ಎಂಥದ್ದೇ ನೋವಾದರೂ ಸರಿ ತನ್ನ ಮಗ ಹೊರಗಡೆ ಊಟ ಮಾಡಿ ಆರೋಗ್ಯ ಕೆಡಿಸಿಕೊಳ್ಳಬಾರದು ಎಂಬ ಕಾರಣಕ್ಕಾಗಿ ನೋವು ಮರೆತು ಅಡುಗೆ ಮಾಡಲು ಮುಂದಾಗಿದ್ದಾರೆ. ಆ ಸಮಯದಲ್ಲಿ ರಿಜ್ವಾನ್ ಶೇಕ್ ರವರು ಆ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ಈಗ ಭಾರೀ ವೈರಲ್ ಆಗಿದ್ದು, ರಿಜ್ವಾನ್ ರ ತಾಯಿ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

  • ರಾಜಶೇಖರ ಜೆ.

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಬೆಂಗಳೂರಿನಲ್ಲಿ ಅಲ್ ಖೈದಾ ಶಂಕಿತ ಉಗ್ರನ ಬಂಧನ..! ವಿವಾದಾತ್ಮಕ ಹೇಳಿಕೆ ನೀಡುವುದೇ ಈತನ ಕೆಲಸವಾಗಿತ್ತು..!

6 ಗುಂಡು ತಿಂದರೂ ನೆಲಕ್ಕೆ ಬೀಳದ ಭಾರತದ ಹೀರೋ..! ನಿಜ ಜೀವನದ ಸೂಪರ್ ಸ್ಟಾರ್ ಗೆ ಸೆಲ್ಯೂಟ್ ಹೊಡೆಯಿರಿ..!

ನೋಡ್ರಪ್ಪೋ ನೋಡ್ರೀ ಇದು ದುಡ್ಡಿನ ಮರ..! ಈ ಮರದಲ್ಲಿವೆ ಅಸಂಖ್ಯಾತ ಚಿಲ್ಲರೆ ಹಣ..!

ಕನ್ನಡ ಸಿನಿಮಾಗಳಿಗೇಕೆ ಥಿಯೇಟರ್ ಗಳಸಮಸ್ಯೆ..?! -ಕಿರಿಕ್ ಕೀರ್ತಿ

`ಹಾವು ಕಚ್ಚಿತಲ್ಲೋ ತಮ್ಮಾ ಹೋಗುತೈತೆ ಜೀವಾ..’ Kannada Folk Song

ಗನ್ ಕಲ್ಚರ್ ಎಫೆಕ್ಟ್, ದೊಡ್ಡಣ್ಣನ್ ಕಣ್ಣಲ್ಲಿ ಕಣ್ಣೀರು..!

ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!

ಒಂಟಿಕಾಲಲ್ಲೇ `ಮೌಂಟ್ ಎವರೆಸ್ಟ್’ ಏರಿದ ಸಾಹಸಿ..!

ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article