ಹಂಸಲೇಖ ಅವರಿಗೆ ಎದೆನೋವಿನಿಂದ ಆಸ್ಪತ್ರೆ ದಾಖಲಾಗಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ಹಂಸಲೇಖ ಕುಟುಂಬದವರು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಹಂಸಲೇಖ ಅವರ ಪುತ್ರ ಸೂರ್ಯ ಪ್ರಕಾಶ್ ಹಾಗೂ ಪುತ್ರಿ ತೇಜಸ್ವಿನಿ “ಇಂದು ಮುಂಜಾನೆಯಿಂದ ನಮ್ಮ ತಂದೆ, ಡಾ. ಹಂಸಲೇಖಾರವರ ಆರೋಗ್ಯದ ಬಗ್ಗೆ ಹಾಗೂ ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಒಂದು ವದಂತಿ ವಾರ್ತಾ ಮಾದ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದಿದೆ. ಈ ವದಂತಿಯು ಸುಳ್ಳಾಗಿದ್ದು, ಇದರಿಂದ ಅಭಿಮಾನಿಗಳು ಆತಂಕ ಪಡಬಾರದು ಹಾಗೂ ಈ ವದಂತಿಯನ್ನು ಇನ್ನು ಹರಡದಂತೆ ನೋಡಿಕೊಳ್ಳಬೇಕು ಎಂದು ನಮ್ರತೆಯಿಂದ ಕೇಳಿಕೊಳ್ಳುತೇವೆ ಎಂದು ತಿಳಿಸಿದ್ದಾರೆ.
ಹಂಸಲೇಖ ಅನಾರೋಗ್ಯ ಹಿನ್ನಲೆ ಅವರ ಪುತ್ರ ಹೇಳಿದ್ರು ಶಾಕಿಂಗ್ ಸುದ್ದಿ
Date: