ಪ್ಲಾಸ್ಟಿಕ್ ರಸ್ತೆಯ ರೂವಾರಿ ಯಾರು ಗೊತ್ತಾ..?

0
89

ಹೊಸ ಯೋಜನೆಗಳು, ಹೊಸ ಹೊಸ ಕಲ್ಪನೆಗಳು ಕಾರ್ಯರೂಪಕ್ಕೆ ಬರುತ್ತಲೇ ಇರುತ್ತವೆ..! ಕಾರ್ಯರೂಪಕ್ಕೆ ಬಂದ ಕಲ್ಪನೆಗಳು ಒಳ್ಳೇ ಹೆಸರನ್ನೂ ಸಂಪಾದಿಸುತ್ತವೆ..! ಒಳ್ಳೇ ಕಲ್ಪನೆ, ಯೋಜನೆ ಅಂತಲೂ ಶಹಬ್ಬಾಶ್ ಅನಿಸಿಕೊಳ್ತವೆ..! ಕಾರ್ಯರೂಪಕ್ಕೆ ತಂದ ಸರ್ಕಾರವೂ ಭೇಷ್ ಅನಿಸಿಕೊಳ್ಳುತ್ತೆ..! ಆದ್ರೆ ಎಷ್ಟೊ ಒಂದ್ಸಾರಿ, ಈ ಹೊಸತನ ಹರಿಕಾರರ ಬಗ್ಗೆ ಯಾರಿಗೂ ತಿಳಿದಿರಲ್ಲ…!
ನಿಮಗೆ ಪ್ಲಾಸ್ಟಿಕ್ ರೋಡ್ ಕಲ್ಪನೆ ಗೊತ್ತಿದೆ..?! ಡಾಂಬರ್ ರಸ್ತೆ, ಸಿಮೆಂಟ್ ರಸ್ತೆಯಂತೆಯೇ ಅದಕ್ಕೂ ಗಟ್ಟಿಮುಟ್ಟಾದ ರಸ್ತೆಗಳು ಈ ಪ್ಲಾಸ್ಟಿಕ್ ರಸ್ತೆಗಳು..! ರಸ್ತೆ ಅಭಿವೃದ್ಧಿಪಡಿಸುವವರು ಕಡ್ಡಾಯವಾಗಿಪ್ಲಾಸ್ಟಿಕ್ ರಸ್ತೆಗಳನ್ನೇ ನಿರ್ಮಾಣ ಮಾಡೋ ಕಡೆ ಗಮನ ಹಸರಿಬೇಕು ಅಂತ ಸರ್ಕಾರವೇ 2015 ನವೆಂಬರ್ನಲ್ಲಿ ಆದೇಶ ಹೊರಡಿಸಿದೆ..! ದೇಶದ ನಾನಾ ಕಡೆಗಳಲ್ಲಿಈ ಪ್ಲಾಸ್ಟಿಕ್ ರಸ್ತೆ ಬಗ್ಗೆ ಒಲವು ತೋರ್ತಾ ಇದ್ದಾರೆ..! ಇದರಿಂದ ಸ್ವಲ್ಪ ಮಟ್ಟಿಗಾದ್ರೂ ಮಾಲಿನ್ಯವನ್ನು ತಡೆಗಟ್ಟ ಬಹುದು, ಒಂದೊಳ್ಳೆ ರಸ್ತೆಯೂ ನಿರ್ಮಾಣವಾದಂತಾಗುತ್ತೆ..!
ಸರಿ, ಈ ಪರಿಸರ ಸ್ನೇಹಿ ಕಲ್ಪನೆ ಮೊದಲಿಗೆ ಹೊಳೆದಿದ್ದು ಯಾರಿಗೆ..?! ಹ್ಞೂಂ, ಹ್ಞೂಂ ಹೇಳಿ, ದಿನಾ ಟಿವಿ ನೋಡ್ತೀರಾ.., ಪೇಪರ್ ಓದ್ತೀರ, ಸೋಶಿಯಲ್ ಮೀಡಿಯಾಗಳಲ್ಲಿ ಬ್ಯುಸಿಯಾಗಿರ್ತೀರಾ, ಎಲ್ಲೂ ಈ ಪ್ಲಾಸ್ಟಿಕ್ ರೋಡ್ ಕಲ್ಪನೆಯನ್ನು ಹೊಳೆಸಿಕೊಂಡ ಮೊದಲಿಗರ ಬಗ್ಗೆ ಗೊತ್ತೇ ಇಲ್ಲ..!
ಈ ಪ್ಲಾಸ್ಟಿಕ್ ರಸ್ತೆಯನ್ನು ಪರಿಚಯಿಸಿದವರು ಪ್ರೊ. ಆರ್ ವಾಸುದೇವನ್.ಇವರು ತ್ಯಾಗರಾಜರ್ ಇಂಜಿನಿಯರಿಂಗ್ ಕಾಲೇಜಿನ ರಾಸಯನ ಶಾಸ್ತ್ರದ ಪ್ರಾಧ್ಯಪಕರು. ಇವರ ಪ್ರಯೋಗವೇ ಕಲ್ಲು ಮತ್ತು ಪ್ಲಾಸ್ಟಿಕ್ ಮಿಶ್ರಿತ ರಸ್ತೆ..! ಇದು ಸ್ವಚ್ಛಭಾರತ ಮತ್ತು ಮೇಕ್ಇನ್ ಇಂಡಿಯಾಕ್ಕೂ ನೆರವಾಗಿದೆ..! ನಿಮಗೆ ಈ ಪ್ಲಾಸ್ಟಿಕ್ ರೋಡ್ ಕಲ್ಪನೆಯ ರೂವಾರಿ ಆರ್ ವಾಸುದೇವರೆಂದು ತಿಳಿದಿತ್ತೇ..?

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here