ಕರುನಾಡ ಚಕ್ರವರ್ತಿ , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಅಭಿಮಾನಿಗಳು, ಚಿತ್ರರಸಿಕರು, ಕಲಾವಿದರು, ಚಿತ್ರರಂಗದ ಪ್ರಮುಖರು ಹೀಗೆ ಎಲ್ರಿಗೂ ಟಗರು ಹಿಡಿಸಿದೆ.
ಇದೀಗ ಇಂಗ್ಲೆಂಡ್ ಕ್ರಿಕೆಟಿಗರೊಬ್ಬರು ಟಗರು ಪೊಗರಿಗೆ ಫಿದಾ ಆಗಿದ್ದಾರೆ.
ಹೌದು, ಇಂಗ್ಲೆಂಡ್ ಆಟಗಾರ ಒವೈಸ್ ಶಾ ಟಗರು ಸಿನಿಮಾ ನೋಡಿದ್ದಾರೆ. ಇದು ಅವರು ನೋಡಿದ ಮೊದಲ ಕನ್ನಡ ಸಿನಿಮಾ. ಟಗರು ಸಿನಿಮಾ ನೋಡಿರುವ ಅವರು ಶಿವಣ್ಣ ಅವರ ಅಭಿನಯ ಮೆಚ್ಚಿಕೊಂಡಿದ್ದಾರೆ. ಸ್ಚತಃ ಶಿವರಾಜ್ ಕುಮಾರ್ ಅವರನ್ನು ಸೆಟ್ ನಲ್ಲಿ ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
@owaisshah203 International Cricket Player England ??????? Player Watching #Tagaru Movie @Gt mall pic.twitter.com/zPDuPr4JNn
— Punith (@Punithkumar23) April 16, 2018
ಜೊತೆಗೆ ಸಿನಿಮಾ ಬಗ್ಗೆ ಟ್ವೀಟರ್ ನಲ್ಲೂ ಸಂತಸ ವ್ಯಕ್ತಪಡಿಸಿರು ಶಾ,ನಾನು ಮೊಟ್ಟ ಮೊದಲು ಕನ್ನಡ ಸಿನಿಮಾ ವೀಕ್ಷಿಸಿದ್ದೇನೆ. ಗ್ರೇಟ್ ಶಿವಣ್ಣ ಎಂದು ಶಿವರಾಜ್ ಕುಮಾರ್ ಅವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
Tweet. Watched my first ever #Kannada movie #TAGARU with my Mate and the Great #Shivanna #bengaluru #movies pic.twitter.com/CAb1A8q7Ro
— Owais shah (@owaisshah203) April 17, 2018